fbpx

ಇಬ್ಬರಿಗೆ ಗುಂಡು ಹಾರಿಸಿ ವ್ಯಕ್ತಿ ಆತ್ಮಹತ್ಯೆ!

ಕೊಡಗಿನಲ್ಲಿ ಗುಂಡು ಹಾರಿಸಿ ಇಬ್ಬರ ಹತ್ಯೆ, ಗುಂಡು ಹಾರಿಸಿದಾತ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕಿರಗೂರು ಗ್ರಾಮದಲ್ಲಿ ನಡೆದ ದುರ್ಘಟನೆ ಇದಾಗಿದೆ. ಗ್ರಾಮದ ಮಧು (42), ಯಶೋಧ (63) ಗುಂಡೇಟಿಗೆ ಬಲಿಯಾದವರು ಎಂದು ತಿಳಿದು ಬಂದಿದೆ.

ಕೃತ್ಯ ನಡೆಸಿದ ಬಳಿಕ ಸಾಗರ್ 53 ಪಕ್ಕದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯ ಆವರಣದಲ್ಲಿಯೇ ನಡೆದ ಕೃತ್ಯ ಇದಾಗಿದೆ. ಸ್ಥಳಕ್ಕೆ ಪೋಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ

error: Content is protected !!