ಕಾವೇರಿ ಪೊಮ್ಮಕ್ಕಡ ಕೂಟದ ವತಿಯಿಂದ ಕಕ್ಕಡ ಹದಿನೆಂಟು ಆಚರಣೆ

ಗೋಣಿಕೊಪ್ಪದಲ್ಲಿ ಕಾವೇರಿ ಪೊಮ್ಮಕ್ಕಡ ಕೂಟದ ವತಿಯಿಂದ ಕಕ್ಕಡ ಹದಿನೆಂಟು ಆಚರಣೆ ನಡೆಸಲಾಯಿತು.

ವಿಜು ದೇವಯ್ಯರವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಕಕ್ಕಡ ಸಂದರ್ಭ ತಯಾರಿಸಲಾಗುವ ವಿವಿಧ ಖಾಧ್ಯಗಳ ಸ್ಪರ್ಧೆಯನ್ನು ಮಹಿಳೆಯರಿಗೆ ಏರ್ಪಡಿಸಲಾಗಿದ್ದು ನಿರೀಕ್ಷೆಗೂ ಮೀರಿ ಹತ್ತಾರು ಬಗೆಯ ಖಾದ್ಯಗಳು ಸ್ಪರ್ಧೆಯಲ್ಲಿದ್ದವು.

ಕಾರ್ಯಕ್ರಮ ಉದ್ಘಾಟಿಸಿದ ಎಂಎಲ್ಸಿ ವೀಣಾ ಅಚ್ಚಯ್ಯ ಪಾರಂಪರಿಕ ತಿಂಡಿ ತಿನಿಸು,ಆಚಾರ ವಿಚಾರಗಳನ್ನು ಉಳಿಸುವ ನಿಟ್ಟಿನಲ್ಲಿ ಮಹಿಳೆಯರ ಪಾತ್ರ ಮುಖ್ಯ ಎಂದರು. ಬಳಿಕ ತಯಾರಿಸಿದ್ದ ಖಾದ್ಯಗಳನ್ನು ವೀಕ್ಷಿಸಿ ತೀರ್ಪುದಾರರಾಗಿ ಸ್ವತಃ ವೀಢ ಅಚ್ಚಯ್ಯ ಅಂಕಗಳನ್ನು ನೀಡಿ ವಿಜೇತರಿಗೆ ಬಹುಮಾನ ವಿತರಿಸಿದರು.

error: Content is protected !!