fbpx

ಕಾವೇರಿ ಸಂಕ್ರಮಣ (ಕಾವೇರಿ ಹಬ್ಬದ) ವಿಶೇಷತೆ..

✍🏻: ಉಳುವಾರನ ರೋಶನ್ ವಸಂತ್, ಕಾಂತೂರು.

ಕೊಡ್ಗ್ ನ ಕುಲದೇವ್ರು , ಕೊಡ್ಗ್ ನ ಜೀವನದಿ ಅವ್ವ ಕಾವೇರಿ ಹುಟ್ಟಿದ ಜಾಗ ಭಾಗಮಂಡಲ ತಲಕಾವೇರಿನ ಪವಿತ್ರ ತೀರ್ಥ ಕುಂಡಿಕೆಲ್ಲಿ ಅವ್ವ ಕಾವೇರಿ ತೀರ್ಥರೂಪಲ್ಲಿ ಬಂದ್ ಭಕ್ತರಿಗೆ ದರ್ಶನ ಕೊಡುವ ಪುಣ್ಯ ದಿನನೆ ಈ ಕಾವೇರಿ ಸಂಕ್ರಮಣ (ಕಾವೇರಿ ಹಬ್ಬ). ಈ ಹಬ್ಬ ಸಾಮಾನ್ಯ ಅಗಿ ಅರೆಭಾಸೆ ತಿಂಗಗಳ ಬೆಳ್ತಿಂಗಳ್ಲಿ ಬಂದದೆ ಅಂದರೆ ಆಕ್ಟೋಬರ್ ತಾರೀಖ್  ಕ್ಕೆ. ಈ ಸಲ ಇದೆ ತಿಂಗ ತಾರೀಖ್ 17 ರ ಶನಿವಾರ ದಿನ ಹೊತ್ತಾರೆ  7 ಗಂಟೆ 3 ನಿಮ್ಸಕ್ಕೆ ಕನ್ಯಾ ಲಗ್ನಲ್ಲಿ ಅವ್ವ ಕಾವೇರಿ ತೇರ್ಥ ರೂಪಲ್ಲಿ ಬಂದ್ ಭಕ್ತರಿಗೆ ದರ್ಶನ ಕೊಡುವ ದಿನನ ಗೊತ್ತು ಮಾಡಿಯೊಳ್ಳೊ.


ಗೌಡ ಜನಾಂಗಲ್ಲಿ ನಾವು ಅಚರಣೆ ಮಾಡುವ ಎಲ್ಲಾ ಹಬ್ಬ – ಹರಿದಿನಗ ಭತ್ತದ ಕೃಷಿಯೊಟ್ಟಿಗೆ ಒಳ್ಳ ಸಂಮಂದನ ಮಾಡಿಕಂಡುಟ್ಟುತ ಹೇಳ್ರೆ ತಪ್ಪಾಕಿಲೆ. ಯಾಕೆತ ಹೇಳ್ರೆ ನಾಟಿ ನಟ್ಟ್ ಅದ್ ಕರಿನಾಟಿ ಹತ್ತಕಾನ ಸೋಣ ತಿಂಗಳ್ಲಿ ಕೊಡ್ಗ್ ನ ಸಾಂಪ್ರದಾಯಿಕ ಗೌಜಿ ಗದ್ದಳದ ಹಬ್ಬ ಕೈಲ್ ಮೂಹೂರ್ತ ಹಬ್ಬ ಬಂದದೆ. ಹಂಗೆ ನಟ್ಟ ನಾಟಿ ಕದ್ರ್ ಹೋಕಾನ ಬೆಳ್ತಿಂಗಳ್ಲಿ ಪವಿತ್ರ ಹಬ್ಬ ಕಾವೇರಿ ಹಬ್ಬ ಬಂದದೆ. ಹಂಗೆ ನಟ್ಟ ಬೆಳೆ ತೆನೆ ಬಾಗಕಾನ ಜಾಳ್ದೆ ತಿಂಗಳ್ಲಿ ಕೊಡ್ಗ್ ನ ಸುಗ್ಗಿ ಹಬ್ಬ ಹುತ್ತರಿ ಹಬ್ಬ ಬಂದದೆ.

ಸೂರ್ಯ ತುಲಾ ರಾಶಿನ ಸೇರುವ ಪುಣ್ಯ ಕಾಲನೇ ತುಲಾ ಸಂಕ್ರಮಣ. ಕಾವೇರಿ ಸಂಕ್ರಮಣಕ್ಕೆ ಒಂದು ದಿನಕ್ಕೆ ಮುಂದೆತ ಹೇಳ್ರೆ ತೇರ್ಥ ಬಾಕೆ ಒಂದು ದಿನಕ್ಕೆ ಮುಂದೆ ಕೊಡ್ಗ್ ನ ಜನ ಗದ್ದೆ , ತ್ವಾಟ ,ಮನೆನ ಮುಂದೆ , ಭತ್ತದ ಕಣ, ಹಟ್ಟಿ , ಬಾಮಿ ಇಂತ ಜಾಗೆಗಳಿಗೆಲ್ಲ ಬೆತ್ತ್ ಹಾಕಿವೆ. ತ್ವಾಟಗಳ ಕೆಲವು ಮರಗಳ್ಲಿ , ಕಾಡ್ಗಳ್ಲಿ ಸಿಕ್ಕುವ ಬೆತ್ತ್ ನ ತಂದ್ ಮನಾರ ಕೀಸಿ ಬೆತ್ತ್ ಬೊಳ್ಳಿನೊಟ್ಟಿಗೆ ಆ ಸಮಯಲ್ಲಿ ಸಿಕ್ಕುವ ಬೆತ್ತ್ ಹೂನೊಟ್ಟಿಗೆ ಹಾಕಿವೆ. ಕೆಲವು ಕುಟುಂಬಗಳ್ಲಿ ಹಿರಿಯವುತ ಹೇಳ್ರೆ ಪಟ್ಟೆದಾರರ್ ಇಲ್ಲರೆ ಕುಟುಂಬದ ಸದಸ್ಯರ್ ಯಾರಾರ್ ಆ ವರ್ಷ ಸ್ವರ್ಗಸ್ಥರಾದರೆ ಆ ವರ್ಷ ಬೆತ್ತ್ ಹಾಕುವ ಕ್ರಮ ಇಲ್ಲೆ.

ಹಬ್ಬದ ದಿನ ಕೆಲವು ಕುಟುಂಬದವು ಹುತ್ತೇರಿ ಹಬ್ಬಲಿ ಕದರ್ ತೆಗೀವ ಗದ್ದೆಲ್ಲಿ ಹಿಟ್ಟ್ ಮಡ್ಗಿವೆ. ಅದ್ ಹೇಗೆಂತ ಹೇಳ್ರೆ ತ್ರಿಕೋನಕಾರಲ್ಲಿ ಬೆತ್ತ್ ಕುತ್ತಿ ಅದ್ಕೆ ನೋಕಟೆ ಬೊಳ್ಳಿನ ಸುತ್ತಿ ಹಬ್ಬದಂದ್ ಹೊತ್ತಾರೆನ ಜಾವ ಕೋಳಿ ಕೂಂಗುವ ಹೊತ್ತುಗೆ ಎದ್ದ್ ದೋಸೆ ಹೋಯಿದ್ದ್ ಅದನ ಗದ್ದೆಗೆ ತಕ್ಕಂಡ್ ಹೋಗಿ ಬೆತ್ತ್ ನ ಮ್ಯಾಲೆ ಕೊಡಿ ಬಾಳೆಲೆಲ್ಲಿ ತೆಂಗಿನಕಾಯಿ , ಬಾಳೆ ಹಣ್ಣ್ , ತುಪ್ಪ ಸಕ್ಕರೆನೊಟ್ಟಿಗೆ ಹಿಟ್ಟ್ ನ ಮಡ್ಗಿ ದೀಪ ಹೊತ್ಸಿ ಊದು ಬತ್ತಿ ಹೊತ್ಸಿ ಕೂ, ಕೂ, ಕೂ, ತೇಳಿ ಮೂರು ಸಲ ಜೋರಾಗಿ ಕರ್ದವೆ.

ಇದ್ ಯಾಕೆತ ಹೇಳ್ರೆ ಪಾಂಡವರ ಭೂಮಿ ಆದರ್ಂದ ಆಗ ಅವು ವನವಾಸಲ್ಲಿದ ಹೊತ್ತುಲ್ಲಿ ಕಾವೇರಿ ತೇರ್ಥ ಬಂದದರ್ಂದ ಪಾಂಡವುಕ್ಕೆ ಹಿಟ್ಟ್ ಮಡ್ಗಿ ಕರಿಯೋದು ಅಗ ಅವು ಬಂದ್ ಮಡ್ಗಿದ ಹಿಟ್ಟ್ ನ ತಿಂದ್ ಹೋದವೆತ ಹೇಳುವ ನಂಬಿಕೆ ಉಟ್ಟು ಅದರ್ಂದ ಈ ಕ್ರಮ ಅಂದ್ಂದ ಇಂದ್ನವರೆಗೂ ನಡ್ಕಂಡ್ ಬಂದುಟ್ಟ್ ತ ಹಿರಿಯವು ಹೇಳಿವೆ. ಈ ಕ್ರಮ ಇಗನೂ ರೂಡಿಲಿ ಉಟ್ಟು.

ಹಬ್ಬದ ದಿನ ಕಾವೇರಿಗೆ ಹೋದವು ಸತ್ತವರ ಹೆಸ್ರ್ ಲಿ ಕಾವೇರಿ ಸಂಗಮಲಿ ಪಿಂಡ ಹಾಕಿವೆ ಮತ್ತೆ ಕೂದಲು ತಗ್ದವೆ ಹಂಗೆ ಸಣ್ಣ ಮಕ್ಕಳ ಹುಟ್ಟು ಕೂದ್ಲುನು ಕಾವೇರಿಲಿ ತೆಗಿವ ಕ್ರಮ ಉಟ್ಟು. ಅಂದ್ನ ದಿನ ಕಾವೇರಿಗೆ ಹೋದವು ಕಾವೇರಿಂದ ತೇರ್ಥನ ತಂದ್ ದೇವ್ರ ದೀಪ ಹೊತ್ಸಿ ಅಲ್ಲಿ ಮಡ್ಗಿ ಮನೆಗೆ ಎಲ್ಲ ಹಾಕಿ ಅಲ್ಲಿಂದ ತೇರ್ಥ ಪ್ರಸಾದನ ಮನೆ ಮನೆಗೆ ತಕ್ಕಂಡ್ ಹೋಗಿ ಹಂಚುವ ಕ್ರಮ ಉಟ್ಟು. ಇದಿಷ್ಟ್ ಕಾವೇರಿ ಸಂಕ್ರಮಣದ ವಿಶೇಷತೆ ಅಟ್ಟು.

ಪಂಡ್ ಕಾಲಂದ ನಡ್ಕಂಡ್ ಬಂದ ನಮ್ಮ ಹಬ್ಬ ಹರಿದಿನಗಳ ವಿಶೇಷತೆನ ತಿಳ್ಕಂಡ್ ಅದನ ಕ್ರಮ ಪ್ರಕಾರ ನಡ್ಸಿಕಂಡ್ ಹೋದು ಅದರ ಚರಿತ್ರೆನ ತಿಳ್ಕೊಣ್ಣ್ ದ್ ಹಂಗೆ ನಮ್ಮ ಮುಂದೆನ ಪೀಳಿಗೆನವುಕ್ಕೆ ಅದನ ಹೇಳಿ ಕೊಡ್ದು ಉಳ್ಸಿ ಬೆಳ್ಸ್ದು ನಮ್ಮ ಎಲ್ಲಾವರ ಮುಖ್ಯ ಕರ್ತವ್ಯ ಅಟ್ಟು.

error: Content is protected !!