ದೇಶ ಕಂಡ ಅದ್ಭುತ ‘ಫೈರ್ ಬ್ರಾಂಡ್ ಹಿಂದುತ್ವವಾದಿ ನಾಯಕ ಅಡ್ವಾಣಿ!

‘ಅವರಿಗಿಂದು 93ನೇ ಹುಟ್ಟು ಹಬ್ಬದ ಸಂತಸದ ದಿನ’

-ರಜತ್ ರಾಜ್ ಡಿ.ಹೆಚ್, ಪ್ರಧಾನ ಸಂಪಾದಕರು

ಎಲ್. ಕೆ ಅಡ್ವಾಣಿ ಬಿಜೆಪಿಯ ಹಿರಿಯ ಮುತ್ಸದ್ಧಿ ನಾಯಕ, ಸುಲಲಿತವಾಗಿ ವಾದ ಮಾಡುತ್ತಿದ್ದ ವಕೀಲ, ಪ್ರಕರ ವಾಗ್ಮಿ, ಹಿಂದುತ್ವದ ಫೈರ್ ಬ್ರಾಂಡ್ ನಾಯಕ. ಅವರು ಜನಿಸಿದ್ದು ಕರಾಚಿಯಲ್ಲಾದರೂ ಭಾರತದ ವಿಭಜನೆ ಆದ ಮೇಲೆ ಅವರ ಕುಟುಂಬ ಬಾಂಬೆಗೆ ಬಂದು ನೆಲೆಸಿತು. 14 ವರ್ಷದವನಾಗಿದ್ದಾಗಲೇ ಆರ್.ಎಸ್.ಎಸ್ ಸಮವಸ್ತ್ರ ಧರಿಸಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರಿದ್ದ ಅವರಲ್ಲಿ ಧಮನಿಯ ಕಣ ಕಣದಲ್ಲೂ ಹಿಂದುತ್ವವಿತ್ತು. ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಆರ್.ಎಸ್.ಎಸ್ ಜೊತೆ ಕೈಜೋಡಿಸಿ ಆರಂಭಿಸಿದ್ದ ಭಾರತೀಯ ಜನ ಸಂಘಕ್ಕೆ 1951ರಲ್ಲಿ ಸದಸ್ಯರಾಗಿ ಸೇರಿದರು ಅಡ್ವಾಣಿ.

ನಂತರ ಎಸ್.ಎಸ್ ಬಂಡಾರಿ ಅವರ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಿದರು. ಜೊತೆಗೆ ರಾಜಸ್ಥಾನದ ಜನಸಂಘದಲ್ಲಿ ಪ್ರಧಾನ ಕಾರ್ಯದರ್ಶಿಯಾದರು. 1957ರಲ್ಲಿ ದೆಹೆಲಿಗೆ ಸಂಸದೀಯ ವ್ಯವಹಾರಗಳ ಜವಾಬ್ದಾರಿ ನೋಡಿಕೊಳ್ಳಲು ತೆರಳಿದ ಅವರು ಅಲ್ಲಿ ಜನ ಸಂಘದ ದೆಹೆಲಿ ಶಾಖೆಯ ಕಾರ್ಯದರ್ಶಿಯಾಗಿ ನಂತರ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದರು. 1966ರಲ್ಲಿ ರಾಷ್ಟ್ರೀಯ ಕಾರ್ಯಕಾರಿ ಸದಸ್ಯರಾದರು. 1970ರಲ್ಲಿ ರಾಜ್ಯಸಭೆಗೆ ದೆಹೆಲಿಯಿಂದ 6ವರ್ಷಗಳ ಕಾಲ ಸದಸ್ಯರಾಗಿ ಆಯ್ಕೆಯಾದರು. ಮತ್ತೊಮ್ಮೆ 1976ರಿಂದ 1982ರವರೆಗೆ ಗುಜರಾತಿನಿಂದ ರಾಜ್ಯ ಸಭೆ ಸದಸ್ಯರಾದರು.

1975ರಲ್ಲಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ದುರಾಡಳಿತ ನಡೆಸಿ ಸರ್ವಾಧಿಕಾರಿ ಧೋರಣೆಯಲ್ಲೇ ತುರ್ತು ಪರಿಸ್ಥಿತಿಯನ್ನು ದೇಶಾದ್ಯಂತ ಹೇರಿ ಬಿಟ್ಟರು. ಆಗ ಅದನ್ನು ತೀವ್ರವಾಗಿ ವಿರೋಧಿಸಿ ಜನಸಂಘವು ದೇಶಾದ್ಯಂತ ಹೋರಾಟ, ಪ್ರತಿಭಟನೆ ನಡೆಸಿತು ಮತ್ತು ಜನಸಂಘದ ಅಪಾರ ಕಾರ್ಯಕರ್ತರು ಸೇರಿದಂತೆ ಹಲವು ನಾಯಕರು ಸೆರೆಮನೆ ಸೇರಬೇಕಾಯಿತು ಅದರಲ್ಲು ಅಡ್ವಾಣಿ ಅವರೂ ಒಬ್ಬರಾಗಿದ್ದರು. ತುರ್ತು ಪರಿಸ್ಥಿತಿ ಹೋದ ಮೇಲೆದೇಶದಲ್ಲಿ ಚುನಾವಣೆ ಆರಂಭವಾದವು. ಆಗ ಜನ ಸಂಘವು ಕೆ.ಕಾಮರಾಜ್ ಅವರ ಕಾಂಗ್ರೆಸ್(ಒ) ಪಕ್ಷ ಹಾಗು ಚರಣ್ ಸಿಂಗ್ ಅವರ ಭಾರತೀಯ ಲೋಕ ದಳದ ಜೊತೆ ವಿಲೀನವಾಗಿ ಜನತಾ ಪಕ್ಷ ಆಯಿತು. ಇಂದಿರಾ ಕಾಂಗ್ರೆಸ್ ಮಣಿಸುವುದೇ ಅದರ‌ ಮುಖ್ಯ ಗುರಿಯಾಗಿತ್ತು.

ಅಂತೆಯೇ 1977ರಲ್ಲಿ ಜನತಾ ಪಾರ್ಟಿ ಗೆದ್ದು ಬೀಗಿ ಸರಕಾರ ರಚಿಸಿತು. ಮೊರಾರ್ಜಿ ದೇಸಾಯಿ ದೇಶದ ಪ್ರಧಾನ ಮಂತ್ರಿಗಳಾದರು. ಆಗ ಲಾಲ್ ಕೃಷ್ಣ ಅಡ್ವಾಣಿ ಅವರು ಮಾಹಿತಿ ಹಾಗು ಪ್ರಸಾರ ಇಲಾಖೆ ಖಾತೆ ಸಚಿವರಾದರೆ, ವಾಜಪೇಯಿ ಅವರು ವಿದೇಶಾಂಗ ಸಚಿವರಾದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಅಡ್ವಾಣಿ ಅವರ ಚಿತ್ರ
ಪ್ರಧಾನಿ ಮೋದಿ ಹಾಗು ಅಡ್ವಾಣಿ ಜೀ ಅವರ ಚಿತ್ರ
ಗುರು ಶಿಷ್ಯರ ಭಾವುಕ‌ ಕ್ಷಣದ ಚಿತ್ರ

ಆ ಸರಕಾರ ಅಸ್ಥಿರತೆಯಿಂದ ಬಿದ್ದ ನಂತರ ಜನ ಸಂಘವು ಜನತಾ ಪಾರ್ಟಿಯಿಂದ ಬೇರೆಯಾಗಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಚಿಸಿತು. ಲಾಲ್ ಕೃಷ್ಣ ಅಡ್ವಾಣಿ ಅವರು ಬಿಜೆಪಿಯ ಪ್ರಭಾವಿ ನಾಯಕರಾದರು. 1982ರಿಂದ ಎರಡು ಬಾರಿ ಮಧ್ಯ ಪ್ರದೇಶದಿಂದ ರಾಜ್ಯಸಭೆಯನ್ನು ಪ್ರತಿನಿಧಿಸಿದರು. ಬಿಜೆಪಿಯ ಅಧ್ಯಕ್ಷರಾಗಿ ವಾಜಪೇಯಿ ಅವರು ಜಾತ್ಯಾತೀತ ನಿಲುವಿನಲ್ಲಿ ಪಕ್ಷ ನಡೆಸಲು ವಿಫಲರಾದ ಬಳಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಅಡ್ವಾಣಿರವರು ಪ್ರಕರ ಹಿಂದುತ್ವ ನಿಲುವಿನೊಂದಿಗೆ ಪಕ್ಷ ನಡೆಸಲು ಸಫಲರಾದರು. ಬಿಜೆಪಿಯ ಪ್ರಭಾವಿ ರಾಜಕಾರಣಿ ಆಗಿ ಅಡ್ವಾಣಿ ಅವರು ಗಟ್ಟಿ ನಿಲುವು ತಾಳಿದರು. ರಾಮ ನಾಮದ ಮಂತ್ರವನ್ನು ದೇಶಾದ್ಯಂತ ಜನ ಪಠಿಸುವಂತೆ ಮಾಡಿ ರಾಮ ಮಂದಿರದ ನಿರ್ಮಾಣಕ್ಕೆ ಒಳ್ಳೆಯ ವಾತಾವರಣ ಸೃಷ್ಟಿಸಿದರು. ಅವರು ಶುರು ಮಾಡಿದ ರಥಯಾತ್ರೆ ರಾಷ್ಟ್ರ ವ್ಯಾಪಿ ಬಾರೀ ಸದ್ದು ಮಾಡಿ, ಕೇಸರಿ ಧ್ವಜಗಳು ದೇಶಾದ್ಯಂತ ಹಾರಾಡಿ ರಾರಾಜಿಸುವಂತೆ ಮಾಡಿದರು. 1991ರಲ್ಲಿ ಚುನಾವಣೆಗಳು ನಡೆದು ಬಿಜೆಪಿ ಎರಡನೇ ಅತಿ ಹೆಚ್ಚು ಸೀಟುಗಳನ್ನು ಗೆದ್ದ ಪಕ್ಷವಾಗಿ ಹೊರಹೊಮ್ಮಿತು. ರಥ ಯಾತ್ರೆ ಆಗಲೂ ಚಾಲ್ತಿಯಲ್ಲೇ ಇತ್ತು. ಕಠ್ಠರ್ ಹಿಂದೂವಾದಿ ಭಾಷಣಗಳಿಂದ ಅಡ್ವಾಣಿ ಅವರು ಹಿಂದೂಗಳನ್ನು ಜಾತಿ ಭೇಧಗಳಿಲ್ಲದಂತೆ ಒಗ್ಗೂಡಿಸಿದರು. ಉಗ್ರಗಾಮಿಗಳು ರಥಯಾತ್ರೆಗೆ ಉರಿದು ಬಿದ್ದು ಮುಂಬೈ ಸರಣಿ ಸ್ಫೋಟವನ್ನು ನಡೆಸಿದರು‌. ಅದರಲ್ಲಿ ದೇಶದ್ರೋಹಿ ಡಾನ್ ದಾವೂದ್ ಇಬ್ರಾಹಿಂ ಕೈವಾಡವಿತ್ತು. 1992ರಲ್ಲಿ ರಥಯಾತ್ರೆ ಮುಗಿದು, ಬಾಬ್ರಿ ಮಸೀದಿ ನೆಲ ಸಮವಾಯಿತು. ಬಾಬ್ರಿ ಮಸೀದಿ ಧ್ವಂಸದಲ್ಲಿ ಅಡ್ವಾಣಿ ಅವರನ್ನು ಒಬ್ಬ ಆರೋಪಿ ಎಂದು ಕೋರ್ಟು ಪರಿಗಣಿಸಿತು. ಇತ್ತೀಚೆಗೆ ಸಿ.ಬಿ.ಐ ವಿಶೇಷ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿ ಅಡ್ವಾಣಿ ಅವರು ಸೇರಿದಂತೆ ಇತರೆ ನಾಯಕರನ್ನು ನಿರ್ದೋಷಿಗಳೆಂದು ತೀರ್ಪು ನೀಡಿತು.

1998ರಲ್ಲಿ ಎನ್.ಡಿ.ಎ ಮೈತ್ರಿಕೂಟದ ಬಿಜೆಪಿ ಸರಕಾರ ಅಧಿಕಾರಕ್ಕೆ ಏರಿತು. ಅಸ್ಥಿರತೆಯಿಂದಾಗಿ ಬಹುಮತ ಸಾಲದೆ ಸರಕಾರ ಉರುಳಿತು. ಪುನಃ ಚುನಾವಣೆಗಳು ನಡೆದು ಎನ್.ಡಿ.ಎ ಮೈತ್ರಕೂಟ ಮತ್ತೆ ಅಧಿಕಾರದ ಗದ್ದುಗೆ ಹಿಡಿಯಿತು. ಆ ಸರಕಾರ ಪೂರ್ಣ ಅವಧಿಯನ್ನು 2004ರಲ್ಲಿ ಮುಗಿಸಿ, ಯಶಸ್ವಿ ಆಡಳಿತ ನಡೆಸಿತು. ಮೊದಲು ಗೃಹ ಸಚಿವರಾದ ಅಡ್ವಾಣಿ ಅವರು ನಂತರ ಸರಕಾರದಲ್ಲಿ ಉಪ ಪ್ರಧಾನಿ ಸ್ಥಾನ ಪಡೆದರು. ಆ ಸರಕಾರ ಮೊದಲ ಕಾಂಗ್ರೆಸ್ ಏತರೆ ಸರಕಾರವಾಗಿ ಹಲವಾರು ಮಹತ್ತರ ಅಭಿವೃದ್ಧಿ ಕಾರ್ಯಗಳನ್ನು ಮಾಡಿತು.

ಹಿಂದುತ್ವದ ಪ್ರಖರ ನೇತಾರ ಎಲ್.ಕೆ ಅಡ್ವಾಣಿ
ಅಯೋಧ್ಯ ರಾಮ ಮಂದಿರದ ಉದ್ದೇಶಿತ ರಥಯಾತ್ರೆ ಸಂದರ್ಭ ಶಿಷ್ಯರಾಗಿದ್ದ ಮೋದಿ ಅವರೊಂದಿಗೆ ಮೋದಿ ಅವರ ಚಿತ್ರಗಳು

ತಮ್ಮ ಕ್ಷೇತ್ರದಲ್ಲಿ ಗೆದ್ದು, ಸಂಸದರಾಗಿ ಲೋಕಸಭೆಯಲ್ಲಿ ಇರುತ್ತಿದ್ದ ಇವರು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. ಸಚಾರಿತ್ರ್ಯದ ವಿವಾದಾತ್ಮಕ ನಾಯಕರಾದರೂ ರಾಷ್ಟ್ರಪತಿಗಳಾಗುವ ಎಲ್ಲಾ ಯೋಗ್ಯತೆ- ಅರ್ಹತೆಗಳೂ ಅವರಿಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರೂ ಅಡ್ವಾಣಿ ಅವರ ಗರಡಿಯಲ್ಲೇ ಬೆಳೆದು ಇಷ್ಟು ದೊಡ್ಡ ನಾಯಕರಾದರು ಈಗ ಅವರನ್ನೇ ಇಂದು ಪಕ್ಷದಲ್ಲಿ ಸೈಡ್ ಲೈನ್ ಮಾಡಿರುವುದು ಬೇಸರದ ವಿಚಾರ.

2015ರಲ್ಲಿ ಕೇಂದ್ರ ಸರಕಾರ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. ಈಗ ಬಿಜೆಪಿಯ ಹಿರಿಯ ನಾಯಕರೆಲ್ಲಾ ಮಾರ್ಗದರ್ಶಕ ಸಮಿತಿಯಲ್ಲಿ ಇದ್ದಾರೆ. ಅವರಲ್ಲಿ ಅಡ್ವಾಣಿಯೂ ಒಬ್ಬರಾಗಿದ್ದರೂ ಅದಕ್ಕೆ ಯಾವ ನಿರ್ಣಯಗಳನ್ನು ತೆಗೆದುಕೊಳ್ಳುವ ಅಧಿಕಾರವೂ ಇಲ್ಲದಾಗಿದೆ. ಏನೇ ಇರಲಿ ದೇಶದಲ್ಲಿ ರಥಯಾತ್ರೆಯಂತಹ ಒಂದು ಆಂಧೋಲನವನ್ನು ಬೇರಾವ ನಾಯಕನೂ ನಡೆಸಲಿಲ್ಲ. ಪ್ರಭಾವಿ ಹಿಂದೂ ನಾಯಕನಾಗಿ ಘರ್ಜಿಸಿದ ಅವರ ಧ್ವನಿಯಂತೆ ಬೇರೆ ನಾಯಕ ಸದ್ದು ಕೇಳಿಸಲಿಲ್ಲ. ಅಂತಹ ಧೀಮಂತ ನಾಯಕರಾದ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಇಂದು ಜನ್ಮ ದಿನದ ಶುಭಾಶಯಗಳು.

error: Content is protected !!