5 ವರ್ಷಗಳಿಂದ ಸೋಫಾದ ಮೇಲಿತ್ತು ಹೆಣ!

ಇತ್ತೀಚಿನ ದಿನಗಳಲ್ಲಿ ಜನರು ಸ್ವಾರ್ಥಿಗಳಾಗ್ತಿದ್ದಾರೆ. ತಮ್ಮದೇ ಲೋಕದಲ್ಲಿ ಜೀವಿಸುವ ಜನರು ಅಕ್ಕಪಕ್ಕದವರ ಬಗ್ಗೆ ಗಮನ ನೀಡುವುದಿಲ್ಲ. ಪಕ್ಕದ ಮನೆಯಲ್ಲಿ ಗಲಾಟೆಯಾಗ್ತಿದ್ದರೂ ತಮಗ್ಯಾಕೆ ಎಂದು ಸುಮ್ಮನಾಗ್ತಾರೆ. ನಂಬಿ ಮೋಸ ಹೋಗುವ ಬದಲು ಸಹವಾಸ ಬೇಡ ಎಂದು ದೂರವಿರ್ತಾರೆ. ಆದ್ರೆ ಈ ದೂರ ಕೆಲವೊಮ್ಮೆ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆ. ಅತಿ ಅಲ್ಲವೆಂದ್ರೂ ಸ್ವಲ್ಪ ಮಟ್ಟಿಗಾದ್ರೂ ಅಕ್ಕಪಕ್ಕದವರ ಆಗು-ಹೋಗುಗಳ ಬಗ್ಗೆ ಗಮನ ನೀಡಬೇಕು. ಇಲ್ಲವಾದ್ರೆ ಸ್ಪೇನ್ ನಲ್ಲಿ ನಡೆದ ಘಟನೆ ನಮ್ಮಲ್ಲಿಯೂ ನಡೆಯುತ್ತೆ.

ಸ್ಪೇನ್ ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. 55 ವರ್ಷದ ವ್ಯಕ್ತಿ ಶವ ಐದು ವರ್ಷಗಳ ನಂತ್ರ ಸಿಕ್ಕಿದೆ. ಅದೂ ಮನೆಯ ಸೋಫಾ ಮೇಲೆ ವ್ಯಕ್ತಿ ಶವ ಸಿಕ್ಕಿದೆ. ಬರ್ನಾಟ್ ಮಾಸ್ಕ್ವಿಡಾ ಬಾರ್ಸಿಲೊನ ಅಕ್ಕಪಕ್ಕದ ಮನೆಯವರು ಅನೇಕ ದಿನಗಳಿಂದ ಈತ ಕಾಣ್ತಿಲ್ಲವೆಂದು ಪೊಲೀಸರಿಗೆ ಹೇಳಿದ್ದರು.

ಬರ್ನಾಟ್ ಮಾಸ್ಕ್ವಿಡಾ ಬಾರ್ಸಿಲೊ ಮನೆಗೆ ಬಂದ ಪೊಲೀಸರು ಬಾಗಿಲು ತಟ್ಟಿದ್ದಾರೆ. ಆದ್ರೆ ಬಾಗಿಲು ಒಳಗಿಂದ ಲಾಕ್ ಆಗಿತ್ತು. ಒಳಗಿಂದ ಯಾವುದೇ ಶಬ್ಧ ಬರ್ತಿರಲಿಲ್ಲ. ಪಕ್ಕದ ಮನೆಯವನ ಬಳಿ ಇದ್ದ ನಕಲಿ ಕೀ ಬಳಸಿ ಬಾಗಿಲು ತೆರೆದಿದ್ದಾರೆ. ಮನೆಯೊಳಗೆ ವಾಸನೆ ಬರ್ತಿತ್ತು ಎನ್ನಲಾಗಿದೆ. ಸೋಫಾ ಮೇಲೆ ಬರ್ನಾಟ್ ಮಾಸ್ಕ್ವಿಡಾ ಬಾರ್ಸಿಲೊ ಶವ ಸಿಕ್ಕಿದೆ. ಶವದ ಮೇಲೆ ಕಂಬಳಿಯಿತ್ತು. ಶವ ಸಂಪೂರ್ಣ ಕೊಳೆತು ಹೋಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಮೃತ ವ್ಯಕ್ತಿ ಮನೆಯನ್ನು ಕೊಳಕಾಗಿಟ್ಟುಕೊಂಡಿದ್ದ. ಆತನಿಗೆ senile squalor syndrome ಇತ್ತು ಎನ್ನಲಾಗಿದೆ. ಈ ರೋಗದಿಂದ ಬಳಲುವ ವ್ಯಕ್ತಿಗಳು ಕೊಳಕಿನಲ್ಲಿರುತ್ತಾರೆ. ಅನೇಕ ದಿನಗಳ ಕಾಲ ಸ್ನಾನ ಮಾಡುವುದಿಲ್ಲ. ಸುಮಾರು ನಾಲ್ಕರಿಂದ ಐದು ವರ್ಷಗಳ ಹಿಂದೆ ಆತ ಸಾವನ್ನಪ್ಪಿದ್ದಾನೆಂದು ಪೊಲೀಸರು ಅಂದಾಜಿಸಿದ್ದಾರೆ. ಆದ್ರೆ ಸಾವಿಗೆ ಕಾರಣ ತಿಳಿದು ಬಂದಿಲ್ಲ.

error: Content is protected !!