fbpx

ಅರೆಭಾಷೆ ಸಂಸ್ಕೃತಿ ಹಾಗು ಸಾಹಿತ್ಯ ಅಕಾಡಮಿ ವತಿಯಿಂದ ಅರ್ಥಪೂರ್ಣ ಕಾರ್ಯಕ್ರಮ

ದಿ.23ರಂದು ಶನಿವಾರ 11 ಗಂಟೆಗೆ ಪೆರಾಜೆಯ ಅನ್ನಪರ‍್ಣೇಶ್ವರಿ ಕಲಾಮಂದಿರದಲ್ಲಿ ಅರೆಭಾಷೆ ಪಾರಂಪರಿಕ ವಸ್ತುಕೋಶ ಮತ್ತು ಅರೆಭಾಷೆ ನಾಟಕ, ಯಕ್ಷಗಾನ, ಕಥೆ, ಪ್ರವಾಸ ಕಥನ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ಅಕಾಡೆಮಿ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ ಅವರ ಸಭಾಧ್ಯಕ್ಷತೆಯಲ್ಲಿ ನಡೆಯಲಿರುವ ಕರ‍್ಯಕ್ರಮದಲ್ಲಿ ರ‍್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಅಂಬಳಿಕೆ ಹಿರಿಯಣ್ಣ ಅವರು ಪುಸ್ತಕ ಬಿಡುಗಡೆ ಮಾಡಲಿದ್ದು, ಕೃತಿ ಪರಿಚಯವನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಮಾಧವ ಪೆರಾಜೆ ಅವರು ಮಾಡಲಿದ್ದಾರೆ. ಕರ‍್ಯಕ್ರಮದಲ್ಲಿ ಅತಿಥಿಗಳಾಗಿ ಶ್ರೀ ನಾಗೇಶ್ ಕುಂದಲ್ಪಾಡಿ, ಅಧ್ಯಕ್ಷರು ಅಕ್ರಮ-ಸಕ್ರಮ ಸಮಿತಿ ಮಡಿಕೇರಿ ಶ್ರೀಮತಿ ಚಂದ್ರಕಲಾ ಬಳ್ಳಡ್ಕ,ಅಧ್ಯಕ್ಷರು ಗ್ರಾಮ ಪಂಚಾಯತ್, ಪೆರಾಜೆ, ಶ್ರೀ ಪದ್ಮಯ್ಯ ಕುಂಬಳಚೇರಿ ಅಧ್ಯಕ್ಷರು, ಗೌಡ ಗ್ರಾಮ ಸಮಿತಿ, ಪೆರಾಜೆ ಇವರು ಉಪಸ್ಥಿತರಿರುವರು.

ಅರೆಭಾಷೆ ಪಾರಂಪರಿಕ ವಸ್ತುಕೋಶ: ಅರೆಭಾಷಿಗರ ಜನ ಸಮುದಾಯದವರು ಹಿಂದಿನ ಕಾಲದಲ್ಲಿ ಉಪಯೋಗಿಸುತ್ತಿದ್ದ ವಸ್ತುಗಳು, ಆಧುನಿಕತೆಯ ಸಂರ‍್ಭದಲ್ಲಿ ನಾಶವಾಗಿ ಹೋಗಿದೆ. ಅಂತಹ ವಸ್ತುಗಳನ್ನು ಛಾಯಾಚಿತ್ರ ತೆಗೆದು ಆ ವಸ್ತುಗಳ ಉಪಯೋಗ ಮತ್ತು ಇತರ ವಿವರಗಳನ್ನು ಪುಸ್ತಕದಲ್ಲಿ ನೋಡಬಹುದು. ಸುಮಾರು 150 ಕ್ಕೂ ಮಿಕ್ಕಿ ಪಾರಂಪರಿಕ ವಸ್ತುಗಳನ್ನು ಇಲ್ಲಿ ದಾಖಲಿಸಲಾಗಿದೆ.

ಅರೆಭಾಷೆ ನಾಟಕಗಳು : ಅರೆಭಾಷೆ ರಂಗಭೂಮಿ ಮುಂದಿನ ದಿವಸಗಳಲ್ಲಿ ಗಟ್ಟಿಯಾಗಿ ನೆಲೆಯೂರಬೇಕಾದರೆ ಅರೆಭಾಷೆ ನಾಟಕ ಪುಸ್ತಕಗಳು ಅಗತ್ಯ ಆ ನಿಟ್ಟಿನಲ್ಲಿ ಅರೆಭಾಷೆಯಲ್ಲಿ ತುಂಬಾ ಯಶಸ್ಸು ಕಂಡ ಸಾಹೇಬ್ರು ಬಂದವೇ ನಾಟಕ ಮತ್ತು ಗೂಡೆ ಬೇಕಾಗುಟು ನಾಟಕಗಳ ಪುಸ್ತಕ ಹೊರಬರಲಿದೆ.

ಅರೆಭಾಷೆ ಯಕ್ಷಗಾನ : ಅರೆಭಾಷೆ ಇತಿಹಾಸದಲ್ಲಿ ಮೊದಲ ಬಾರಿಗೆ ಪರ‍್ಣ ಪ್ರಮಾಣದ ಅರೆಭಾ಼ಷೆ ಯಕ್ಷಗಾನ ಪ್ರಸಂಗ ಈ ಅವಧಿಯಲ್ಲಿ ರಚನೆಯಾಗಿದ್ದು ಭವ್ಯಶ್ರೀ ಕುಲ್ಕುಂದ ಅವರ ಯಕ್ಷಜೊಂಪೆ ಮತ್ತು ಡಾ.ಮಾಧವ ಪೆರಾಜೆ ಅವರು ವೀರಮಣಿ ಕಾಳಗ ಹೊರ ಬರಲಿದೆ ಅಲ್ಲದೆ, ಅರೆಭಾಷೆ ಪ್ರವಾಸ ಕಥನ ಮತ್ತು ಕಥೆ ಪುಸ್ತಕ ಕೂಡ ಈ ಸಂಮಾರಂಭದಲ್ಲಿ ಬಿಡುಗಡೆ ಕಾಣಲಿದೆ.

ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಶ್ರೀ ಲಕ್ಷ್ಮೀನಾರಾಯಣ ಕಜೆಗದ್ದೆ, ಸದಸ್ಯರುಗಳಾದ ಶ್ರೀ ಧನಂಜಯ ಅಗೋಳಿಕಜೆ, ಶ್ರೀಮತಿ ಬೈತಡ್ಕಜಾನಕಿ ಬೆಳ್ಯಪ್ಪ, ಶ್ರೀಮತಿ ಚೊಕ್ಕಾಡಿ ಪ್ರೇಮರಾಘವಯ್ಯ ಹಾಜರಿದ್ದರು.

error: Content is protected !!