ಕಣ್ಮನ ಸೆಳೆಯುತ್ತಿರುವ ಚಿಕ್ಲಿಹೊಳೆ

ಸುತ್ತಲೂ ಹಚ್ಚಹಸುರಿನ ಕಾಡು, ಒಂದೆಡೆ ಬೃಹದಾಕಾರದ ಬೆಟ್ಟ, ಆ ಬೆಟ್ಟದಿಂದ ಹರಿದು ಬಂದು ಜಲಾಶಯದಲ್ಲಿ ಸಂಗ್ರಹವಾಗುವ ನೀರು,ಜಲಾಶಯದ ಹಿನ್ನೀರಿನಲ್ಲಿ ಒಣಗಿದ ಮರಗಳ ಆಕರ್ಷಣೆ. ಅದೃಷ್ಟವಿದ್ದರೆ ನೀರು ಕುಡಿಯಲು ಬರುವ ಕಾಡಾನೆಗಳ ದರ್ಶನ, ಪ್ರಮುಖ ಆಕರ್ಷಣೆ ಅರ್ಧವೃತ್ತಾಕರದ ಕಟ್ಟೆ ಅದರಲ್ಲಿ ಹಾಲ್ನೊರೆ ಸೂಸುತ್ತಾ ಧುಮ್ಮಿಕ್ಕುವ ನೀರು.
ಹೌದು, ಇದು ನಮ್ಮ ಜಿಲ್ಲೆಯ ಮಳೆಗಾಳದ ಬೆಡಗಿಯ ಚಿತ್ರಣ.

ಮಳೆಗಾಲ ಆರಂಭವಾಗುತ್ತಿದ್ದಂತೆ ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶದಿಂದ ಹರಿದು ಬರುವ ನೀರು ಚಿಕ್ಲಿಹೊಳೆ ಜಲಾಶಯಕ್ಕೆ ಸೇರುತ್ತದೆ.ಜಿಲ್ಲೆಯ ಏಕೈಕ ಜಲಾಶಯ ಹಾರಂಗಿ ನಿರ್ಮಾಣವಾಗುತ್ತಿದ್ದ ಸಂದರ್ಭದಲ್ಲೆ ಇದರ ಯೋಜನೆ ನಡೆದು 1985ರಲ್ಲಿ ಲೋಕಾರ್ಪಣೆಗೊಂಡಿದೆ.72.6 ಮೀಟರ್ ಅಡಿ ಸಾಮರ್ಥ್ಯವಿರುವ ಈ ಕಿರು ಜಲಾಶಯ ನಂಜರಾಯಪಟ್ಟಣ ವ್ಯಾಪ್ತಿಗೆ ಸೇರುತ್ತದೆ.

ಈ ಭಾಗದಲ್ಲಿ ನೀರು ಪೋಲಾಗುವುದನ್ನು ತಪ್ಪಿಸುವ ಸಲುವಾಗಿ ಕಿರು ಡ್ಯಾಂ ನಿರ್ಮಾಣ ಮಾಡಿ ಕಿರು ನಾಲೆಗಳ ಮೂಲಕ ಕೃಷಿ ಜಮೀನುಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ.ವಿಶೇಷ ಎಂದರೆ ಯಾವುದೇ ಕ್ರೆಸ್ಟ್ ಗೇಟ್ ಇಲ್ಲದೆ ನದಿಗೆ ಹೊರಬಿಡಲಾಗುವ ನೀರು ವೃತ್ತಾಕಾರದ ಕಟ್ಟೆ ಮೇಲಿಂದ ಧುಮ್ಮಿಕ್ಕುವುದು ನೋಡುವುದೇ ಒಂದು ಚಂದ.

ದೇವಾಲಯವಿತ್ತು,ಜಾತ್ರೆಯೊ ನಡೆಯುತ್ತಿತ್ತು:

ಇದು ಮಳೆಗಾಲದ ಚಿತ್ರಣವಾದರೆ ಬೇಸಿಗೆಯಲ್ಲಿ ಮತ್ತೊಂದು ವಿಶೇಷವಿದೆ.ಜಲಾಶಯದ ಹಿನ್ನೀರಿನಲ್ಲಿ ಒಣಗಿದ ಮರಗಳು,ರಸ್ತೆಗಳು ಹಾಗೆ ಒಂದು ಶಿವನ ದೇವಾಲಯ,ದೇವಾಲಯದ ಬಳಕೆಗಿದ್ದ ಬಾವಿಯನ್ನೂ ನೋಡುವುದಕ್ಕೆ ಸಾಧ್ಯವಿದೆ.


ಇದಕ್ಕೆ ಕಾರಣ ಜಲಾಶಯ ನಿರ್ಮಾಣದ ವೇಳೆ ಹಿನ್ನೀರಿನ ಭಾಗದಲ್ಲಿ ಪುಟ್ಟ ಗ್ರಾಮವೊಂದಿತ್ತು,ಸದ್ಯಕ್ಕೆ ಇಲ್ಲೇ ಪಕ್ಕಕ್ಕೆ ಸ್ಥಳಾಂತರ ಗೊಂಡಿದ್ದು,ಹಳೇ ದೇವಾಲಯದಲ್ಲಿ ಇದ್ದ ಮೂಲ ಶಿವಲಿಂಗವನ್ನೇ ದಡದಲ್ಲಿ ಮತ್ತೊಂದು ದೇವಾಲಯ ನಿರ್ಮಾಣ ಮಾಡಿ ಜೀರ್ಣೋದ್ದಾರ ಮಾಡಲಾಗಿದೆ.ಅಂದು ಹಿನ್ನೀರಿನ ಭಾಗದಲ್ಲಿ ನಡೆಯುತ್ತಿದ್ದ ಜಾತ್ರೆ ಉತ್ಸವಗಳು,ಇದೀಗ ಈ ಹೊಸ ದೇವಾಲಯದಲ್ಲಿ ಮುಂದುವರೆಯುತ್ತಾ ಬಂದಿದೆ.
ಇನ್ನು ನೀರು ಕಡಿಮೆಯಾಗುತ್ತಿದ್ದಂತೆ
ಸೂರ್ಯಾಸ್ಥದ ಸಂದರ್ಭ ಚಿನ್ನದ ನೀರು ಹೊಯ್ದಂತೆ ಕಾಣುವ ಹಿನ್ನೀರು, ಬೆಳ್ಳಕ್ಕಿಗಳು, ನೀರು ಕಾಗೆಗಳ ಹಾರಟ,ತೆಪ್ಪದಲ್ಲಿ ಮೀನಿನ ಬೇಟೆ ಎಲ್ಲವೂ ಕಾಣಲು ಸಾಧ್ಯ.ಬೆಳಗೆ ಮತ್ತು ಸಂಜೆ ಹೊತ್ತಿನಲ್ಲಿ ಕಾಡಾನೆಗಳು ನೀರು ಕುಡಿಯಲು ಬರುವುದೂ ಇದೆ.

ಅದೃಷ್ಟವಿದ್ದರೆ ಕಾಡುಕೋಣ, ಹುಲಿ ದರ್ಶನವೂ ಸಾಧ್ಯವಿದೆ.

ಸದ್ಯ ಕೊರೋನಾ ಕಾರಣ ಹೆಚ್ಚೇನು ಪ್ರವಾಸಿಗರು ಕಾಣಿಸುತ್ತಿಲ್ಲ.ಇಲ್ಲವಾದರೆ ರಜೆ ಸಿಕ್ಕಿದರೆ ಸಾಕು ಒಂದು ಒಳ್ಳೆಯ ಪಿಕ್ನಿಕ್ ಸ್ಪಾಟ್ ಆಗಿ ಮಾರ್ಪಟ್ಟಿರುತ್ತದೆ. ಜಲಾಶಯದಲ್ಲಿ ಸೂಕ್ತ ನಿರ್ವಾಹಣೆ ಅಗತ್ಯವಿದೆ, ನಾಲೆಗಳು ದುರಸ್ಥಿ ಮಾಡಿದಲ್ಲಿ ಕೃಷಿ ಜಮೀನಿಗೆ ಹೆಚ್ಚಿನ ಅನುಕೂಲವಾಗಲಿದೆ,ಹಾಗೆ ಪುಟ್ಟದಾದ ಉದ್ಯಾನ, ಕಾರಂಜ,ಈ ರೀತಿಯ ಅಭಿವೃದ್ದಿ ಕಾರ್ಯವಾಗಬೇಕಿದೆ.

ಹಾರಂಗಿ ಜಲಾಷಯದ ಅಭಿವೃದ್ದಿ ಸಂದರ್ಭ ಈ ಜಲಾಶಕ್ಕೂ ಒಂದಿಷ್ಟು ಹಣವೂ ಬಿಡುಗಡೆಯಾಗಿತ್ತು. ದುಬಾರೆ ಆನೆ ಶಿಬಿರ ಮಾದರಿಯಲ್ಲಿ,ಹಿನ್ನೀರಿನ ಪ್ರದೇಶದಲ್ಲಿ ಆನೆ ಕ್ಯಾಂಪ್ ಮಾಡುವ ಪ್ರಸ್ಥಾವನೆಯೂ ಇದೆ…

error: Content is protected !!
satta king chart