ಕಾವಾಡಿಯ ಕಾಮಧೇನು ಗೋಶಾಲೆಯ ಗೋದೇವತೆಗಳಿಗೆ ಇಂದು
ಕೇಸರಿ ಯೂತ್ ಮೂವ್ ಮೆಂಟ್ ಕಾರ್ಯಕರ್ತರ ವತಿಯಿಂದ ಹಸಿಹುಲ್ಲನ್ನು ತಲುಪಿಸಲಾಯಿತು.

ಗ್ರಾಮ ಸ್ವಚ್ಛ ಭಾರತ್ ಯೋಜನೆಯಡಿಯಲ್ಲಿ ಮುಳ್ಳುಸೋಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ಪಂಚಾಯಿತಿ ವತಿಯಿಂದ ಕಸವಿಲೇವಾರಿ ಕೆಲಸವನ್ನು ಪಂಚಾಯ್ತಿ ವತಿಯಿಂದ ಕೈಗೊಳ್ಳಲಾಯಿತು.

ಗ್ರಾಮ ವಿಕಾಸ್ ಸ್ವಚ್ಛ ಸಂಕೀರ್ಣ ಯೋಜನೆಯಡಿಯಲ್ಲಿ ಕೂಡಿಗೆಯಲ್ಲಿ ಭೂಮಿ ಸಮತಟ್ಟು ಮಾಡುವ ಕೆಲಸ ನಡೆಯಿತು.

ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ಪಾಸಿಟಿವ್ ಮನೆಗಳಿಗೆ ಸ್ಯಾನಿಟೈಸ್ ಮಾಡಲಾಯಿತು.

ಹೋದೂರುವಿನ ತ್ಯಾಜ್ಯ ನಿರ್ವಹಣೆ ಘಟಕ ನಡೆಸಲು ಸರ್ವೆ ಕಾರ್ಯ ನಡೆಸಲಾಯಿತು.

ಬಿ ಶೆಟ್ಟಿಗೇರಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಒತ್ತುವರಿ ಜಾಗ ಪರಿಶೀಲನೆ ನಡೆಸಿ ಹಸ್ತಾಂತರ ಮಾಡಿಕೊಳ್ಳಲಾಯಿತು.

ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕಿನಲ್ಲಿ ಮುಚೂಣಿ ಕಾರ್ಯಕರ್ತರ ಶ್ರಮದಿಂದ 45 ಗ್ರಾಮಗಳು ಕೋವಿಡ್ ನಿಯಂತ್ರಣಕ್ಕೆ ಬಂದಿವೆ.

ಪೊಲೀಸ್ ಸಹಾಯವಾಣಿ 112ಗೆ ಕರೆ ಬಂದ ಹಿನ್ನಲೆಯಲ್ಲಿ ಮಡಿಕೇರಿಯ ಸುದರ್ಶನ ವೃತ್ತದ ಬಳಿಯ ಬಸ್ ತಂಗುದಾಣದಲ್ಲಿ ಇದ್ದ ಮಾನಸಿಕ ಅಸ್ವಸ್ಥನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತು.

ದಾಸವಾಳ ರಸ್ತೆಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು ನಗರಸಭೆ ಗುರುತಿಸಿದ್ದರಿಂದ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ.

ಮಳೆಯಿಂದ ಅನಾಹುತ ಸಂಭವಿಸಬಹುದಾದ ಮಡಿಕೇರಿ ಸಂಪಾಜೆ ನಡುವಿನ ಪ್ರದೇಶಗಳಿಗೆ ಜ3ಲ್ಲಾಧಿಕಾರಿ ಚಾರುಲತಾ ಸೋಮಲ್,ಎಸ್ಪಿ ಸೇರಿದಂತೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

error: Content is protected !!