fbpx

75 ಬಾರಿ ಹಾವಿನಿಂದ ಕಡಿತಕ್ಕೆ ಒಳಗಾದರೂ ಬಾಚಾವಾಗಿದ್ದ ಡೇನಿಯಲ್ ಹಾವಿನಿಂದಲೇ ಮೃತರಾದರು!

ಬಾಗಲಕೋಟೆ: ಹಾವು ಹಿಡಿಯುವುದು ಒಂದು ಕಲೆ. ಆ ಕಲೆ ಎಲ್ಲರಿಗೂ ಬರುವುದಿಲ್ಲ. ಕೆಲ ಜಿಲ್ಲೆಗಳಲ್ಲಿ ಹಾವು ಸಂರಕ್ಷಿಸುವವರಿದ್ದಾರೆ. ಉದಾಹರಣೆಗೆ ಸ್ನೇಕ್ ಶ್ಯಾಮ್, ಸ್ನೇಕ್ ಕೀರ್ತಿ ಹೀಗೆ. ಅದರಲ್ಲಿ ಬಾಗಲಕೋಟೆಯ ಸ್ನೇಕ್ ಡೇನಿಯಲ್ ನ್ಯೂಟನ್ ಕೂಡ ಒಬ್ಬರು.

ಇವರೆಲ್ಲಾ ಹಾವು ಹಿಡಿಯುವಾಗ ಅವುಗಳಿಂದ ಕಡಿತಕ್ಕೊಳಗಾಗುವುದಿಲ್ಲ ಅಂತ ಏನಿಲ್ಲ. ಅವರು ಕೂಡ ಕಡಿತಕ್ಕೊಳಗಾಗಿ ಪ್ರಾಣ ಉಳಿಸಿಕೊಂಡು ಬಂದಿದ್ದಾರೆ. ಅದರಲ್ಲಿ ಡೇನಿಯಲ್ ಕೂಡ ಹೊರತಾಗಿಲ್ಲ. ಸುಮಾರು 75 ಬಾರಿ ಹಾವಿನಿಂದ ಕಡಿಸಿಕೊಂಡು ಬಚಾವ್ ಆಗಿದ್ದಾರೆ.

ಆದ್ರೆ ಕಡೆ ಬಾರಿ ಅವರ ವಿಧಿ ಕೈಕೊಟ್ಟಿತ್ತು ಅಂತ ಕಾಣುತ್ತೆ. ದೊಡ್ಡ ಹಾವುಗಳಿಂದ ಬಚಾವ್ ಆದ ಡೇನಿಯಲ್ ಹಾವಿನ ಮರಿಯಿಂದ ಕಚ್ಚಿಸಿಕೊಂಡು ಸಾವನ್ನಪ್ಪಿದ್ದಾರೆ.

ಬಾಗಲಕೋಟೆ ತಾಲೂಕಿನ ಸೀಗೀಕೇರಿಯಲ್ಲಿ ಈ ಘಟನೆ ನಡೆದಿದ್ದು, ಅಲ್ಲಿನ ಗ್ರಾಮದ ಮನೆಯೊಂದರಲ್ಲಿ ಹಾವು ಸೇರಿಕೊಂಡಿತ್ತು.

ಅದನ್ನು ಹಿಡಿಯುವ ಸಲುವಾಗಿ ಡೇನಿಯಲ್ ಹೋಗಿದ್ದಾರೆ. ಹಾವು ಹಿಡಿಯುವ ವೇಳೆ ಕಚ್ಚಿದ್ದು, ದುರಂತ ಸಾವಿಗೀಡಾಗಿದ್ದಾರೆ. ಅವರು ಸುಮಾರು 3279 ಹಾವುಗಳನ್ನು ರಕ್ಷಣೆ ಮಾಡಿದ್ದಾರೆ.

error: Content is protected !!