1.ಬಾಕ್ಸಿಂಗ್ ಹೆಡ್ ಕೋಚ್

32ನೇ ಟೋಕಿಯೋ ಒಲಂಪಿಕ್ಸ್ ನ ಹೆಡ್ ಕೋಚ್ ಆಗಿ ಸುಬೇದಾರ್ ಚೇನಂಡ ಅಚ್ಚಯ್ಯ ಕುಟ್ಟಪ್ಪರನ್ನು ಆಯ್ಕೆ ಮಾಡಲಾಗಿದೆ.2018ರಲ್ಲಿ ಧ್ರೋಣಾಚಾಯ್ರ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದ ಅಚ್ಚಯ್ಯ ಕುಟ್ಟಪ್ಪ ಇದೇ 23 ರಿಂದ 8 ಆಗಸ್ಟ್ ರವರೆಗೆ ಭಾರತ ಬಾಕ್ಸಿಂಗ್ ತಂಡದ ಹೆಡ್ ಕೋಚ್ ಆಗಿ ತೆರಳಲಿದ್ದಾರೆ.1996ರಲ್ಲಿ ಸೇನೆಗೆ ಸೇರಿದ್ದು, ಇವರು ಅಚ್ಚಯ್ಯ ಮತ್ತು ಶಾಂತಿ ದಂಪತಿಯ ದ್ವಿತೀಯ ಪುತ್ರ.

2.ಗಡಿ ಕಟ್ಟೆಚ್ಚರ ವಹಿಸಿ

ಕೊಡಗು ಜಿಲ್ಲೆಯಲ್ಲಿ ಕೋವಿಡ್ 19 ನಿಯಂತ್ರಣ ಸಂಬಂಧ ಮಡಿಕೇರಿ ತಾಲ್ಲೂಕಿನ ಗಡಿ ಭಾಗದಲ್ಲಿ ಹೆಚ್ಚಿನ ಮುಂಜಾಗ್ರತ ಕ್ರಮ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಸೂಚಿಸಿದ್ದಾರೆ.
ಮಡಿಕೇರಿ ತಾಲ್ಲೂಕಿನ ಕರಿಕೆ ಮತ್ತು ಸಂಪಾಜೆ ಗೇಟ್ ಬಳಿ ಮತ್ತು ಗಡಿ ಗ್ರಾಮ ಪಂಚಾಯಿತಿಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕು. ಕೇರಳದಿಂದ ಬರುವ ಜನರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿಯನ್ನು ಹೊಂದಿರಬೇಕು. ಮೂರನೇ ಅಲೆಯ ಮುನ್ಸೂಚನೆ ಗಮನದಲ್ಲಿಟ್ಟುಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದರು.

3.ಮರುಸರ್ವೆ ವರದಿ ಸಲ್ಲಿಕೆಗೆ ಆದೇಶ

ತಾವರೆಕೆರೆಯ ದಾಖಲೆಗಳ ಪ್ರಕಾರ 19 ಏಕರೆಗಳಷ್ಟು ಜಾಗವಿದ್ದು, ಸದ್ಯಕ್ಕೆ ಕೇವಲ 3.80 ಏಕರೆ ಸರ್ವೆ ಕಾರ್ಯದ ವರದಿ ನೀಡಿರುವ ಹಿನ್ನಲೆಯಲ್ಲಿ ಮರುಸರ್ವೆ ನಡೆಸಲು ಹೈಕೋರ್ಟ್ ಆದೇಶಿಸಿದೆ.

4.ಇಲಾಖೆ ಹಣ ಕದ್ದು ಮೋಜು-ಮಸ್ತಿ; ‘ಯಾರ್ದೋ ದುಡ್ಡು ಎಲ್ಲಮ್ಮನ ಜಾತ್ರೆ‘!

ಮಡಿಕೇರಿ ಎಸ್ಪಿ ಕಚೇರಿ ಹಣ ಕಳ್ಳತನ ಪ್ರಕರಣಕ್ಕೆ ಸಂಬಂಧ ಬಂದಿತ ರಂಜೀತ್ ಕುಮಾರ್,ವಿನೋದ್ ಕುಮಾರ್ ಮತ್ತು ಲೋಹಿತ್ ಕುಮಾರ್ ಕದ್ದ ಹಣದಲ್ಲಿ ತಮ್ಮ ಜೀವನ ಶೈಲಿಯನ್ನೇ ಬದಲಾಯಿಸಿಕೊಝಡಿದ್ದರು,ಜೊತೆಗೆ ವಿವಿಧ ಪೊರದೇಶಗಳಿಗೆ ತೆರಳಿ ಮೋಜು ಮಸ್ತಿಯಲ್ಲಿ ತೊಡಗಿಕೊಳ್ಳುತ್ತಿದ್ದರು ಎನ್ನಲಾಗಿದೆ.

5.ನನ್ನ ಕ್ಷೇತದ ಗ್ರಾಮಗಳಲ್ಲಿ 22 ಲಕ್ಷ ರೂ ನಷ್ಟು ಆಹಾರ ಕಿಟ್ ವಿತರಿಸಿದ್ದೇನೆ

ಕೊರೊನಾ ಸಂದರ್ಭದಲ್ಲಿ ಮುಂಚೂಣಿ ಸೈನಿಕರಾಗಿ ಕರ್ತವ್ಯ ನಿರ್ವಹಿಸಿದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು, ಪೌರಕಾರ್ಮಿಕರು, ಗ್ರಾ.ಪಂ.ಸಿಬ್ಬಂದಿಗಳು ಹೀಗೆ ಹಲವರಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾ.ಪಂ.ಗಳಲ್ಲಿ ವೈಯಕ್ತಿಕವಾಗಿ ಸುಮಾರು 20 ರಿಂದ 22 ಲಕ್ಷ ರೂ. ವೆಚ್ಚದಲ್ಲಿ ಆಹಾರ ಕಿಟ್ ವಿತರಿಸಲು ಪ್ರಯತ್ನಿಸಿದ್ದೇನೆ ಎಂದು ಅಪ್ಪಚ್ಚುರಂಜನ್ ತಿಳಿಸಿದ್ದಾರೆ.

6.ಕಾರು ಪಲ್ಟಿ

ಸೋಮವಾರಪೇಟೆ ತಾಲ್ಲೂಕಿನ ಕುಸುಬೂರು ದೇವಾಲಯ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡು ಕಾಫಿ ತೋಟದೊಳೆಗೆ ಮಗುಚಿಕೊಂಡ ಘಟನೆ ನಡೆದಿದೆ.ಮಳೆಯಿಂದ ರಸ್ತೆ ಒದ್ದೆಯಾಗಿದ್ದ ಕಾರಣ ನಿಯಂತ್ರಣ ಕಳೆದುಕೊಂಡಿದೆ. ಸ್ಥಳೀಯರು ಕಾರನ್ನು ಮೇಲೆತ್ತಿದ್ದು,ಚಾಲಕ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾನೆ.

7.ಇಂದಿನಿಂದ ಹಾರಂಗಿ ಪ್ರವೇಶ ಭಾಗ್ಯ

ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಜಲ್ಲೆಯಲ್ಲಿ ಅರ್ಧದಷ್ಟು ಪ್ರವಾಸಿತಾಣಗಳು ತೆರೆದುಕೊಂಡಿದ್ದು,ಇಂದಿನಿಂದ ವೀಕ್ಷಣೆಗೆ ಮುಕ್ತವಾಗಲಿದೆ.

8. ಒಳಚರಂಡಿಯಿಂದ ವ್ಯಕ್ತಿ ರಕ್ಷಣೆ

ಗುಜರಿ ಹುಡುಕಿಕೊಂಡು ಹೋಗಿ ಒಳಚರಂಡಿಯಲ್ಲಿ ಸಿಲುಕಿಕೊಂಡ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ.ಇಲ್ಲಿನ ಕಾಲೇಜು ರಸ್ತೆಯಲ್ಲಿ ಚರಂಡಿಯೊಳಗಿನಿಂದ ರಕ್ಷಣೆಗೆ ವ್ಯಕ್ತಿಯ ಧ್ವನಿ ಕೇಳಿದ್ದು,ಬಳಿಕ ಅಗ್ನಿಶಾಮಕದಳ ಆಗಮಿಸಿ ಸಂತೋಷ್ ಎಂಬಾತನನ್ನು ರಕ್ಷಿಸಲಾಗಿದೆ.

9.”ನಾಗರಿಕ ಒಕ್ಕೂಟ”ದಿಂದ ಹೋರಾಟ

ಕುಶಾಲನಗರ ಸರ್ಕಲ್ ಇನ್ಸಪೆಕ್ಟರ್ ಮಹೇಶ್ ಸಾರ್ವಜನಿವಾಗಿ ಸಾಕಷ್ಟು ಆರೋಪಗಳು ಕೇಳಿಬಂದಿರುವ ಹಿನ್ನಲೇ ಇದೇ ಶುಕ್ರವಾರದಂದು ಸಮಾನ ಮನಸ್ಕರು
“ನಾಗರೀಕ ಒಕ್ಕೂಟ” ಹೆಸರಿನಲ್ಲಿ ಹೋರಾಟ ನಡೆಸಲು ಕಾಂಗ್ರೆಸ್ ಮುಖಂಡ ವಿ.ಪಿ ಶಶಿಧರ್ ತಿಳಿಸಿದ್ದಾರೆ.

10.ಬಲಮುರಿಗೆ ಶಾಸಕರ ಭೇಟಿ; ವೀಕ್ಷಣೆ

ಜಿಲ್ಲೆಯಲ್ಲಿ ಕಳೆದ ಮೂರು ದಿನದಿಂದ ವ್ಯಾಪಕ ಮಳೆಯಾಗುತ್ತಿದೆ. ಇದರಿಂದ ಕಾವೇರಿ ನದಿ ಪಾತ್ರದಲ್ಲಿ ನೀರಿನ ಹರಿವು ಹೆಚ್ಚಳವಾಗಿರುವ ಹಿನ್ನೆಲೆ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಬಲಮುರಿಯ ಕೆಳ ಸೇತುವೆಗೆ ಭೇಟಿ ನೀಡಿ ಮಂಗಳವಾರ ವೀಕ್ಷಿಸಿದರು.
ಬಳಿಕ ಮಾತನಾಡಿದ ಶಾಸಕರು ಕಳೆದ ಎರಡು ಮೂರು ದಿನಗಳಿಂದ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಹಿನ್ನೆಲೆ ಜಿಲ್ಲೆಯ ನದಿ, ತೊರೆ, ಹಳ್ಳಕೊಳ್ಳ, ಜಲಪಾತಗಳು ತುಂಬಿ ಹರಿಯುತ್ತಿವೆ ಎಂದು ಅವರು ಹೇಳಿದರು.ಬಲಮುರಿ ಕೆಳಸೇತುವೆಯಲ್ಲಿ ನೀರು ಹೆಚ್ಚಾಗುತ್ತಿದ್ದು, ಇಲ್ಲಿನ ಸ್ಥಳೀಯರು ಎಚ್ಚರವಹಿಸಬೇಕು ಎಂದು ಅವರು ಸಲಹೆ ಮಾಡಿದರು.ಪ್ರಾಕೃತಿಕ ವಿಕೋಪ ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ತಯಾರಿ ಮಾಡಿಕೊಂಡಿದೆ.ಆ ದಿಸೆಯಲ್ಲಿ ಹೋಬಳಿ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಮಳೆ ಹೆಚ್ಚಾದ ಸಂದರ್ಭದಲ್ಲಿ ಸಾರ್ವಜನಿಕರು ಮುನ್ನೆಚ್ಚರ ವಹಿಸಬೇಕು. ಜೊತೆಗೆ ಕಾಳಜಿ ಕೇಂದ್ರಕ್ಕೆ ಸ್ಥಳಾಂತರವಾಗಬೇಕು ಎಂದು ಶಾಸಕರು ಕೋರಿದರು.
ಕಾಳಜಿ ಕೇಂದ್ರಕ್ಕೆ ತೆರಳುವ ಸಂದರ್ಭದಲ್ಲಿ ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ. ಯಾವುದೇ ರೀತಿ ಸಮಸ್ಯೆ ಉಂಟಾಗದಂತೆ ಗಮನಹರಿಸಬೇಕು ಎಂದರು.

11.ಅರೆಭಾಷೆ ಲಲಿತ ಪ್ರಬಂಧ ವಿಜೇತರ ಪಟ್ಟಿ ಪ್ರಕಟ

ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಅರೆಭಾಷೆ ಲಲಿತ ಪ್ರಬಂಧ ಸ್ಪರ್ಧೆಯ ವಿಜೇತರನ್ನು ಆಯ್ಕೆ ಮಾಡಿದ್ದು, ವಿಜೇತರ ವಿವರ ಇಂತಿದೆ.
ಕಡೇ ಕಾಲದ ಕಾಳಜಿ ಎಂಬ ಪ್ರಬಂಧಕ್ಕೆ ಕೊಟ್ಟಕೇರಿಯನ ಲೀಲಾ ದಯಾನಂದ ಅವರು ಪ್ರಥಮ, ಚಾಂಪ-ಚಾಂಪವ್ವ ಮತ್ತೆ ಪಿಳ್ಳಿಕ ಪ್ರಬಂಧಕ್ಕೆ ವಿಶ್ವನಾಥ ಎಡಿಕೇರಿ ಅವರು ದ್ವಿತೀಯ ಮತ್ತು ನೋಡಿಕೆ ಹೋದುಲೆನಾ ಪ್ರಬಂಧಕ್ಕೆ ಕವಿತಾ ಎ.ವೈ ಅವರು ಹಾಗೂ ರೊಟ್ಟಿ ಸುಟ್ಟಾತ್ ಪ್ರಬಂಧಕ್ಕೆ ಲೀಲಾ ದಾಮೋದರ ಅವರು ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಅವರು ತಿಳಿಸಿದ್ದಾರೆ.

12. ಶ್ವೇತಪತ್ರ ಹೊರಡಿಸಿ:

ರಾಜ್ಯ ಸರಕಾರದ ಕೆಲವು ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ 1500-2000 ಕೋಟಿ ಅನುದಾನ ಒದಗಿಸಿರುವ ಬಗ್ಗೆ ಘೋಷಿಸಿದ್ದಾರೆ. ಕೊಡಗು ಜಿಲ್ಲೆಯ ಜನಪ್ರತಿನಿಧಿಗಳು ಎಷ್ಟು ಅನುದಾನ ತಂದಿದ್ದಾರೆ ಎಂಬುದನ್ನು ಶ್ವೇತ ಪತ್ರ ಮೂಲಕ ಜಿಲ್ಲೆಯ ಜನರಿಗೆ ಮಾಹಿತಿ ನೀಡಲಿ ಎಂದು ಕೊಡಗು ಸಂರಕ್ಷಣಾ ವೇದಿಕೆ ಒತ್ತಾಯಿಸಿದೆ.

error: Content is protected !!