ಅರ್ಥಗರ್ಭಿತವಾಗಿ ನಡೆದ ಕಾರ್ಯಕ್ರಮ
ಕುಶಾಲನಗರದ ವಾಸವಿ ಯುವ ಜನ ಸಂಘ ಮತ್ತು ವಾಸವಿ ಯುವಜನ ಚಾರಿಟೇಬಲ್ ಟ್ರಸ್ ವತಿಯಿಂದ ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಹಯೋಗದೊಂದಿಗೆ ಆಜಾದಿ ಕಾ ಅಮೃತೋತ್ಸವ ಮತ್ತು ಯುವಜನ ಸಂಘದ 55 ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ನೆನಪಿಗಾಗಿ ಗಿಡ ನೆಡುವ ಮೂಲಕ ಶಾಸಕ ಅಪ್ಪಚ್ಚು ರಂಜನ್ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು ಹಸಿರಿದ್ದರೆ ಮಾತ್ರ ಉಸಿರು, ಪ್ರತಿಯೊಬ್ಬ ನಾಗರಿಕರು ಗಿಡ ನೆಟ್ಟು ಪರಿಸರ ಉಳಿಸುವ ಕಾಳಜಿ ವಹಿಸಬೇಕು.,ಇದು ಅವರ ಜವಬ್ದಾರಿಯಾಗಬೇಕು ಎಂದು ಕರೆ ನೀಡಿದರು.