fbpx

‘Boycott China Products’ ಕೂಗು ವಾಸ್ತವವಾಗಲು ಸಾಧ್ಯವೇ…!

ಸ್ವದೇಶಿ ಉದ್ಯಮಗಳು ಬೆಳೆಸಬೇಕು ಎಂಬುದು ಮಹಾತ್ಮ ಗಾಂಧಿಯ ಮಹತ್ತರ ಕನಸಾಗಿತ್ತು. ಆದರೆ ನಾವು ಭಾರತೀಯರು ಇಂದು ನಮ್ಮ ಸ್ವದೇಶಿ ಕೈಗಾರಿಕೆಗಳನ್ನು ಅವಸಾನದಂಚಿಗೆ‌ ಅಳಿಯುವಂತೆ ಮಾಡಿ, ಪರದೇಶಿ ಉತ್ಪನ್ನಗಳಿಗೆ ಮಾರು ಹೋಗಿದ್ದೇವೆ. ಪರಿಣಾಮವಾಗಿ ವಿದೇಶಿ ಬಂಡವಾಳ ಹೂಡಿಕೆದಾರರಿಗೆ  Red Carpet ಹಾಸಿ ಸ್ವಾಗತ ಕೋರಿ, ಅವರು ಅಧಿಪತ್ಯ ಸಾಧಿಸಲು ದಾರಿ ಸುಲಲಿತವಾಗಿಸಿದ್ದೇವೆ. ಅದರಲ್ಲೂ ಚೀನಾ ತನ್ನ ಕಬಂದ ಬಾಹುಗಳ ಚಾಚಿ, ಹಿಡಿತವನ್ನು ನಿಯಂತ್ರಣಕ್ಕೆ ಸಿಗದಷ್ಟು ಚಾಚಿ ಭಾರತದ ಮಾರುಕಟ್ಟೆಯಲ್ಲಿ ಸಾಧಿಸಿಬಿಟ್ಟಿದೆ.

ಭಾರತದ ಆವತ್ತಿನ ಭಾರತದ ಪ್ರಧಾನಿ ನೆಹರು ಜೊತೆಗೆ ಅಂದಿನ ಚೀನಾದ ಅಧ್ಯಕ್ಷ ಮಾವೋ ತ್ಸೆ ತುಂಗ್

ಭಾರತದಿಂದ ಚೀನಾ ಸಾವಯವ ರಾಸಾಯನಿಕ, ಅದಿರು, ಸ್ಲ್ಯಾಗ್ ಮತ್ತು ಬೂದಿ, ನೈಸರ್ಗಿಕ ಮುತ್ತುಗಳು, ಅಮೂಲ್ಯ ಕಲ್ಲುಗಳು, ಅಮೂಲ್ಯ ಲೋಹ, ಹತ್ತಿ, ನೂಲು, ನೇಯ್ದ ಬಟ್ಟೆಗಳನ್ನು ರಫ್ತು ಮಾಡಿದರೆ, ಚೀನಾದಿಂದ ದುಬಾರಿ ಮೊತ್ತದ ವಿದ್ಯುತ್ ಯಂತ್ರೋಪಕರಣಗಳನ್ನು, ಧ್ವನಿ ಉಪಕರಣ, ದೂರದರ್ಶನ ಉಪಕರಣ ಮತ್ತು ಅದರ ಬಿಡಿ ಭಾಗಗಳು, ಪರಮಾಣು ರಿಯಾಕ್ಟರ್ ಗಳು, ಬಾಯ್ಲರ್, ಸಾವಯವ ರಾಸಾಯನಿಕಗಳು,‌ಪ್ಲಾಸ್ಟಿಕ್ ಮತ್ತು ಇತರೆ ಉಪ ವಸ್ತುಗಳು, ಕಬ್ಬಿಣ ಇತ್ಯಾದಿಯನ್ನು ಆಮದು ಮಾಡಿಕೊಳ್ಳುತ್ತೇವೆ.

ಅಮೇರಿಕಾದ ನಂತರ ಅತಿ ಹೆಚ್ಚು ವ್ಯಾಪಾರ ವಹಿವಾಟನ್ನು ಚೀನಾದ ಜೊತೆ ಮಾಡುತ್ತಿರುವುದು ಭಾರತವೇ ಆಗಿದೆ. 2008ರ ಹೊತ್ತಿಗೆಲ್ಲಾ ಚೀನಾ ದೇಶ ಭಾರತದೊಂದಿಗೆ ಅತಿ ಹೆಚ್ಚು ವ್ಯಾಪಾರ ಮಾಡುವ ದೇಶವಾಯಿತು. ಇದು ಗಣನೀಯವಾಗಿ ಹೆಚ್ಚುತ್ತಾ, 2011ರ ಹೊತ್ತಿಗೆಲ್ಲಾ 73.9 ಬಿಲಿಯನ್ ಮೊತ್ತಕ್ಕೆ ತಲುಪಿತ್ತು. 2018ರ ಸಮಯಕ್ಕೆ 95.7 ಬಿಲಿಯನ್ ರೂಪಾಯಿಯಷ್ಟು ಜಾಸ್ತಿಯಾಯಿತು.

ಸಾಂದರ್ಭಿಕ ಚಿತ್ರ

ಪ್ರತಿಷ್ಠಿತ 100ಕ್ಕಿಂತ ಹೆಚ್ಚಿನ ಚೀನೀ ಕಂಪೆನಿಗಳು ಅತ್ಯಧಿಕ ಬಂಡವಾಳ ಹೂಡಿ ತಮ್ಮ ಕಛೇರಿಗಳನ್ನು ಭಾರತದಲ್ಲಿ ಕಾರ್ಯೋನ್ಮುಕವಾಗಿವೆ. ಅವುಗಳಲ್ಲಿ ಪ್ರಮುಖವಾದವೆಂದರೆ Sinosteel, Shougang International, Baoshan Iron and Steel Ltd, Sang Heavy Industry LTD, Chongqing Lifan Industry Ltd, China Dongfang International,Sino Hydro Corporation ಇತ್ಯಾದಿ. Hardware ಉತ್ಪಾದನೆಯ ಚೀನೀ ಕಂಪೆನಿಗಳಲ್ಲಿ ಮುಖ್ಯವಾಗಿ Huawei Technologies, ZTE, TCL, Haier ಇತ್ಯಾದಿ. ಚೀನೀ ಮೊಬೈಲ್ ಕಂಪೆನಿಗಳಲ್ಲಿ ಪ್ರಮುಖವಾಗಿ Xiaomi ಭಾರತದಲ್ಲಿ ಮಾರಟವಾಗುವುದರಲ್ಲಿ Top 1ನಲ್ಲಿದೆ. ಜೊತೆಗೆ ಚೀನಾದ‌ Vivo, Oppo, Realme ಮೊಬೈಲ್ ಗಳೂ ಕೂಡ ಮಾರುಕಟ್ಟೆಯ‌‌ 50%ನಷ್ಟು ಪಾಲು ಮಾರಾಟದ ಬೇಡಿಕೆಯನ್ನು ಹೊಂದಿವೆ.

ಇದೀಗ ಚೀನಾ ಹರಡಿದ ಕೊರೋನಾ ಸೊಂಕು ಇಡೀ ವಿಶ್ವವನ್ನೇ ಭಾದಿಸುತ್ತಿದ್ದು, ಗಿಲ್ವಾನ್ ಗಡಿ ಪ್ರದೇಶದಲ್ಲಿ ಸಮರ ಕಾವು ಏರಿಸುತ್ತಿದೆ. ಹೀಗೆ‌ ನಂಬಿಕೆ‌ದ್ರೋಹ ಮಾಡುತ್ತಿರುವ ಚೀನಾದೊಂದಿಗಿನ ಎಲ್ಲಾ ವ್ಯಾಪಾರವನ್ನು ನಿಲ್ಲಿಸಬೇಕೆಂಬ ಬೇಡಿಕೆಯನ್ನು ಭಾರತೀಯರು ಇಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ‌ ಅವರು ಕೂಡ ‘ಭಾರತ ಆತ್ಮನಿರ್ಭರ್ ಆಗಬೇಕು’ ಎಂಬ ಕನಸನ್ನು ಬಿತ್ತಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗು ಚೀನಾ ಅಧ್ಯಕ್ಷ ಜ಼ೀ ಜಿನ್ಪಿಂಗ್

ಆ ದಾರಿ ನಾವು ಹೇಳಿದಷ್ಟು ಸುಲಭವಿಲ್ಲ. ಏಕೆಂದರೆ ಭಾರತ ಚೀನಾದೊಂದಿಗೆ ವಿದ್ಯುತ್ ಉಪಕರಣಗಳನ್ನು 60%ದಷ್ಟು ಕೊಂಡುಕೊಳ್ಳುತ್ತದೆ. ಚೀನೀ ಮೊಬೈಲ್ ಕಂಪೆನಿಗಳು 60% ಮಾರಾಟವಾಗುತ್ತವೆ. ಆಟೋಮೊಬೈಲ್ ಕ್ಷೇತ್ರವೂ 30%ನಷ್ಟು ಚೀನಾ ಉತ್ಪನ್ನಗಳೇ ಸ್ಥಾನವನ್ನು ಪಡೆದಿದೆ. ಮಕ್ಕಳ ಆಟಿಕೆಗಳ ಮಾರುಕಟ್ಟೆಯಲ್ಲೂ 90%ನಷ್ಟು ಚೀನಾ ಪಾರುಪತ್ಯ ಸಾಧಿಸಿದೆ. ಬೈಸೈಕಲ್ ಗಳ ಮಾರುಕಟ್ಟೆಯಲ್ಲೂ 50% ಮಾರಾಟವನ್ನು ಹೊಂದಿದೆ. ಭಾರತ ಬಹುತೇಕ ಮಾರುಕಟ್ಟೆ ಅವಲಂಭಿಸುತ್ತಿರುವುದು ಚೀನಾದ ಕಂಪೆನಿಗಳ ಉತ್ಪ‌ನ್ನಗಳ ಮೇಲೆಯೇ.ಆದರೆ ಭಾರತ ರಫ್ತು ಮಾಡುವುದು ಕೇವಲ 2%ಮಾತ್ರವೇ ಎಂಬದನ್ನು ನಾವು ಕಷ್ಟವಾದರೂ ನಂಬಲೇ ಬೇಕಿದೆ.

ಆತ್ಮನಿರ್ಭರ್ ಆಗಲು “Make in Indiaಒಂದೇ ಮಾರ್ಗ

ಭಾರತದ ಸ್ಥಿತಿ ಹೀಗೆ ದುರ್ಬರವಾಗಿರುವಾಗ, ಚೀನಾದ ಮೇಲೆ ಅವಲಂಭಿತವಾಗದೆ ಎಲ್ಲವನ್ನೂ ನಾವು ಉತ್ಪಾದಿಸುತ್ತೇವೆ ಅಥವಾ ಬೇರೆ‌ ದೇಶಗಳಿಂದ ಆಮದು ಮಾಡಿಕೊಳ್ಳುತ್ತೇವೆ ಎಂಬುದು ಹಗಲು ಕನಸಿನಂತಾಗುತ್ತದೆ. ‘Boycott China’ ಕನಸು ವಾಸ್ತವವಾಗಲು ಮತ್ತು ಆತ್ಮನಿರ್ಬರ್ ಆಗಿ ದೇಶವನ್ನು ಕಟ್ಟಲು ಉತ್ಪಾದನಾ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಬೇಕು. ಅದು ನಮಗೆ ಒಂದು ಸವಾಲೇ ಆಗಿದ್ದು, ಆ ಸಾಹಸಕ್ಕೆ ಭಾರತ ಅಣಿ ಆಗಿ ಸವಾಲನ್ನು ಸ್ವೀಕರಿಸಿದಂತೆ ಕಾಣುತ್ತಿದೆ!

error: Content is protected !!