June 3, 2021

ಗೋವು ಕಳ್ಳತನ ಆರೋಪದ ಮೇರೆಗೆ ಕಳ್ಳನ ಬಂಧನ

ಕೊಡಗು: ಕಳೆದ ಕೆಲವು ತಿಂಗಳಿಂದ ನಾಪತ್ತೆಯಾಗಿದ್ದ ಗೋವುಗಳ್ಳ ಪೋಲಿಸರ ವಶವಾಗಿದ್ದಾನೆ.

ಕಾಕೋಟುಪಾರಂಬು ಗ್ರಾಮದ ಅಪ್ಪಚ್ಚು ಎಂಬುವವರಿಗೆ ಸೇರಿದ ಬೆಲೆಬಾಳುವ ಹಸುವನ್ನು ಕಳ್ಳತನ ನಡೆದಿರುವ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದರ ಜಾಡು ಹಿಡಿದಿದ್ದ ಪೋಲಿಸರು ಸಂಶಯಾಸ್ಪದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಿಸಿದ ಸಂದರ್ಭ ಹಲವು ಹಸು ಕಳ್ಳತನ ಮಾಡಿರುವ ಪಾಲಿಬೆಟ್ಟದ ಊರುಗುಪ್ಪೆ ನಿವಾಸಿ ಮುಜೀಬ್ ಎಂಬುದು ಖಾತ್ರಿಯಾಗಿದ್ದು,ಇದೀಗ ಈತನನ್ನು ಮತ್ತು ಕೃತ್ಯಕ್ಕೆ ಬಳಸಿದ್ದ, ಕಾರನ್ನು ವಶಕ್ಕೆ ಪಡೆಯಲಾಗಿದೆ.

error: Content is protected !!