ದುಶ್ಕರ್ಮಿಗಳಿಂದ ದೇವಸ್ಥಾನದ ಬಸವ ವಿಗ್ರಹ ವಿಕೃತಿ!

ಪೊನ್ನಂಪೇಟೆ ತಾಲ್ಲೂಕು ಬೊಟ್ಯತ್ ನಾಡಿಗೆ ಸೇರುವ ಕುಂದ ಬೆಟ್ಟ ಎಂದು ಖ್ಯಾತಿ ಪಡೆದಿರುವ ಬೋಟ್ಲಪ್ಪ ದೇವಸ್ಥಾನಕ್ಕೆ ಮತಾಂಧರುಗಳು ದಾಳಿ ಮಾಡಿದ್ದು, ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.

ಪಾಂಡವರು ಆಜ್ಞಾತ ವಾಸ ಬಂದ ಸಂದರ್ಭ ನಿರ್ಮಿಸಲಾದ ದೇವಾಲಯ ಎಂದು ಹೇಳಲಾಗುವ ಬೋಟ್ಲಪ್ಪ ದೇಗುಲದ ಮೇಲ್ಚಾವಣಿ ನಾಲ್ಕು ತುದಿಯಲ್ಲಿನ ಬಸವ ವಿಗ್ರಹಕ್ಕೆ ಹಾನಿ ಮಾಡಲಾಗಿದೆ. ಕತ್ತಿನ ಭಾಗವನ್ನು ಕತ್ತರಿಸಿ ಹಾಕಲಾಗಿದೆ. ಈ ಸಂಬಂಧ ತಕ್ಕ ಮುಖ್ಯಸ್ಥರು ಆಗಮಿಸಿ ಪರಿಶೀಲನೆ ನಡೆಸಿ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.

error: Content is protected !!