ಇಂಗುಗುಂಡಿ ಮುಚ್ಚುತ್ತಿರುವ ಅರಣ್ಯ ಇಲಾಖೆ

ಚಿತ್ರಗಳು: ಸುನಿಲ್ ಕುಯ್ಯಮುಡಿ

ಕೊಡಗು: 2020ರ ಮಳೆಗಾಲದಲ್ಲಿ ರಾಜ್ಯವನ್ನೇ ಬೆಚ್ಚಿಬೀಳಿಸಿದ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯ ಗಜಗಿರಿ ಬೆಟ್ಟ ಕುಸಿತ ಪ್ರಕರಣದಲ್ಲಿ ಜೀವ ಹಾನಿ, ಆಸ್ತಿ ಗಳ ಹಾನಿಗೆ ಅರಣ್ಯ ಇಲಾಖೆ ನಿರ್ಮಿಸಿರುವ ಇಂಗು ಗುಂಡಿಗಳೇ ಕಾರಣ ಎಂದು ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ ನೀಡಿದ ವರದಿ ಬಂದಿರುವ ಪರಿಣಾಮ ಸ್ಥಳೀಯರ ಸಹಾಯದಿಂದ ಮುಚ್ಚಲ್ಪಡುತ್ತಿದೆ. ಅಚ್ಚರಿಯಂದರೆ ಈ ಭಾಗದಲ್ಲಿ 650 ಇಂಗುಗುಂಡಿಗಳನ್ನು ಮುಚ್ಚಲ್ಪಟ್ಟಿದೆ ಇವುಗಗಳಲ್ಲಿ ತಲಕಾವೇರಿ ಪ್ರಧಾನ ಅರ್ಚರಾಗಿದ್ದ ನಾರಯಣಾಚಾರ್ ಮತ್ತು ಕುಟುಂಬ ಹಾಗು ಇಬ್ಬರು ಅರ್ಚಕರ ಸಾವಿಗೆ ಕಾರಣವಾಗಿದ್ದ ಮೇಲ್ಬಾಗದ್ಮ ಮೂರು ಇಂಗಗುಂಡಿಗಳೂ ಸೇರಿವೆ. ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ಸೇರಿದಂತೆ ಸಾಕಷ್ಟು ಲೋಪಗಳ ಬಗ್ಗೆ ವರದಿಗಳನ್ನು ಆದರಿಸಿರುವ ಭೂ ವಿಜ್ಞಾನ ತಜ್ಞರು ಸಲ್ಲಿಕೆಯಾದ ಅಂತಿಮ ವರದಿ ಆಧರಿಸಿ ಮುಂದಿನ ಮಳೆಗಾಲದ ಒಳಗಾಗಿ ತೆಗೆದುಗೊಳ್ಳಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

2014-15 ರಲ್ಲಿ ಕೊರೆಯಲಾದ 650ಕ್ಕೂ ಹೆಚ್ಚು ಇಂಗುಗುಂಡಿಗಳು ಇದ್ಧವು ಮತ್ತು ಪರಿಸರಕ್ಕೆ ಮಾರಕವಾಗಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ ಎಂದು ವರಿಯಲ್ಲಿ ಸ್ಪಷ್ಟಪಡಿಸಿದ ಹಿನ್ನಲೆ ಕಳೆದ 26 ದಿನಗಳಿಂದ ಈ ಕಾರ್ಯ ನಡೆಯುತ್ತಿದ್ದು,ಭೂ ಪ್ರದೇಶ ನಾಶವಾದ ಕಡೆಗಳಿಗೆ ಕಾಡು ಮರಗಳ 50 ಸಾವಿರದಷ್ಟು ಸಸಿಗಳನ್ನು ಸಂಪಾಜೆಯಿಂದ ತರೆಸಲಾಗಿದ್ದು ,ಮಣ್ಣು ಕುಸಿತ ತಡೆಯುವ ವೆಟಿವರ್ ಹುಲ್ಲು ಬೆಳೆಸುವ ಕಾರ್ಯ ನಡೆಸಲಾಗುತ್ತಿದೆ.

error: Content is protected !!