ಅಶು ಅಡುಗೆ ಮನೆ
ನಮಸ್ಕಾರ
ಇಂದು ನನ್ನ ಅಶು ಅಡುಗೆ ಅರಮನೆಯಿಂದ
ಕೆಸುವಿನೆಲೆಯ ಪತ್ರೊಡೆಯ ರೆಸಿಪಿಯನ್ನು ತಂದಿದ್ದೇನೆ.ಪತ್ರೊಡೆಯನ್ನು ಹಲವು ವಿಧದಲ್ಲಿ ಮಾಡುತ್ತಾರೆ,ಅದರಲ್ಲಿ ಇದು ಒಂದು ವಿಧ
ಬೇಕಾಗುವ ಪದಾರ್ಥಗಳು :
ಕೆಸುವಿನೆಲೆ 10 ,ತೆಂಗಿನತುರಿ 1 ಕಪ್ ,ಅಕ್ಕಿ ಒಂದು ಪಾವು ,ಎರಡು ಹಿಡಿ ತೊಗರಿಬೇಳೆ ಎರಡು ಹಿಡಿ ,ಹೆಸರುಬೇಳೆ ,ಹುಣಸೆಹಣ್ಣು ನಿಂಬೆ ಗಾತ್ರದ್ದು ,ಒಣಮೆಣಸಿನಕಾಯಿ ಹತ್ತರಿಂದ ಹನ್ನೆರಡು ,ಇಂಗು ಕಡ್ಲೆ ಗಾತ್ರದ್ದು ,2 ಚಮಚ ಕೊತ್ತಂಬರಿ ಬೀಜ ,1 ಚಮಚ ಜೀರಿಗೆ
ಮಾಡುವ ವಿಧಾನ :
ಅಕ್ಕಿ ಮತ್ತು ಬೇಳೆಯನ್ನು ನೆನೆಸಿಕೊಳ್ಳಿ ನಂತರ ತೆಂಗಿನತುರಿ ಹುಣಸೆಹಣ್ಣು ,ಒಣಮೆಣಸಿನಕಾಯಿ ,ಅರಸಿನ ಪುಡಿ ,ಇಂಗು ರುಚಿಗೆ ತಕ್ಕಷ್ಟು ಉಪ್ಪು ,ಕೊತ್ತಂಬರಿ ಬೀಜ ,ಜೀರಿಗೆಯೊಂದಿಗೆ ನುಣ್ಣಗೆ ರುಬ್ಬಿಕೊಳ್ಳಿ.ಕೆಸುವಿನ ಎಲೆಯನ್ನು ಹಿಂಬದಿಯ ನಾರನ್ನು ತೆಗೆದು ಇಡಿ,ಹೀಗೆ ಶುಚಿಗೊಳಿಸಿದ ಕೆಸುವಿನೆಲೆಯ ಹಿಂಬದಿಗೆ ರುಬ್ಬಿಕೊಂಡ ಹಿಟ್ಟನ್ನು ಸವರಿ ಒಂದರಮೇಲೊಂದರಂತೆ ಮತ್ತು ಪಕ್ಕಕ್ಕೆ ಇಟ್ಟು ,ಹಿಂಬದಿಗೆ ಹಿಟ್ಟನ್ನು ಸವರಿ ,ಮಡಿಚಿಕೊಂಡು ಸುರುಳಿಸುತ್ತಿ ಕೊಳ್ಳಿ ,ನಂತರ ಇಡ್ಲಿ ಪಾತ್ರೆಯಲ್ಲಿ ಹಬೆಯಲ್ಲಿ ಬೇಯಿಸಿಕೊಳ್ಳಿ .ಇದನ್ನು ಬಿಸಿಯಾಗಿ ತೆಂಗಿನೆಣ್ಣೆಯ ಜೊತೆಯಲ್ಲಿ ,ಇಲ್ಲವೇ ತವಾದಲ್ಲಿ ಶ್ಯಾಲೋ ಫ್ರೈ ಮಾಡಿ ,ಸಣ್ಣಗೆ ಹೆಚ್ಚಿ ,ಬೆಲ್ಲ ಹಾಕಿ ,ತೆಂಗಿನ ತುರಿಯನ್ನು ಹಾಕಿ ,ಒಗ್ಗರಣೆ ಮಾಡಿ ಸವಿಯಬಹುದು.ಊಟದ ಜೊತೆಯಲ್ಲಿ ಈ ಪತ್ರೊಡೆ ಯು ಖಾರ ಖಾರವಾಗಿ ಚೆನ್ನಾಗಿರುತ್ತದೆ