ಮಡಿಕೇರಿ ತಾಲೂಕಿನ ಬೆಟ್ಟಗೇರಿ, ಬೇಂಗೂರು, ಕುಂದಚೇರಿ, ಭಾಗಮಂಡಲ, ಅಯ್ಯಂಗೇರಿ, ಬಲ್ಲಮಾವಟಿ, ಎಮ್ಮೆಮಾಡು, ಕಕ್ಕಬ್ಬೆ, ಪಾರಾಣೆ, ನಾಪೋಕ್ಲು, ಹೊದ್ದೂರು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಪಂಚಾಯಿತಿಯ ಅಧ್ಯಕ್ಷರು, ಪಿಡಿಒ ಹಾಗೂ ಸದಸ್ಯರೊಂದಿಗೆ ಕೊರೋನಾ ಸೋಂಕು ನಿಯಂತ್ರಣ ಸಂಬಂಧ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಎಂಎಲ್ಸಿ ಸುನಿಲ್ ಸುಬ್ರಮಣಿ ಚರ್ಚೆ ನಡೆಸಿದರು.

ಎಂಎಲ್ಸಿ ಮಡಿಕೇರಿ ತಾಲ್ಲೂಕಿನ ವಿವಿಧ ಗ್ರಾಮಪಂಚಾಯ್ತಿ ವ್ಯಾಪ್ತಿಯ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಯೋಗಕ್ಷೇಮ ವಿಚಾರಿಸಿದರು.

ಧರ್ಮಸ್ಥಳ ಗ್ರಾಮಿಣಾಭಿವೃದ್ಧಿ ಯೋಜನೆ ಡಿಯಲ್ಲಿ ಕೊಡಗು ಜಿಲ್ಲಾಡಳಿತಕ್ಕೆ ಆಕ್ಸಿಜನ್ ಕಂಟೇನರ್ ವಿತರಿಸಲಾಯಿತು.

ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆಯಲ್ಲಿ ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ವ್ಯವಹಾರ ಸಂಘ ನಿಯಮಿತ ವತಿಯಿಂದ ಮುಂಚೂಣಿ ಕಾರ್ಯಕರ್ತರು ಮತ್ತು ಕೋವಿಡ್ ನಿಂದ ಮೃತಪಟ್ಟ ಕುಟುಂಬಸ್ಥರಿಗೆ ದಿನಸಿ ಕಿಟ್ ನೀಡಲಾಯಿತು.

ಕೊಡಗು ಕೇರಳ ಗಡಿಯಲ್ಲಿರುವ ಬಾಳುಗೋಡುವಿನ ವಸತಿಶಾಲೆಯನ್ನು ಕೋವಿಡ್ ಸೆಂಟರ್ ಆಗಿ ಮಾರ್ಪಡಿಸಿದ್ದು,ಸ್ಥಳಕ್ಕೆ ಭೇಟಿ ನೀಡಿದ ಎಂಎಲ್ಸಿ ಸುನಿಲ್ ಸುಬ್ರಮಣಿ,ಆಹಾರ ಮತ್ತು ಇತರೆ ವ್ಯವಸ್ಥೆ ಪರಿಶೀಲಿಸಿದರು.

ಲಾಕ್ಡೌನಿಂದ ಸಂಕಷ್ಟಕ್ಕೆ ಸಿಲುಕಿರುವ ಸುಂಟಿಕೊಪ್ಪ 100,ಕೊಡಗರಳ್ಳಿಗೆ 100, 7ನೇ ಹೊಸಕೊಟೆ ಪಂಚಾಯ್ತಿ 50 ಆಹಾರ ಕಿಟ್ ಗಳನ್ನು ಅಂಗವಿಕಲ ಮತ್ತು ಬಡ ಕುಟುಂಬಳಿಗೆ ಗಣೇಶ್ ಬೀಡಿ ಮಾಲೀಕರು ಹಸ್ತಾಂತರಿಸಿದರು.

ಸ್ತ್ರೀ ಶಕ್ತಿ ಸಂಜೀವಿನಿ ಒಕ್ಕೂಟದ ಸದಸ್ಯರಿಂದ
ಚೂರಿಕಾಡು ಕಾಲೋನಿಯ ಬಡಕುಟುಂಬಳಿಗೆ ಮಾಸ್ಕ್ ವಿತರಣೆ.

ಸಂಪಾಜೆ ಗ್ರಾ.ಪಂ ವ್ಯಾಪ್ತಿಯಲ್ಲಿ ಕಂಡುಬಂದ ಪಾಸಿಟಿವ್ ಪ್ರಕರಣದ 6 ಮಂದಿಯನ್ನು ಟಾಸ್ಕ್ ಫೋರ್ಸ್ ತಂಡದೊಂದಿಗೆ ತೆರಳಿ ಮನವೊಲಿಸಿ ಕೋವಿಡ್ ಸೆಂಟರ್ ಗೆ ಕಳುಹಿಸಿಕೊಡಲಾಯಿತು.

ಮೇಕೇರಿ ಗ್ರಾ.ಪಂ ಬಿಳಿಗೇರಿ ಗ್ರಾಮದಲ್ಲಿ ನಿರ್ಮಾಣಗೊಂಡ ಪುನರ್ವಸತಿ ಪ್ರದೇಶದಲ್ಲಿ MGNREGA ಯೋಜನೆಯಡಿಯಲ್ಲಿ ಸಸಿ ನೆಡಲಾಯಿತು.

ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ನಿರಂತರವಾಗಿ ಕಳೆದ 14 ತಿಂಗಳಿನಿಂದ 310 ಮೃತದೇಹಗಳನ್ನು ಅಂತ್ಯ ಸಂಸ್ಕಾರಕ್ಕೆ ಸಿದ್ಧಗೊಳಿಸುತ್ತಿರುವ ರಾಬಟ್೯ ಮತ್ತು ಹುಸೇನ್ ರವರಿಗೆ ಮೈಸೂರಿನ ಯೋಗೋದಾ ಸತ್ಸಂಗ ಧ್ಯಾನ ಕೇಂದ್ರದಿಂದ ಗೃಹಪಯೋಗಿ ವಸ್ತುಗಳು ಮತ್ತು ಧನಸಹಾಯ ಮಾಡಲಾಯಿತು.

ಭಾಗಮಂಡಲ ಗ್ರಾ.ಪಂ ವ್ಯಾಪ್ತಿಯಲ್ಲಿ FSTP ಘಟಕದ ಕಾಮಗಾರಿ.ಇದು ಗ್ರಾಮೀಣ ಕರ್ನಾಟಕದಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಘಟಕ.

error: Content is protected !!