SSLC ವಾಷೀ೯ಕ ಪರೀಕ್ಷೆ 2021ರಲ್ಲಿ ವಿದ್ಯಾರ್ಥಿಗಳು ಅನುಸರಿಸಬೇಕಾದ/ಪಾಲಿಸಬೇಕಾದ ಕ್ರಮಗಳು

ಪರೀಕ್ಷಾ ದಿನಾಂಕ
ಪತ್ರಿಕೆ -1 ಜುಲೈ 19
ಪತ್ರಿಕೆ – 2 ಜುಲೈ 22

ಪರೀಕ್ಷಾ ಅವಧಿ
ಬೆ:10-30 ರಿಂದ 1-30

ಬೆಳಿಗ್ಗೆ 8-30 ರಿಂದ 9-00 ಗಂಟೆಯೊಳಗೆ ಪರೀಕ್ಷಾ ಕೇಂದ್ರದಲ್ಲಿ ಕಡ್ಡಾಯವಾಗಿ ಪ್ರತಿಯೊಬ್ಬರೂ ಹಾಜರಾಗಿ ತಪಾಸಣೆಗೆ ಒಳಗಾಗುವುದು

ಕೆಮ್ಮು,ನೆಗಡಿ, ಜ್ವರ… ಮುಂತಾದವುಗಳಿಂದ ಬಳಲುತ್ತಿದ್ದರೆ ಪ್ರವೇಶ ದ್ವಾರದ ಕೌಂಟರ್ ನಲ್ಲಿರುವ ಆರೋಗ್ಯ ಸಿಬ್ಬಂದಿಯವರಿಗೆ/ ಆಶಾ ಕಾರ್ಯಕರ್ತರಿಗೆ ತಪ್ಪದೆ ತಿಳಿಸುವುದು.

ಬರುವಾಗ ತಪ್ಪದೇ ನಿಮ್ಮ ಹಾಲ್ ಟಿಕೇಟು, ಪ್ಯಾಡು, ಪೆನ್ನು (ಕಡ್ಡಾಯವಾಗಿ ಎಲ್ಲರೂ ಕಪ್ಪು ಬಣ್ಣದ ಬಾಲ್ಪಾಯಿಂಟ್ ಪೆನ್) ಮತ್ತು ಜಾಮೆಟ್ರಿ ಬಾಕ್ಸು,ಪೆನ್ಸಿಲ್, ರಬ್ಬರ್, ಶಾರ್ಪನರ್ ಬೇಕಾದ ಸಲಕರಣೆಗಳನ್ನು ತಪ್ಪದೆ ತರಬೇಕು.(ರಫ್ ವಕ್೯ಗಾಗಿ)

ಸಾಧ್ಯವಾದರೆ ನಿಮ್ಮ ಕುಡಿಯುವ ನೀರಿನ ಬಾಟಲಿಯನ್ನು ನೀವೇ ತರುವುದು ಒಳ್ಳೆಯದು ಹಾಗೂ ಇದು ಅತ್ಯಂತ ಉಪಯುಕ್ತ ಕ್ರಮ.
(ಪರೀಕ್ಷಾ ಕೇಂದ್ರದಲ್ಲಿಯೂ ಕೂಡ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ)

ಪ್ರತಿಯೊಬ್ಬರು ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಿ ಕೊಂಡು ಬನ್ನಿ ,ಸ್ಯಾನಿಟೈಸ್ ಮಾಡಿಕೊಳ್ಳಿ ,ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಿ.ಸಾಮಾಜಿಕ ಅಂತರದಲ್ಲಿ ಕೊಠಡಿಗೆ ಹೋಗಿ ಮತ್ತು ಸಾಮಾಜಿಕ ಅಂತರದೊಂದಿಗೆ ಕೊಠಡಿಯಿಂದ ಪರೀಕ್ಷೆ ಮುಗಿದ ನಂತರ ಒಬ್ಬೊ ಬ್ಬರಾಗಿ ಹೊರಗೆ ಬರುವುದು.

ದಿನಾಂಕ 19 ರಂದು ನಿಮಗೆ ಪತ್ರಿಕೆ-1ರ ಪ್ರಶ್ನೆ ಪತ್ರಿಕೆಯನ್ನು ಬೆಳಗಿನ ಅವಧಿ 10-30 ಕ್ಕೆ ಪ್ರಶ್ನೆಪತ್ರಿಕೆಯ ಜೊತೆಗೆ ಗಣಿತ, ವಿಜ್ಞಾನ, ಸಮಾಜ ವಿಜ್ಞಾನದ 3 ವಿಷಯಗಳ OMR ಉತ್ತರ ಪತ್ರಿಕೆಗಳನ್ನು ಹಾಗೂ ಜುಲೈ 22 ರಂದು ಪತ್ರಿಕೆ-2 ನ್ನು ಬೆಳಗಿನ ಅವಧಿ10-30 ಕ್ಕೆ ಪ್ರಶ್ನೆ ಪತ್ರಿಕೆಯ ಜತೆಗೆ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ವಿಷಯಗಳ OMR ಉತ್ತರ ಪತ್ರಿಕೆಗಳನ್ನು ನೀಡಲಾಗುತ್ತದೆ.(OMR ನಲ್ಲಿ ನಿಮ್ಮ ವಿವರಗಳನ್ನು ಪರಿಶೀಲಿಸಿಕೊಳ್ಳಿ)

ಯಾವುದೇ ವಿಷಯದ ಪ್ರಶ್ನೆ ಪತ್ರಿಕೆಯನ್ನು ಮೊದಲು ಬಿಡಿಸಲು ನೀವು ಸ್ವತಂತ್ರರು.ಸುಲಭವಾಗಿರುವುದನ್ನು ಮೊದಲು ಬಿಡಿಸುವುದು ಸೂಕ್ತ

ಪ್ರತಿ ವಿಷಯಕ್ಕೂ 1 ಗಂಟೆಯಂತೆ ಸಮಯವನ್ನು ಬಳಸಿಕೊಂಡರೆ ಅನುಕೂಲ ಉತ್ತಮ.ಇದು ಸಲಹೆ ಮಾತ್ರ.ನಿಮ್ಮ ಅನುಕೂಲಕ್ಕೆ ತಕ್ಕಂತೆ ಸಮಯವನ್ನು ಬಳಸಿಕೊಳ್ಳಿ

OMR ಉತ್ತರ ಪತ್ರಿಕೆಯಲ್ಲಿ ಉತ್ತರಿಸುವಾಗ ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಯ ಕ್ರಮ ಸಂಖ್ಯೆ ಮತ್ತು ಉತ್ತರಿಸುವ OMR ಉತ್ತರ ಪತ್ರಿಕೆಯಲ್ಲಿರುವ ಕ್ರಮಸಂಖ್ಯೆಯನ್ನು ಸರಿಯಾಗಿ ಗಮನಿಸಿ (ovel) ವೃತ್ತಗಳನ್ನು ಶೇಡ್ ಮಾಡಿ ಉತ್ತರಿಸುವುದು.(ಅವಸರದಲ್ಲಿ ಈ ಹಂತದಲ್ಲಿ ತಪ್ಪಾಗುವ ಸಾಧ್ಯತೆಗಳಿವೆ)

ಯಾವುದೇ ಕಾರಣಕ್ಕೂ ಉತ್ತರಿಸುವಾಗ ovel ಶೇಡ್ ಮಾಡುವಾಗ ಅವಸರದಲ್ಲಿ ತಪ್ಪು ಮಾಡಿ ವೈಟ್ನರ್ ಅನ್ನುಬಳಸತಕ್ಕದ್ದಲ್ಲ

ಉತ್ತರಿಸುವುದು ಕ್ಕಿಂತ ಮೊದಲು ನಿಮ್ಮ ಉತ್ತರದ ಆಯ್ಕೆಯನ್ನು ಅಂತಿಮಗೊಳಿಸಿ,ಉತ್ತರ ಸರಿ ಎಂದು ಅನಿಸಿದ ಮೇಲೆ ovel ಶೇಡ್ ಮಾಡಿ. ಒಂದು ವೇಳೆ witner ಬಳಸಿದರೆ ನಿಮ್ಮ ಉತ್ತರ ಪತ್ರಿಕೆ ಮೌಲ್ಯಮಾಪನ ವಾಗುವುದಿಲ್ಲ.*

ನೀವು ಪ್ರಶ್ನೆಪತ್ರಿಕೆಯನ್ನು ಉತ್ತರಿಸುವುದು ಬೇಗ ಮುಗಿಸಿದರೂ ಕೂಡ ಪ್ರತಿಯೊಬ್ಬರನ್ನೂ ಕಡ್ಡಾಯವಾಗಿ 3 ಗಂಟೆಯ ಪರೀಕ್ಷೆಯ ಅವಧಿಯ ನಂತರವೇ ಕೊಠಡಿಯಿಂದ ತೆರಳಲು ಅನುಮತಿ ನೀಡಲಾಗುತ್ತದೆ.ಯಾರೂ ಕೂಡಾ ಅವಸರದಿಂದ ಬಿಡಿಸಬೇಡಿ….ಏಕೆಂದರೆ ಸಮಯ ಬಹಳಸುವುದರಿಂದ ಸದುಪಯೋಗಪಡಿಸಿಕೊಳ್ಳಿ.

OMR ನಲ್ಲಿ ನೀವು ಉತ್ತರಿಸುವುದು ಪ್ರತಿ ವಿಷಯದ ನಲವತ್ತು ಪ್ರೆಶ್ನೆಗಳಿಗೆ ovel ಗಳನ್ನು ಶೇಡ್ ಮಾಡುವುದು ಮತ್ತು OMR ನ ಕೆಳಗಡೆ ನಿಗದಿಪಡಿಸಿದ ಜಾಗದಲ್ಲಿಯೇ ನಿಮ್ಮ ಸಹಿಯನ್ನು ತಪ್ಪದೇ ಹಾಕತಕ್ಕದ್ದು.

ಯಾವುದೇ ಕಾರಣಕ್ಕೂ OMR ಗಳನ್ನು ಮಡಿಚುವುದಾಗಲಿ,ಮಾಕ್೯ಮಾಡುವುದಾಗಲಿ,ಗೆರೆ ಎಳೆಯುದಾಗಲಿ,ಗಲೀಜು ಮಾಡುವುದಾಗಲಿ,ಚಿತ್ ಮಾಡುವುದಾಗಲಿ ಮಾಡಬೇಡಿ..OMR ನಲ್ಲಿ ನಿಮ್ಮ photo ದ ಕೆಳಗಡೆ ಇರುವ QR code (ಚೌಕ) ಮತ್ತು ಎಡ ಹಾಗೂ ಬಲ ಭಾಗದಲ್ಲಿರುವ BAR Code (ಗೆರೆಗಳು) ಗಳಮೇಲೆ ಯಾವುದೇ ಹಾನಿ ಮಾಡಬೇಡಿ.* ( OMR ಗಳನ್ನು ಹೇಗೆ ತೆಗೆದುಕೊಂಡಿರುತ್ತೀರೋ.. ಅದೇ ರೀತಿಯಲ್ಲಿ ಉತ್ತರಗಳನ್ನು ಶೇಡ್ ಮಾಡಿ ಕೊಠಡಿ ಮೇಲ್ವಿಚಾರಕರಿಗೆ ಹಿಂದಿರುಗಿಸಿ )

ಯಾರೂ ಕೂಡ ಪರೀಕ್ಷೆಯ ನಿಯಮಗಳನ್ನು/ಪಾವಿತ್ರ್ಯತೆಯನ್ನು ಉಲ್ಲಂಘಿಸತಕ್ಕದ್ದಲ್ಲ.

ಪರೀಕ್ಷಾ ಕೊಠಡಿಯಲ್ಲಿ ಕೊಠಡಿ ಮೇಲ್ವಿಚಾರಕರು ಗಳು ನೀಡುವ ಮಾಗ೯ದಶನವನ್ನು ಎಲ್ಲರೂ ಚಾಚೂ ತಪ್ಪದೆ ಪಾಲಿಸಿ

ಯಾವ ವಿದ್ಯಾರ್ಥಿಗಳು ಕೂಡ mobile phone/ gadgets/electronic ವಸ್ತುಗಳನ್ನು/ ನೋಟ್ಸಗಳನ್ನು ತರಬೇಡಿ.ನಿಮ್ಮನ್ನು ಕೊಠಡಿ ಮೇಲ್ವಿಚಾರಕರು ತಪಾಸಣೆ ಮಾಡುತ್ತಾರೆ.

error: Content is protected !!