ಕೋಣಗಳ ಕಾದಾಟದ ಕಾರಣಕ್ಕೆ ಮಾಲೀಕರು ಬಡಿದುಕೊಂಡರು!

ಕೊಡಗು: ಮೇಯಲು ಬಿಟ್ಟ ಕೋಣಗಳು ಗುದ್ದಾಡಿದ ವಿಚಾರವನ್ನು ತೆಗೆದು ಎರಡು ಕುಟುಂಬಗಳು ಬಡಿದಾಡಿಕೊಂಡ ಘಟನೆ ಸೋಮವಾರಪೇಟೆ ಸಮೀಪದ ಗರ್ವಾಲೆ ಪಂಚಾಯ್ತಿ ವ್ಯಾಪ್ತಿಯ ಗುಂಬಾರಗಡಿಯಲ್ಲಿ ನಡೆದಿದೆ.

ಒಂದೆರೆಡು ದಿನಗಳ ಹಿಂದೆ ಕೋಣಗಳು ಗುದ್ದಾಡಿಕೊಂಡಿದ್ದು, ಗ್ರಾಮದ ದಾರಿಯಲ್ಲಿ ಬರುತ್ತಿದ್ದ ಒಂದು ಕೋಣದ ಮಾಲೀಕ 60 ವರ್ಷದ ವೃದ್ದ ಬಿದ್ದಪ್ಪರ ಮೇಲೆ ಮತ್ತೊಂದು ಕೋಣದ ಮಾಲೀಕ ಮಣಿ ಮತ್ತು ಗಿರೀಶ್ ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆ ಬೆದರಿಕೆಯೊಡ್ಡಿದ್ದಾರೆ ಎಂದು ದೂರಿನಲ್ಲಿ ದಾಖಲು ಮಾಡಿದ್ದಾರೆ. ಗಂಭೀರ ಗಾಯಗೊಂಡ ಬಿದ್ದಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

error: Content is protected !!