MTV ರೋಡೀಸ್ ಶೋಗೆ ಕೊಡಗಿನ ತರುಣ ಆಯ್ಕೆ

ಮಡಿಕೇರಿ ಏ.4 : ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಎಂಟಿವಿ (MTV) ಅವರ ರೋಡೀಸ್ (Roadies) ರಿಯಾಲಿಟಿ ಶೋಗೆ ಜಶ್ವಂತ್ ಬೋಪಣ್ಣ ಕೊಡಗಿನ ಆಯ್ಕೆಯಾಗಿದ್ದಾರೆ.
ಇದು ರಾಷ್ಟ್ರ ಮಟ್ಟದ ಅತೀ ದೊಡ್ಡ ಸ್ಪರ್ಧೆಯಾಗಿದ್ದು, ಇವರು ಫೈನಲ್ ತಲುಪಿದ್ದಾರೆ. ಅಂತಿಮ ಹಂತದ ಸ್ಪರ್ಧೆಯಲ್ಲಿ ಮೆಂಟಲ್ ಟಾಸ್ಕ್ ಫಿಸಿಕಲ್ ಟಾಸ್ಕ್ ಬೈಕ್ ರೈಡಿಂಗ್, ಶೋಕೇಸ್ ವಿವಿಧ ತರಹದ ಸ್ಪರ್ಧೆಗಳಿದ್ದು, ಇದರ ಪ್ರಸಾರವು ಇದೇ ಏ.8 ರಿಂದ 10ರ ವರೆಗೆ ಸಂಜೆ 7.00ಗಂಟೆಗೆ ಎಂಟಿವಿ ಚಾನೆಲ್‌ನಲ್ಲಿ ಫೈನಲ್ ಮುಗಿಯುವವರೆಗೆ ಮುಂದುವರೆಯಲಿದೆ.