fbpx

Tiktokನಿಂದ ಸಿನಿಮಾ ನಟರಾದ ಪಯಣ


Tiktok App ನಿಷೇಧವಾದ ಹಿನ್ನಲೆಯಲ್ಲೊಂದು ವಿಶೇಷ ಸಂದರ್ಶನ ಸಂಪಾದಕರಾದ ರಜತ್ ಅವರಿಂದ

Tiktok ಎಂಬ ಚೀನಾ Appಅನ್ನು ಕೇಂದ್ರ ಸರಕಾರ ಇತ್ತೀಚೆಗೆ ಬ್ಯಾನ್ ಮಾಡಿತ್ತು. ಟಿಕ್ ಟಾಕಿಗೆ ಭಾರತದಲ್ಲಿ ಸುಮಾರು 120 ಮಿಲಿಯನ್ ಬಳಕೆದಾರರು ಭಾರತೀಯರೇ ಇದ್ದರು. ಇಂತಹ ಒಂದು ಮೊಬೈಲ್ Appಅನ್ನು  ಸದ್ಬಳಕೆಗಿಂತಲೂ ದುರುಪಯೋಗ ಮಾಡಿಕೊಂಡವರೇ ಹೆಚ್ಚು. Tik tok ಇದ್ದಾಗ ಅದರಲ್ಲಿ ತನ್ನದೇ ಸ್ವಂತ ಸಂಭಾಷಣೆ ಬರೆದು, ಹಾಸ್ಯ ಮಾಡಿ, ರಾಜ್ಯಾದ್ಯಂತ ತನ್ನದೇ ಚಾಪನ್ನು ಮೂಡಿಸಿದ ವಿನೋದ್ ಆನಂದ್ ಅವರ ಸಂದರ್ಶನ ಮಾಡಿದ್ದೇವೆ. ಅವರು ಏನು ಹೇಳಿದ್ದಾರೆ ಎಂಬ ಕುತೂಹಲವಿದ್ದರೆ ಇಲ್ಲಿದೆ  ಓದಿ…


ನಟ ವಿನೋದ್ ಆನಂದ್

Tiktok ಭಾರತದಲ್ಲಿ ನಿಷೇಧವಾಗಿದ್ದೇ ತಡ ಅದರ ವಿರುದ್ಧ ವಿಕೃತ ಮನಸ್ಥಿತಿಯಲ್ಲಿ ಅದನ್ನು ಬಳಸುತ್ತಿದ್ದವರೇ ಶ್ರದ್ಧಾಂಜಲಿ ಕೋರಿ ಮಜಾ ತೆಗೆದುಕೊಳ್ಳುವುದರಲ್ಲಿ ಬ್ಯುಸಿಯಾದರು. ಇನ್ನೂ ಕೆಲವು ಬಳಕೆದಾರರು ಮಮ್ಮಲ ಮರುಗಿದರು. ಅಂತವರಿಗಿಂದ ವಿನೋದ್ ಆನಂದ್ ಎಂಬ ಕಲಾವಿದರು ಭಿನ್ನವಾಗಿ ನಿಲ್ಲುತ್ತಾರೆ. Til Tok ಆಪ್ ಇಂದ ಮನೆ ಮಾತಾಗಿ ಈಗ ಚಿತ್ರರಂಗದಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವ ಅಚರು ಈಗ ‘ಆ Appಗಿಂತ ದೇಶವೇ ಮುಖ್ಯ. ಸ್ವದೇಶಿ Appಗಳನ್ನು ಇನ್ನಯ ಮುಂದೆ ಬಳಸುವಂತೆ ಜನರಿಗೆ ಕರೆ ಕೊಟ್ಟಿದ್ದಾರೆ.

ಸಂದರ್ಶನದಲ್ಲಿ ಟಿಕ್ ಟಾಕ್ ನಿಷೇಧದ ಬಗ್ಗೆ ಮಾತನಾಡುತ್ತಾ ಅವರು ‘ಈ ಕೊರೋನಾ ಸೊಂಕು ಸಾಂಕ್ರಾಮಿಕ ಸೊಂಕಾಗಿ ಜಗತ್ತನ್ನು ಕಾಡುವ ತನಕವೂ ಇದು ಚೀನಾದ App ಎಂಬುದು ತಿಳಿದಿರಲಿಲ್ಲ. ಮೊದಮೊದಲು ಬೇರೆ ನಟರ ಡೈಲಾಗಿಗೆ Lip sink ಮಾಡುತ್ತಿದ್ದೆ. ಆಗ ಕೇವಲ 10-15 ಲೈಕುಗಳಷ್ಟೇ ಬರುತ್ತಿದ್ದವು. ನಂತರ ಗೆಳೆಯರ ಸಲಹೆ ಮೇರೆಗೆ ನನ್ನದೇ ಸ್ವಂತ ಸಂಭಾಷಣೆಯಲ್ಲಿ ಟಿಕ್ ಟಾಕ್ ಮಾಡಲು ಆರಂಭಿಸಿದೆ.

ಟಿಕ್ ಟಾಕ್ ಅಲ್ಲಿ ವಿಡಿಯೋ ಮಾಡಲು ಆರಂಭಿಸಿದ್ದು, ಜೂನ್ 11,2019ರಲ್ಲಿ. ಅದು ಭಾರೀ ಪ್ರಶಂಸೆಗೆ ದಿನಕಳೆದಂತೆ ಪಾತ್ರವಾಗಲು ಶುರುವಾಗಿ 9 ಲಕ್ಷ ಜನರು ಫಾಲೋವಸ್೯ ಆದರು. ನಾನು ಪಿ.ಯು.ಸಿ ಫೇಲ್ ಆಗಿ ನಂತರ ಕಷ್ಟದಲ್ಲಿ ಪಾಸ್ ಮಾಡಿ, ಐ.ಟಿ.ಐ ಮುಗಿಸಿದೆ‌. ಆಮೇಲೆ ಕಾರುಗಳ ಶೋ ರೂಂನಲ್ಲಿ  stock yard ವಿಭಾಗಕ್ಕೆ ಕಾರ್ ಓಡಿಸುವ ಕೆಲಸ ಮಾಡುತ್ತಿದ್ದೆ. ತಂದೆಯ ಹೆಸರು ಸಿದ್ಧ ರಾಜು ತಾಯಿ ನಾಗಮಣಿ. ತಾಯಿಗೆ ನಾನು ಸರಕಾರಿ ಕೆಲಸ ಹಿಡಿಯಬೇಕು ಎಂಬ ಆಸೆ ಇತ್ತು. ನನಗಂತೂ ಬದುಕಿನಲ್ಲಿ ಯಾವುದೇ ಆಶಯಗಳು ಇರಲಿಲ್ಲ. ನಾನು ಮೂಲತಃ ಚೆನ್ನಪಟ್ಟಣ. ನನಗೆ ನಾನು ಮಾಡುತ್ತಿದ್ದ ಟಿಕ್ ಟಾಕ್ ವಿಡಿಯೋಗಳಿಂದ ಈ ಮಟ್ಟಿಗೆ ಹೆಸರು ಬರುತ್ತಿದೆ. ಸಿನಿಮಾಗಳಲ್ಲೂ ಅವಕಾಶ ಸಿಗುವ ಯಾವ ನಿರೀಕ್ಷೆಗಳೂ ಇರಲಿಲ್ಲ.

ಯೋಚನೆ ಮಾಡಿ ನಾನೇ ಸಂಭಾಷಣೆಗಳನ್ನು ಬರೆದು, ಜನರನ್ನು ಮನರಂಜಿಸಲು ದಿನಕ್ಕೆ ಒಂದೇ ಟಿಕ್ ಟಾಕ್ ವಿಡಿಯೋವನ್ನು ಹಾಕುತ್ತಿದ್ದೆ. ಪ್ರಾರಂಭದಲ್ಲಿ ನನ್ನ ಟಿಕ್ ಟಾಕ್ ವಿಡಿಯೋವನ್ನು ಖ್ಯಾತ ಪತ್ರಕರ್ತ ಅಕ್ಷರ ಮಾಂತ್ರಿಕರಾದ ರವಿ ಬೆಳಗೆರೆ ಅವರು ತಮ್ಮ ಫೇಸ್ ಬುಕ್ ಅಲ್ಲಿ ಹಂಚಿಕೊಂಡಿದ್ದರು. ಅದು ಜನರು ಗುರುತಿಸಲು ಈ ಪಯಣಕೆ ಆದಿಯ ಹುಮ್ಮಸ್ಸನ್ನು ನೀಡಿತ್ತು.


ಟಿಕ್ ಟಾಕ್ Appನ Last Bench ಗುರುಗಳೆಂದೇ ಪ್ರಸಿದ್ಧ

ಹೀಗೆ ಬರಬರುತ್ತಾ ಸಿನಿಮಾ ಮಂದಿ ನನ್ನನ್ನು ನೋಡಿ ಅವಕಾಶಗಳನ್ನು ಕೊಡಲು ಮುಂದಾದರು. ‘ಸದ್ಯಕ್ಕೆ ಕ್ರೇಜಿ಼ ಸ್ಟಾರ್ ರವಿಚಂದ್ರನ್ ಅವರ ಮಗ ವಿಕ್ರಂ ರವಿಚಂದ್ರನ್ ಅಭಿನಯಿಸಿರುವ ‘ತ್ರಿವಿಕ್ರಮ’ ಸಿನಿಮಾದಲ್ಲಿ ನಟಿಸಿದ್ದೇನೆ. ಅದರ ಚಿತ್ರೀಕರಣ ಮುಗಿದಿದ್ದು, ಬಿಡುಗಡೆಯಷ್ಟೇ ಬಾಕಿ ಇದೆ. ಧನುಷ್ ಅವರ ನಿರ್ದೇಶನದ ‘ರೆಬೆಲ್ ಹುಡುಗರು’ ಎಂಬ ಸಿನಿಮಾದಲ್ಲಿ ನಟಿಸಿದ್ದು ಅದು ರಿಲೀಸಿಗೆ ರೆಡಿಯಾಗಿದೆ.

ಕೃಷ್ಣ ಅವರ ನಿರ್ದೇಶನದ ‘ಊರಿನ ಗ್ರಾಮಸ್ಥರಲ್ಲಿ ವಿನಂತಿ’ ಎಂಬ ಸಿನಿಮಾದಲ್ಲಿ ನಟಿಸಬೇಕಿದ್ದು, ಅದರ ಚಿತ್ರೀಕರಣ ಇನ್ನು ಆಗಬೇಕಿದೆ ಅಷ್ಟೇ. ಹೊಸ ಸಿನಿಮಾ ಪ್ರಾಜೆಕ್ಟ್ ಕೂಡ ಬಂದಿದ್ದು, ಅದರ ನಿರ್ದೇಶಕರು ಚಿತ್ರದ ಟೈಟಲ್ ನೋಂದಣಿಯ ಕೆಲಸದಲ್ಲಿ ನಿರತರಾಗಿದ್ದಾರೆ‌ ಎಂದರು.

ಜನ ನನಗೆ ಈ ಮಟ್ಟಿಗೆ ಪ್ರೀತಿ ಕೊಟ್ಟು, ‘Last Punch ಗುರು’ ಎಂಬ ಪಟ್ಟಕೊಟ್ಟಿದ್ದಾರೆ. ಪ್ರಸಿದ್ಧ ಹಾಸ್ಯ ನಟ ಚಿಕ್ಕಣ್ಣ ಅವರ ಜೊತೆಗೆ ನಟಿಸುವ ಸದಾವಕಾಶವೂ ಒದಗಿ ಬಂದಿದೆ‌ ಎಂದು ಹರ್ಷ ವ್ಯಕ್ತ ಪಡಿಸಿದರು.


ತ್ರಿವಿಕ್ರಮ ಸಿನಿಮಾದಲ್ಲಿ ಹಾಸ್ಯ ನಟನ ಪಾತ್ರ ಮಾಡುತ್ತಿರುವರು

ಯುವ ಕಲಾವಿದರಿಗೆ ಏನು ಸಂದೇಶ ನೀಡಲು ಬಯಸುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ‘ ಯುವ ಜನರು ಸಿಕ್ಕ ಸಣ್ಣ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಕಲಾವಿದರಾಗಿ ನಿರಂತರ ಪರಿಶ್ರಮದಿಂದ ಪ್ರತಿಭೆಯನ್ನು ಪ್ರದರ್ಶಿಸಬೇಕು. Tik Tok ಕೆಲವರಿಂದ ದುರುಪಯೋಗವಾಗಿದ್ದರಿಂದ ಅದರ ನಿಷೇಧದ ಒತ್ತಾಯ ಕೇಳಿ ಬಂತು ಹೀಗಾಗಬಾರದಿತ್ತು.

ಜೊತೆಗೆ ಚೀನಾ ಕೊರೋನಾ ಸಾಂಕ್ರಾಮಿಕ ಸೊಂಕಿನ ಹಬ್ಬುವಿಕೆಗೆ ಮೂಲ ಕಾರಣವಾಗಿದ್ದರಿಂದ  ಈಗ ಟಿಕ್ ಟಾಕ್ ಸಂಪೂರ್ಣ ಬ್ಯಾನ್ ಆಗಿದೆ. ಭಾರತದಲ್ಲಿ ಹುಟ್ಟಿ ಈ ದೇಶದ ಪ್ರಜೆಯಾಗಿ ನಮ್ಮ ದೇಶದ ಶತ್ರು ರಾಷ್ಟ್ರಕ್ಕೆ ಬೆಂಬಲಿಸಬಾರದು. ಹಾಗಾಗಿ ನಾನೂ ಈಗ ROPOSO ಸ್ವದೇಶಿ Appಅನ್ನೇ ಬಳಸುತ್ತಿದ್ದೇನೆ ಎಂದರು.

ನಮ್ಮ ಸುದ್ದಿ ಸಂತೆ ವೆಬ್ ಜಾಲತಾಣದ ಕುರಿತು ಮೆಚ್ಚುಗೆ ಪಟ್ಟ ಅವರು, ಇನ್ನೂ ದೊಡ್ಡ ಮಟ್ಟಕ್ಕೆ ಬೆಳೆಯಲೆಂದು ಶುಭ ಕೋರಿದರು.

error: Content is protected !!