ಮಂಜಿನ ನಗರಿ ಮಡಿಕೇರಿ ಇಷ್ಟ ಪಡದವರು ಯಾರಿದ್ದಾರೆ ಹೇಳಿ?


ಮಡಿಕೇರಿ ಅಂದರೆ ಪ್ರವಾಸಿಗರ ಸ್ವರ್ಗ. ಮಡಿಕೇರಿ ಅಂದ ತಕ್ಷಣ ನೆನಪು ಆಗೋದು ಅಭಿ ಫಾಲ್ಸ್, ರಾಜಾ ಸೀಟ್, ನಿಸರ್ಗಧಾಮ, ಗೋಲ್ಡನ್ ಟೆಂಪಲ್, ದುಬಾರೆ ಮುಂತಾದ ಪ್ರವಾಸಿ ತಾಣಗಳು ಇಂಟರ್ನೆಟ್ ಅಲ್ಲಿ ಹುಡುಕುವುದಕ್ಕಿಂತ ವೇಗವಾಗಿ ನಮ್ಮ ತಲೆಗೆ ಹೊಳೆಯುತ್ತೆ. ಆದರೆ ಮಡಿಕೇರಿ ಅಲ್ಲಿ ಇವಷ್ಟೆ ಇರುವುದು ಅಲ್ಲ, ಇನ್ನೂ ಹಲವಾರು ಪ್ರವಾಸಿ ತಾಣಗಳು ಇವೆ ಎಂಬ ವಿಷಯ ಹಲವರಿಗೆ ಗೊತ್ತಿಲ್ಲ.

ಈಗ ನಾನು ಹೇಳಲು ಹೊರಟಿರುವ ಸ್ವರ್ಗ ಲೋಕದೊಳಗೊಂದು ಸ್ವರ್ಗ. ಬಾಕಿ ಉಳಿದ ತಾಣಗಳಂತೆ ಜನ ಜಂಗುಳಿ ಇಲ್ಲ, ಜನಪ್ರಿಯತೆ ಸಹ ಇಲ್ಲ,ಈ ಕಾರಣದಿಂದ ಈ ಸ್ಥಳದ ವಿವರ ಗೂಗಲ್ ನಲ್ಲಿ ಸಿಗುವುದಿಲ್ಲ…

ನಾವೆಲ್ಲ ಸ್ನೇಹಿತರು ಎಲ್ಲಿಗೆ ಹೋಗುವುದು ಅಂತ ಯೋಚಿಸುತ್ತಿರುವಾಗಲೇ ಒಬ್ಬ ಸ್ನೇಹಿತ ಹೇಳಿದ್ದು ಕೋಟೆ ಬೆಟ್ಟ ಹೋಗೋಣ ಅಂತ, ಹಾಗೆ ವಾಟ್ಸ್ ಆ್ಯಪ್ ನಲ್ಲಿ ಸ್ನೇಹಿತರನ್ನು ಸೇರಿಸಿ, ಸಭೆ ಮಾಡಿದೆವು, ಹಲವು ಸ್ನೇಹಿತರು ಬರಲು ಆಗುದಿಲ್ಲ ಅಂತ ಹೇಳಿದರು, ಕೊನೆಗೆ 3 ಜನ ಮಾತ್ರ ಹೊರೆಟೆವು, ಕೋಟೆ ಬೆಟ್ಟ ಬಾ ಅಂತ ಕರೆಯುತ್ತಿತ್ತು, ದಾರಿ ನಮ್ಮನ್ನು ಸ್ವಾಗತಿಸುತ್ತಿತ್ತು..

ಸಿದ್ದಾಪುರದಿಂದ ಬೈಕ್ ಅಲ್ಲಿ ಹೊರಟ ನಾನು, ಚೇಟ್ಟಲ್ಲಿ, ಸುಂಟಿಕೊಪ್ಪ- ಮಾದಾಪುರ ಮಾರ್ಗವಾಗಿ ದಾರಿ ಮದ್ಯೆ 2 ಜನ ಸ್ನೇಹಿತರನ್ನು ಸೇರಿಸಿಕೊಂಡು, ಮೊದಲಿಗೆ ಕೋಟೆ ಬೆಟ್ಟದ ಮುಂಭಾಗಕ್ಕೆ ತಲುಪಿದೆವು, ಮೇಲೆ ಹೇಗೆ ಹೋಗುವುದು ಅಂತ ಯೋಚಿಸುತ್ತಿರುವಾಗಲೇ ಅಪತ್ಭಂಡವರಿಗೆ ಕರೆ ಮಾಡಿದಾಗ ಮೇಲೆ ಹೋಗಲು ಬೇರೆ ದಾರಿ ಇದೆ, ಅದು ಅಲ್ಲಿಂದ ಪುನಃ 20km ಹೋಗಬೇಕು ಅಂತ ತಿಳಿದು, ಅಲ್ಲಿಗೆ ಹೊರೆಟೆವು, ಹಳ್ಳಿಗಟ್ಟು ಎಂಬ ಪಟ್ಟಣದಿಂದ ಬಲಕ್ಕೆ 2-3km ಸಾಗಿ, ಅಲ್ಲಿಂದ ಪುನಃ ಬಲಕ್ಕೆ ಹೋದೆವು, ಹೋಗುತ್ತಾ ಸಣ್ಣ ದಾರಿ ಒಂದನ್ನು ಹೊಕ್ಕಿ, ತಿರುವು ರಸ್ತೆಗಳು, ಆಕಾಶದ ಎತ್ತರಕ್ಕೆ ಬೆಳೆದ ಮರಗಳು, ಆ ಮರಗಳ ಮದ್ಯೆ ನಮನ್ನೆ ಇಣುಕಿ ನೋಡುತ್ತಿದ್ದ ಆಕಾಶ, ವಾರದ ಹಿಂದಿನ ಮಳೆ ಇಂದ ಕೆಸರುಮಯವಾಗಿದ್ದ ರಸ್ತೆಗಳು, ಅಂತಹ ರಸ್ತೆ ಅಲ್ಲಿ ಬೈಕ್ ಓಡಿಸುವುದು ಎಂದರೆ ಏನೋ ಕುಶಿ ಅಲ್ವಾ, ಹಾಗೆ ಪ್ರಯಾಣ ಸಾಗಿತ್ತು.

ಕಾಡುಗಳ ಮದ್ಯೆ ಇದ್ದ ಮನೆಯೊಂದರ ಮುಂದೆ ಬೈಕ್ ನಿಲ್ಲಿಸಿ, ನಮ್ಮ ಚಾರಣ ಶುರು ಮಾಡಿದೆವು..

ಕೋಟೆ ಬೆಟ್ಟ ದ ಪೂರ್ಣ ವಿವರ ಇಂಟರ್ನೆಟ್ ಅಲ್ಲಿ ಸಿಗಲ್ಲ, ಅನೇಕರು ಈ ಹೆಸರನ್ನು ಕೇಳಿದ್ದು ಇದೆ ಮೊದಲು ಆಗಿರಬಹುದು. ಹಾಗಾಗಿ ನಮಗೂ ಹಲವು ಅನುಮಾನ ಇದ್ದವು, ಒಂದೆರಡು ಮನೆ ಬಿಟ್ಟರೆ ಮಾನವನ ಹೆಜ್ಜೆ ಅಲ್ಲಿ ಕಾಣ ಸಿಗುವುದಿಲ್ಲ, ಹಾಗಾಗಿ ಕೆಲವು ಅಪತ್ಭಂಡವರಿಗೆ ಕರೆ ಮಾಡಿ ದಾರಿ ಕೇಳಿಕೊಂಡು ಹೋದೆವು, ಅಲ್ಲಿಗೆ ನಮ್ಮ ಸುತ್ತ ಬೆಳೆದಿದ್ದ ಅನುಮಾನದ ಹುತ್ತ ನೆಲ ಸಮ ಆಗಿ ಹೋಗಿತ್ತು, ಅಲ್ಲಿಂದ ಮುಂದೆ ಆನೆ ನಡೆದದ್ದೇ ದಾರಿ ಎನ್ನುವಂತೆ ಸಾಗಿತ್ತು ನಮ್ಮ ಚಾರಣ.

ಮೊದಲಿಗೆ ತೀರ ಸಾಮಾನ್ಯ ನಂತೆ ಇದ್ದ ಗುಡ್ಡ ಹತ್ತಿದೆವು, ಅಲ್ಲಿಂದ ಶುರು ಆಗಿದ್ದು ನೋಡಿ ಸಾಹಸ, ದಾರಿ ಉದ್ದಕ್ಕೂ ತೋರಣ ಕಟ್ಟಿದಂತಿರುವ ಬಳ್ಳಿ ಅಂತಹ, ಹೆದರಿಕೆ ಹುಟ್ಟಿಸುವಂತಹ ಮರಗಳು, ನಾವು ಅಂದುಕೊಂಡಷ್ಟು ಸುಲಭ ಆಗಿರಲಿಲ್ಲ ಆ ಚಾರಣ, ಹೆಜ್ಜೆ ಇಟ್ಟಲ್ಲಿ ಎಲ್ಲ ಉಂಬುಳ ರಕ್ತ ಹಿರುತ್ತಿದ್ದವು, ನಿಂತ ನಿಂತಲ್ಲಿ ಹೊಚ್ಚ ಹೊಸ ಡಿಪಿ ಗಾಗಿ ಫೋಟೋ ಕ್ಲಿಕ್ ಮಾಡುವುದರಲ್ಲೇ ಮೈ ಮರೆತ ಸ್ನೇಹಿತೆ, ಮುಂದೆ ಸಾಗಿದಷ್ಟು ಒಂದಕ್ಕಿಂತ ಮತ್ತೊಂದು ಸುಂದರ ಸಿನರಿ, ಅಲ್ಲೊಮ್ಮೆ ಇಲ್ಲೊಮ್ಮೆ ದರ್ಶನ ಕೊಡುವ ಸೂರ್ಯ, ಮೈದಳೆದು ನಿಂತ ಸುಂದರ ಕಾಡು ಹೂವು, ಕ್ರಮಿಸಿದಂತೆ ಬೆಟ್ಟ ಇನ್ನಷ್ಟು ಕಷ್ಟ ಎನಿಸುವಂತೆ ಇತ್ತು.

ಎಷ್ಟು ಹೋದರು ತಲುಪದ ತುತ್ತ ತುದಿಯ ಕೋಟೆ ಬೆಟ್ಟ. ಅಂತೂ ಕೋಟೆ ಬೆಟ್ಟದ ಕೆಳಗಿನ ಬೆಟ್ಟಕ್ಕೆ ತಲುಪಿದೆವು,ಗಾಳಿ ನಮ್ಮನ್ನೇ ಬಿಸಾಕುವ ಹಾಗೆ ಇತ್ತು, ಆಗಾಗಲೇ ಸಮಯ ಒಂದು ಆಗಿದ್ದರಿಂದ ಇನ್ನೂ ಮೇಲೆ ಹೋಗುವುದು ಬೇಡ ಅಂತ ಅನಿಸಿತು, ಅಲ್ಲೇ ಒಂದಷ್ಟು ಹೊತ್ತು ಕೂತು, ನಾವು ತಂದಿದ್ದ ತಿಂಡಿ – ತಿನಿಸುಗಳನ್ನು ಕಾಲಿ ಮಾಡಿದೆವು.. ಹಾಗೆ ಇನ್ನಷ್ಟು ಫೋಟೋಗಳನ್ನು ಕ್ಲಿಕ್ ಮಾಡಿಕೊಂಡು, ಹತ್ತಿದ ಮೇಲೆ ಇಳಿಯಲೇ ಬೇಕು ಅಲ್ವೇ? ಇಳಿಯಲು ಶುರು ಮಾಡಿದೆವು, ಹತ್ತುವಾಗ ಇದ್ದ ಉತ್ಸಾಹ ಇಳಿಯುವಾಗ ಇರಲಿಲ್ಲ, ಒಂದೊಂದು ಹೆಜ್ಜೆ ಇಟ್ಟಗಳೂ ಮನಸ್ಸು ಬೇಡ ಬೇಡ ಅನ್ನುತಿತ್ತು , ಆ ಬೆಟ್ಟ ಬಿಟ್ಟು ಬರಲು ಮನಸ್ಸು ಇಲ್ಲ ಅಂತ ಅಲ್ಲ, ಕಾಲುಗಳು ತೀರ ಆಯಾಸಗೊಂಡಿದರಿಂದ. ಹರ ಸಾಹಸ ಪಟ್ಟು ನಾವು ಬೈಕ್ ಇಟ್ಟ ಮೂಲ ಸ್ಥಾನ ತಲುಪಿದೆವು.

ಇದು ನನ್ನ ಕೋಟೆ ಬೆಟ್ಟ ಚಾರಣದ ಕತೆ, ನೀವು ಒಮ್ಮೆ ಹತ್ತಿ.

ಅನ್ವೇಶ್ ಕೇಕುಣ್ಣಾಯ
error: Content is protected !!
satta king chart