75ನೇ ಅಮೃತ ಸ್ವಾತಂತ್ರ್ಯ ಮಹೋತ್ಸವದ ಸಂಭ್ರಮಕ್ಕೆ ‘ಹರ್ ಘರ್ ತಿರಂಗಾ’

ಕೊಡಗು ಜಿಲ್ಲೆಯಾದ್ಯಂತ 75ನೇ ಅಮೃತ ಸ್ವಾತಂತ್ರ್ಯ ಮಹೋತ್ಸವದ ಸಂಭ್ರಮ ಹಿನ್ನಲೆಯಲ್ಲಿ ಹರ್ಷ ಘರ್ ತಿರಂಗಾ ಅಭಿಯಾನ ನಡೆಸಲಾಯಿತು.
ಮಡಿಕೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಹಲವು ಸಂಘ ಸಂಸ್ಥೆಗಳಿಂದ ಜೊತೆಗೂಡಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಸೇರಿದಂತೆ ಹಿರಿಯ ಅಧಿಕಾರಿಗಳು ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸುವ ಮೂಲಕ ರಾಷ್ಟ್ರ ಧ್ವಜ, ಸ್ವಾತಂತ್ರ್ಯ ದಿನದ ಮಹತ್ವ ನೀಡಿದರು.
ಅದರಂತೆ ವಿರಾಜಪೇಟೆ, ಕುಶಾಲನಗರ, ಪೊನ್ನಂಪೇಟೆ, ಸೋಮವಾರಪೇಟೆಯ ಭಾಗದ ತಹಶೀಲ್ದಾರ್ ಈ ಅಭಿಯಾನವನ್ನು ನಡೆಸಿದರು.