fbpx

ಹರಸಾಹಸದೊಂದಿಗೆ 20 ಆನೆಗಳ ಹಿಂಡು ಕಾಡಿಗೆ ವಾಪಸ್!

ಅಲ್ಲಿ ಇದ್ದದ್ದು ಒಂದಲ್ಲಾ ಎರಡಲ್ಲ, ಬರೋಬ್ಬರಿ 20 ಕಾಡಾನೆಗಳು ದಿಕ್ಕೇ ಕಾಣದೆ ಕಾಫಿ ತೋಟದಲ್ಲೆಲ್ಲಾ ಅಡ್ಡಾಡುತ್ತಿದ್ದವು, ಇದರ ಪರಿಣಾಮ ಕಾಫಿ ಗಿಡಗಳೆಲ್ಲಾ ನೆಲಕಚ್ಚಿದ್ದವು.ಹೌದು ಈ ದೃಶ್ಯ ಕಂಡು ಬಂದಿದ್ದು ದಕ್ಷಿಣ ಕೊಡಗಿನ ವಿರಾಜಪೇಟೆ ತಾಲ್ಲೂಕಿನ ಪೊನ್ನಂಪೇಟೆ ಹೋಬಳಿ ತಿತಿಮತಿ ಗ್ರಾಮದ ಕ್ಲಬ್ ಭದ್ರಗೋಳದಲ್ಲಿ. ಇಲ್ಲಿನ ವಾಟೆರಿರ ವಿನು ಎಂಬುವವರಿಗೆ ಸೇರಿದ ಕಾಫಿ ತೋಟದಲ್ಲಿ ಇಷ್ಟೊಂದು ಆನೆಗಳನ್ನು ಎದೆ ಒಡೆದು ಹೋಗುವುದೊಂದೇ ಬಾಕಿ ಇತ್ತು. ಇದೇ ಹಿಂಡು ಇಲ್ಲಿಗೆ ಸಮೀಪದ ಕಾಣತಂಡ ನವೀನ್ ನವರ ತೋಟಕ್ಕೂ ನುಗ್ಗಿ ಬೆಳೆ ನಾಶ ನಡೆಸಿದವು.

ತಕ್ಷಣ ಎಚ್ಚೆತ್ತುಕೊಂಡ ನವೀನ ರಾಜ್ಯ ರೈತ ಸಂಘದ ಮೂಲಕ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು. ಕೆಲವು ಗಂಟೆಗೂ ಬಳಿಕ ಸ್ಥಳಕ್ಕೆ ದೌಡಾಯಾಸಿದ ಎಸಿಫ್ ಉತ್ತಪ್ಪರಿಗೆ ಸದ್ಯದ ಪರಿಸ್ಥಿತಿ ವಿವರಿಸಿದರು, ಬಳಿಕ ಹರಸಾಹಸ ಪಟ್ಟು ಕಾಡಾನೆಗಳನ್ನು ಕಾಡಿಗೆ ವಾಪಸ್ ಕಳಿಸುವ ಕಾರ್ಯ ನಡೆಸಲಾಯಿತು.

error: Content is protected !!