1. ಇಂದಿನವರೆಗೆ ಅಲರ್ಟ್ -ಕರಾವಳಿ ಭಾಗದಲ್ಲಿ ಗಂಟೆಗೆ 50 ಕಿ.ಮಿ ವೇಗದಲ್ಲಿ ಗಾಳಿ ಬೀಸುತ್ತಿದ್ದು,3.9 ಮೀಟರ್ ನಷ್ಟು ಎತ್ತರದ ಅಲೆಗಳು ಏಳುತ್ತಿವೆ.ಈಗಾಗಲೇ ಕೊಡಗು ಸೇರಿದಂತೆ,ಉತ್ತರಕನ್ನಡ,ದಕ್ಷಿಣಕನ್ನಡ,ಉಡುಪಿ,ಚಿಕ್ಕಮಗಳೂರು,ಹಾಸನ,ಶಿವಮೊಗ್ಗ ಆರೆಂಜ್ ಅಲರ್ಟ್ ನಲ್ಲಿದ್ದು, ಬೆಳಗಾವಿ,ಧಾರವಾಡ ಮತ್ತು ಹಾವೇರಿಯಲ್ಲಿ ಎಲ್ಲೂ ಅಲರ್ಟ್ ಘೋಷಿಸಲಾಗಿದೆ.

2. ಒಳ ಸಂಚು ಆರೋಪ ಶೇಕಡ 5ಕ್ಕಿಂತ ಕಡಿಮೆ ಪಾಸಿಟಿವಿಟಿ ಇರುವ ಜಿಲ್ಲೆಯನ್ನು ಅನ್ ಲಾಕ್ ಮಾಡಬಹುದು ಎಂಬ ಅಲೋಚನೆಯಲ್ಲಿ ಒಂದು ದಿನದ ಹಿಂದೆ ಕೊಡಗಿನಲ್ಲಿ 9.02 ಇದ್ದ ಪಾಸಿಟಿವಿಟಿ ಕೇವಲ ಒಂದೇ ದಿವಸದಲ್ಲಿ ರಾಜ್ಯ ಅನ್ ಲಾಕ್ ಮಾಡುವ ಎರಡು ದಿವಸದ ಹಿಂದೆ 4.02% ಪಾಸಿಟಿವಿಟಿ ತೋರಿಸಿರುವುದರ ಹಿಂದೆ ದುರ್ದ್ವೇಶವಿದೆ. ಶನಿವಾರ 4.02% ಮರುದಿನವೇ ಭಾನುವಾರ 11.84% ತಲುಪಿದ್ದು , ಶನಿವಾರದ ಪಾಸಿಟಿವ್ ಪ್ರಕರಣವನ್ನು ಉದ್ದೇಶದಿಂದಲೇ ತಡೆಹಿಡಿಯಲಾಗಿದ್ದು, ಮುಖ್ಯಮಂತ್ರಿಗಳು ದಿವಸದ ಹಿಂದಿನ ಪಾಸಿಟಿವಿಟಿ ದರವನ್ನು ಪರಿಗಣಿಸಿ ಲಾಕ್ ಡೌನ್ ಮುಂದುವರಿಸಿರುವುದು ಸ್ವಾಗತಾರ್ಹ.ಜುಲೈ ಮೊದಲ ವಾರದವರೆಗೂ ಲಾಕ್ ಡೌನ್ ಸಡಿಲಿಸಲು ಅವಕಾಶ ಕೊಡುವುದಿಲ್ಲ. ಅನಿವಾರ್ಯ ಎಂದರೆ ವಿವಿಧ ಸಂಘಟನೆಗಳ ಹಾಗೂ ಸಾರ್ವಜನಿಕರ ಸಹಕಾರದಿಂದ ಬೀದಿಗಿಳಿದು ಹೋರಾಡಲು ಸಿದ್ದ ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಎಚ್ಚರಿಸಿದೆ.

ಜಾನಪದ ಮೈತ್ರಿ- ಕುಶಾಲನಗರ ತಾಲ್ಲೂಕು ಜಾನಪದ ಪರಿಷತ್ತು ಆಶ್ರಯದಲ್ಲಿ ಅರಣ್ಯ ಇಲಾಖೆ, ಬಸವನಹಳ್ಳಿ ಲ್ಯಾಂಪ್ಸ್ ಸೊಸೈಟಿ ಸಹಯೋಗದೊಂದಿಗೆ ಆನೆಕಾಡು ಮೀಸಲು ಅರಣ್ಯದಲ್ಲಿ ವಿಶ್ವಪರಿಸರ ದಿನಾಚರಣೆ ಅಂಗವಾಗಿ “ಜಾನಪದ ಮೈತ್ರಿ” ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಸ್ಥಳಾಂತರ -ಹೊಸಕೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅರೆಕಾಡು ಗ್ರಾಮದಲ್ಲಿ 19 ಮಂದಿಗೆ ಕೋವಿಡ್ ಪಾಸಿಟಿವ್ ವರದಿಯಾಗಿದ್ದು,ಸೋಂಕಿತರನ್ನು ತಹಶೀಲ್ದಾರ್ ಸಮ್ಮುಖದಲ್ಲಿ ಟಾಸ್ಕ್ ಫೋರ್ಸ್ ಸಹಾಯದಿಂದ ಕೋವಿಡ್ ಕೇರ್ ಸೆಂಟರ್ ಗೆ ಸ್ಥಳಾಂತರ ಮಾಡಲಾಯಿತು.

 • ಹೈಟೆಕ್ ರೂಪ
  ವಿರಾಜಪೇಟೆ ತಾಲ್ಲೂಕಿದ ದೇವರಪುರ ಗ್ರಾಮ ಪಂಚಾಯ್ತಿಯ ಗ್ರಂಥಾಲಯವನ್ನು ಡಿಜಿಟಲೀಕರಣ ಗೊಳಿಸಲಾಗಿದೆ.ಓದುಗರರನ್ನು ಆಕರ್ಶಿಸಲು ಮತ್ತು ಜೀವನ ಮೌಲ್ಯಗಳು ಒಳಗೊಂಡ ಪುಸ್ತಕಗಳು,ದಿನಪತ್ರಿಕೆ, ಗಮಕಯಂತ್ರಗಳು ಸೇರಿದಂತೆ ಗೋಡೆಗಳ ಮೇಲಿನ ಆಕರ್ಷಕ ಚಿತ್ರಗಳು ಗ್ರಂಥಾಲಯಕ್ಕೆ ಇನ್ನಷ್ಟು ಮೆರುಗು ನೀಡಿದೆ.
 • ಆಮೆಗತಿ
  ಗುಡ್ಡೆಹೊಸೂರು ಸಿದ್ದಾಪುರ ನಡುವಿನ ಹೆದ್ದಾರಿ ಸಂಪೂರ್ಣ ಹದಗೆಟ್ಟಿದೆ.ಮಳೆಗಾಲ ಆರಂಭದಲ್ಲೇ ಪೂರ್ಣಗೊಳ್ಳಬೇಕಾದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಪರಿಣಾಮ ರಸ್ತೆಯ ತುಂಬೆಲ್ಲಾ ಹಳ್ಳಕೊಳ್ಳಗಳಾಗಿ ಕೆಸರುಮಯವಾಗಿದೆ.

ಸ್ಮೈಲ್ ಪ್ಲೀಸ್- ಕೊರೋನಾ ಆರಂಭವಾಗಿದಲ್ಲಿಂದ ಮದುವೆ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಕಡಿವಾಣ ಹಾಕಿದ್ದ ಕಾರಣ ಬೀದಿಗೆ ಬಿದ್ದಿದ ಜಿಲ್ಲೆ ಛಾಯಾಗ್ರಹಕರ ನೋವು ಅರ್ಥವಾದಂತೆ ಕಾಣುತ್ತಿದೆ.ಇದೇ ಕಾರಣಕ್ಕೆ ಛಾಯಾಗ್ರಹಕರೇ ತಮ್ಮವರ ನೆರವಿಗಾಗಿ ಕೆಲವೊಂದು ದಾನಿಗಳ ಸಹಾಯದಿಂದ ಆಹಾರ ಕಿಟ್ ಗಳನ್ನು ಜಿಲ್ಲಾದ್ಯಂತ ವಿತರಿಸಲಾಗುತ್ತಿದೆ.

ಸಂಪರ್ಕಿಸಲು ಸಾಧ್ಯವಿಲ್ಲ- ಒಂದೆಡೆ ಆನಲೈನ್ ಕ್ಲಾಸ್ ಕುಳಿತರೆ ಹಾಜರಾತಿ,ವರ್ಕ್ ಫ್ರಮ್ ಹೋಂ ಆದರೆ ಮಾತ್ರ ಸಂಬಳ.ಇದಿಷ್ಟು ನಡೆಯಬೇಕಾರೆ ಮನೆಯ ಮೇಲೋ ಇಲ್ಲಾ ಬಡಾವಣೆಯ ಮುಖ್ಯಧ್ವಾಂದ ವರೆಗೆ ಹೋಗಿ ಕೂರಬೇಕಾದ ಅನಿವಾರ್ಯತೆ ಸೋಮವಾರಪೇಟೆ ತಾಲ್ಲೂಕಿನ ಜಂಬೂರಿನಲ್ಲಿರುವ ಕಾರ್ಯಪ್ಪ ಬಡಾವಣೆಯವರ ಗೋಳು. ಮೂದಲೇ ಮೂಲಭೂತ,ಸೌಲಭ್ಯಗಳು ಆ‌ಅಷ್ಟಕಷ್ಟೆ ಎನ್ನುವುದರ ಜೊತೆಗೆ ಮೊಬೈಲ್ ನೆಟ್ವರ್ಕ್ ಸಿಗದೆ,ತುರ್ತು ಸಂದರ್ಭದಲ್ಲೂ ಸಿಗ್ನಲ್ ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅನ್ನದಾನ– ವಾಸವಿ ಪೀಠದ ದ್ವಿತೀಯ ಗುರುಗಳ ಸಚ್ಚಿದಾನಂದ ಸರಸ್ವತಿ ಪೀಠಾರೋಹಣ ಕಾರ್ಯಕ್ರಮದ ಅಂಗವಾಗಿ ಕನ್ನಿಕಾ ವಿವಿದೋದ್ದೇಶ ಸಂಘದ ವತಿಯಿಂದ ಸುಂಠಿಕೊಪ್ಪ ಮತ್ತು ಕೂಡಿಗೆ ವೃದ್ದಶ್ರಮದಲ್ಲಿ ಊಟದ ವ್ಯವಸ್ಥೆ ಮಾಡಲಾಯಿತು.

 • ವಿಳಂಬ ಜಪಾನ್ ದೇಶದ ಟೋಕ್ಯೋ ದಲ್ಲಿ ನಡೆಯಲಿರುವ ಬೇಸಿಗೆ ಒಲಂಪಿಕ್ಸ್ ಗೆ ಜಿಲ್ಲೆಯ ಅಥ್ಲೆಟ್ಗಗಳ ಆಯ್ಕೆ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ.
  ಒಂದೆಡೆ ಕೋವಿಡ್ ಸಮಸ್ಯೆಯಾದರೆ, ಇನ್ನೊಂದೆ ಆಯ್ಕೆ ಪರಿಸ್ಥಿತಿಗೆ ಅನುಗುಣವಾಗಿ ನಡೆಯುವುದರಿಂದ ತಡವಾಗುತ್ತಿದೆ ಎನ್ನಲಾಗಿದೆ.
  ಈಗಾಗಲೇ ಕೊಡಗಿನ ಯಾವ ಒಬ್ಬ ಹಾಕಿ ಆಟಗಾರನೂ ಒಲಂಪಿಕ್ಸ್ ತಂಡವನ್ನು ಪ್ರತಿನಿಧಿಸದಿರುವ ಬೆನ್ನಲ್ಲೇ ಇತರೆ ಕ್ರೀಡೆಗಳಲ್ಲಾದರೂ ಅವಕಾಶ ಸಿಗಲಿದೆಯೆ ಕಾದುನೋಡಬೇಕು.
error: Content is protected !!