8 ಕೋಟಿ ಜನರನ್ನು ಉದ್ದೇಶಿಸಿ ರಾಷ್ಟ್ರೀಯ ಸಹಕಾರ ಸಮ್ಮೇಳನದಲ್ಲಿ ಮಾತನಾಡಲಿರುವ ಅಮಿತ್ ಶಾ

ನವದೆಹಲಿ(ಸೆ.24): ಕೇಂದ್ರ ಸಹಕಾರ ಖಾತೆ ಸಚಿವರಾಗಿರುವ ಅಮಿತ್‌ ಶಾ(Amit Shah), ಶುಕ್ರವಾರ ರಾಷ್ಟ್ರೀಯ ಸಹಕಾರ ಸಮ್ಮೇಳನ(National Cooperative Conference) ಉದ್ದೇಶಿಸಿ ಮಾತನಾಡಲಿದ್ದಾರೆ. ದೆಹಲಿಯ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ(Indira Gandhi Indoor Stadium) ಆಯೋಜನೆಗೊಂಡಿರುವ ಈ ಕಾರ್ಯಕ್ರಮದಲ್ಲಿ 2000 ಜನರು ಭಾಗಿಯಾಗಲಿದ್ದಾರೆ.

ಉಳಿದಂತೆ ವಿವಿಧ ರಾಜ್ಯಗಳಿಂದ ಸಹಕಾರ ಸಚಿವರು ಮತ್ತು ಸಹಕಾರ ವಲಯದ ಸುಮಾರು 8 ಕೋಟಿ ಜನರು ವಚ್ರ್ಯುವಲ್‌ ಆಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಅಮಿತ್‌ ಶಾ(Amit Shah) ಅವರು ಕೇಂದ್ರ ಸಹಕಾರ ಸಚಿವರಾಗಿ ನಿಯುಕ್ತಿಗೊಂಡ ಬಳಿಕ ದೇಶದ ಸಹಕಾರಿ ವಲಯವನ್ನು ಉದ್ದೇಶಿಸಿ ಮಾತನಾಡುತ್ತಿರುವ ಮೊದಲ ಕಾರ್ಯಕ್ರಮ ಇದಾಗಿದೆ. ಹೀಗಾಗಿ ಅಮಿತ್‌ ಶಾ ತಮ್ಮ ಭಾಷಣದಲ್ಲಿ ದೇಶದ ಸಹಕಾರ ವಲಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ತಮ್ಮ ಸಚಿವಾಲಯದ ದೂರದೃಷ್ಟಿಯನ್ನು ಪ್ರಸ್ತುತ ಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಸಮಾವೇಶ ಆಯೋಜಿಸುವ ಮೂಲಕ ಕೇಂದ್ರ ಸರ್ಕಾರ ಸಹಕಾರ ವಲಯದ ಏಳಿಗೆಗೆ ಬದ್ಧವಾಗಿದೆ ಎಂಬ ಸಂದೇಶವನ್ನು ರವಾನಿಸಿದೆ ಎಂದು ಇಂಡಿಯನ್‌ ಫಾರ್ಮರ್ಸ್‌ ಫರ್ಟಿಲೈಸರ್‌ ಕೊ-ಆಪರೇಟಿವ್‌ ಲಿ.(ಭಾರತೀಯ ರೈತರು ರಸಗೊಬ್ಬರ ಸಹಕಾರ ಲಿ.) ಹೇಳಿದೆ.

error: Content is protected !!