fbpx

1.ಲಸಿಕೆ ಲಭ್ಯ

ಕೊಡಗು ಜಿಲ್ಲೆಗೆ ಹೆಚ್ಚುವರಿ ಲಸಿಕೆ ಆಗಮಿಸಿದೆ.ಸೋಮವಾರದಂದು 45 ಮೇಲ್ಪಟ್ಟ ಎರಡನೇ ಡೋಸ್ ನವರಿಗೆ ಕೋವಿಶೀಲ್ಡ್ ಮತ್ತು 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಈ ಕೇಂದ್ರದಲ್ಲಿ ಲಭ್ಯವಿದೆ ಎಂದು ಆರೋಗ್ಯ,ಇಲಾಖೆ ತಿಳಿಸಿದೆ.

2.ಭತ್ತ ಕೃಷಿ ಚುರುಕು

ಭಾಗಮಂಡಲ ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಏರಿಕೆಯಾಗಿದ್ದು ಭತ್ತದ ಕೃಷಿ ಚಟುವಟಿಕೆ ಚುರುಕುಗೊಂಡಿದೆ.ಅವಧಿಗೆ ತಕ್ಕಂತೆ ಮಳೆಯಿಲ್ಲದೆ ಕಂಗಾಲಾಗಿದ್ದ ರೈತನಿಗೆ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಕೊಂಚ ನೆಮ್ಮದಿ ತಂದಿದೆ.

3.ಹಣ ದುರುಪಯೋಗ,ಮೂವರ ಅಮಾನತ್ತು

ಕೊಡಗು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಛೇರಿಯಲ್ಲಿ ಹಣ ದುರುಪಯೋಗ ಸಂಬಂಧ ಕರ್ತವ್ಯ ನಿರ್ವಹಿಸುತ್ತಿರುವ ಮೂವರನ್ನು ಅನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ ಎಂದು ಕಚೇರಿಯ ಅಧಿಕೃತ ಪ್ರಕಟಣೆ ಹೊರಬಿದ್ದಿದೆ.
ಪೋಲಿಸ್ ಧ್ವಜ ಮಾರಟ 3,85,650 ರೂ,ವಿರಾಜಪೇಟೆ ಉಪವಿಭಾಗದ 3,82,800 ಸೇರಿದಂತೆ ಕೋವಿಡ್ ನಿಯಮ ಉಲ್ಲಂಘನೆಯ ದಂಡದ ಹಣ ಸೇರಿ 8,40,000/- ಹಣ ದುರುಪಯೋಗವಾಗಿರುವುದು ಕಂಡು ಬಂದಿದೆ.

4.ಕಾರ್ಮಿಕರಿಗೆ ತೊಂದರೆ

ಕೋವಿಡ್ ಪ್ರಕರಣಗಳು ಇರುವ ಪ್ರದೇಶ
ಹೊರತುಪಡಿಸಿ ಉಳಿದ ಭಾಗವನ್ನು ಸೀಲ್ಡೌನ್ ನಿಂದ ಮುಕ್ತಗೊಳಿಸಬೇಕೆಂದು ಕರಿಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.ಜಿಲ್ಲೆಯಲ್ಲಿ ಲಾಕ್ಡೌನ್ ಸಡಿಲಗೊಂಡಿದ್ದು,ಈ ಭಾಗದಲ್ಲಿ ಸೀಲ್ಡೌನ್ ಮಾಡಿರೋದು ಕಾರ್ಮಿಕ ವರ್ಗದವರಿಗೆ ತೊಂದರೆಯಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

5.ಜುಲೈ 17-21ರವರೆಗೆ ಶಬರಿಮಲೆ ದರ್ಶನಕ್ಕೆ ಅವಕಾಶ

ಜುಲೈ 17ರಿಂದ ಶಬರಿಮಲೆ ದೇವಾಲಯ ತೆರೆಯಲಿದೆ.ಕೋವಿಡ್ ನಿಂದ ಮುಚ್ಚಲ್ಪಟ್ಟಿದ್ದ ದೇವಾಲಯ ಇದೀಗ 5 ಸಾವಿರ ಭಕ್ತರಿಗೆ ಪ್ರವೇಶದ ಅನುಕೂಲ ಮೋಡಿಕೊಟ್ಟಿದ್ದು ಖಡ್ಡಾಯವಾಗಿ 48 ಗಂಟೆಗಳ RTPCR ಕೊವಿಡ್ ಪರೀಕ್ಷಾ ವರದಿ ನೀಡಿ ಪ್ರವೇಶಿಸಬಹುದಾಗಿದೆ.

6.ಬಿಯರ್ ಬಾಟಲಿ ಲೋಡ್

ಮುಳ್ಳುಸೋಗೆ ವ್ಯಾಪ್ತಿಯಲ್ಲಿ ಲಾಕ್ಡೌನ ಸಂದರ್ಭ ಕಾರ್ಮಿಕರು ಪಂಚಾಯ್ತಿ ವ್ಯಾಕ್ತಿಯಲ್ಲಿ ಸ್ವಚ್ಚತೆ ಕಾಯರ್ಯದಲ್ಲಿ ತೊಡಗಿಕೊಂಡಿದ್ದು, ಘನತ್ಯಾಜ್ಯದಲ್ಲಿ ಬಿಯರ್ ಬಾಟಲಿಗಳೇ ಹೆಚ್ಚು ಸಂಗ್ರಹವಾಗಿದ್ದು,ಲೋಡ್ ಗಟ್ಟಲೆ ತ್ಯಾಜ್ಯ ಗುಜುರಿಗೆ ನೀಡಲಾಯಿತು.

7.ಕರಡಿ ದಾಳಿ

ನಿಟ್ಟೂರು ಕಾರ್ಮಾಡು ಗ್ರಾಮದ ವ್ಯಾಪ್ತಿಯಲ್ಲಿ ಕರಡಿ ಹಾವಳಿ ಶುರುವಾಗಿದೆ.ಇಲ್ಲಿ ನ ಕಾಫಿ ತೋಟದ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕ ಮಹಿಳೆ ಭಾಗ್ಯ ಎಂಬುವವಳ ಮೇಲೆ ದಾಳಿ ಮಾಡಿದೆ.ಸಮೀಪದಲೇ ಇದ್ದ ಆರೋಗ್ಯ ಕಾರ್ಯಕರ್ತರು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.

8.ಬೀಟೆ ಮರ ಸಾಗಾಟ ಬಂಧನ

ಬೀಟೆ ಮರ ಕಳ್ಳ ಸಾಗಾಟ ಪ್ರಕರಣ ಸಂಬಂಧ,1.50 ಲಕ್ಷ ಮೌಲ್ಯದ ಮರವನ್ನು ಮಡಿಕೇರಿ,ಗ್ರಾಮಾಂತರ ಪೋಲಿಸರು ವಶಕ್ಕೆ ಪಡೆದು ಮೂವರನ್ನು ಬಂಧಿಸಲಾಗಿದೆ.
ಸಿದ್ದಾಪುರದ ಉಮ್ಮರ್, ವಾಲ್ನೂರಿನ ಎಂ.ಕೆ,ಇಬ್ರಾಹಿಂ,ಮೈಸೂರಿನವಾಸಿಂ ಅಕ್ರಂ ಬಂಧಿತರು.

9.ಹೋರಾಟದ ಅರಿವಿಲ್ಲದ ಕಾಂಗ್ರೆಸ್ ಜೆಡಿಎಸ್

ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಅಪಚ್ಚು ರಂಜನ್ ಕಳೆದ 20 ವರ್ಷಗಳಿಂದ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ ಹಾಗು ಕುಶಾಲನಗರ ತಾಲ್ಲೂಕು ರಚನೆ ಮಾಡುವಲ್ಲಿ ಮುಂಚೂಣಿಯಲ್ಲಿದ್ದರು, ಪಕ್ಷಾತೀತ ಹೋರಾಟದ ಗಂಧಗಾಳಿಗೊತ್ತಿಲ್ಲದ ಕಾಂಗ್ರೆಸ್,ಜೆಡಿಎಸ್ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ,ಪಕ್ಷದ ತಾಲ್ಲೂಕು ವಕ್ತಾರ ಕೆ.ಜಿ ಮನು ತಿರುಗೇಟು ನೀಡಿದ್ದಾರೆ.

10.ಕೋವಿಶೀಲ್ಡ್ ಲಸಿಕೆ ಪಡೆದವರ ಭಾಗ್ಯ

ಕೋವಿಶೀಲ್ಡ್ ಲಸಿಕೆ ಪಡೆದವರು ಐರೋಪ್ಯ ದೇಶಕ್ಕೆ ಪಯಾಣ ಅವಕಾಶ ದೊರೆತಿದೆ.ಕೊಡಗಿನಲ್ಲೂ ಈ ಭಾಗದ ಪ್ರಯಾಣಿಕರು ಇರುವುದು ಗಮನಾರ್ಹವಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಕೋವಿಶೀಲ್ಡ್ ಪಡೆದವರು ಸೀಮಿತ 15 ರಾಷ್ಟ್ರಗಳಿಗೆ ಆಗಮಿಸುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.ಈ ಬಗ್ಗೆ
ಬೆಲಿಜಿಯಂ ನಲ್ಲಿ ಅಧಿಕೃತ ಅನುಮೋದನೆ ದೂರೆತಿದೆ.

error: Content is protected !!