fbpx

ಕೊಡಗು Quick RoundUp

1.ಮತ್ತೆ ಲಾಕ್ಡೌನ್: ಸಿ.ಎಂ ಎಚ್ಚರಿಕೆ

ರಾಜ್ಯದಲ್ಲಿ ಎರಡನೇ ಅಲೆ ಕೊರೋನಾ ನಿರ್ವಹಣೆಗೆ ಮಾದರಿಯಾಗಿದ್ದು ಸಾರ್ವಜನಿಕರು ಕೋವಿಡ್ ನಿಯಮ ಪಾಲಿಸದಿದ್ದಲ್ಲಿ ಮತ್ತೆ ಲಾಕ್ಡೌನ್ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಎಚ್ಚರಿಸಿದ್ದಾರೆ.

2.ಶಿಕ್ಷಣ ಸಚಿವರ ಸಂವಾದ

ಜುಲೈ 9ರಿಂದ ಶಿಕ್ಷಣ ಸಚಿವ ಎಸ್ ಸುರೇಶ್ ರವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆತ್ಮ ಸ್ಥೈರ್ಯ ತುಂಬುವ ಸಲುವಾಗಿ ಐದು ದಿನಗಳ ಕಾಲ ಬೆಳಗ್ಗೆ 11 ಗಂಟೆಯಿಂದ ಮದ್ಯಾಹ್ನ 1.30 ರವರೆಗೆ ಲ‌ರಾಜ್ಯದ ಪ್ರತೀ ಜಿಲ್ಲೆಯ ಆಯ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

3 ಪುನರ್ವಸು ಮಳೆ,12ಕ್ಕೆ ಜಿಲ್ಲೆಯಲ್ಲಿ ಅಬ್ಬರ

ಜುಲೈ 6ರಿಂದ ಪುನರ್ವಸು ಮಳೆ ಆರಂಭವಾಗಿದ್ದು ಜುಲೈ 9 ರಿಂದ 15 ರವರೆಗೆ ಪರಿಣಾಮ ತೀವ್ರ ಸ್ವರೂಪ ಇರುವುದಾಗಿ ಹವಮಾನ ಇಲಾಖೆ ಎಚ್ಚರಿಸಿದ್ದು 12 ರಂದು ಕೊಡಗಿನ ಭಾಗದಲ್ಲಿ ಮಳೆ ಅಬ್ಬರಿಸಲಿದೆ.

4.ಅಸಂಘಟಿತ ಕಾರ್ಮಿಕರಿಗೆ ಒಂದು ಬಾರಿ ನೆರವಿನ ಪ್ಯಾಕೇಜ್

ರಾಜ್ಯದಲ್ಲಿ ಕೋವಿಡ್-19ರ 2ನೇ ಅಲೆಯು ವ್ಯಾಪಕವಾಗಿ ಹರಡುತ್ತಿರುವ ಕಾರಣ ಲಾಕ್ಡೌನ್ ಜಾರಿಗೊಳಿಸಿರುವ ಪರಿಣಾಮವಾಗಿ ಕಾರ್ಮಿಕರಿಗೆ ಆರ್ಥಿಕವಾಗಿ ನಷ್ಟವಾಗಿರುವುದನ್ನು ಗಮನಿಸಿ, 11 ವರ್ಗಗಳ ಅಸಂಘಟಿತ ಕಾರ್ಮಿಕರಾದ ಅಗಸರು, ಕ್ಷೌರಿಕರು, ಗೃಹ ಕಾರ್ಮಿಕರು, ಟೈಲರ್ಗಳು, ಮೆಕ್ಯಾನಿಕ್, ಚಿಂದಿ ಆಯುವವರು, ಹಮಾಲರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು ಹಾಗೂ ಭಟ್ಟಿ ಕಾರ್ಮಿಕ ವೃತ್ತಿಯಲ್ಲಿ ತೊಡಗಿರುವ ಕಾರ್ಮಿಕರಿಗೆ ರೂ.2,000 ಗಳ ಒಂದು ಬಾರಿಯ ನೆರವಿನ ವಿಶೇಷ ಪ್ಯಾಕೇಜ್ ಘೋಷಿಸಲಾಗಿದ್ದು ಜುಲೈ 31 ಕೊನೆಯ ದಿನವಾಗಿದೆ.

5.ಅಕ್ರಮ ಮದ್ಯ ಮಾರಾಟ

ಸೋಮವಾರಪೇಟೆಯ ಗೋಣಿ ಮರೂರಿನಲ್ಲಿರುವ ಅಭಿಮಾನ್ ಹೋಟೇಲ್ ನಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಬೆನ್ನಲೇ 112 ವಿಭಾಗದ ಪೊಲೀಸರು ದಾಳಿ ನಡೆಸಿ 20 ಪ್ಯಾಕೆಟ್ ಮದ್ಯ ವಶಕ್ಕೆ ಪಡೆದಿದ್ದಾರೆ.

6.ಅಸಮಾಧಾನಿತರ ಪ್ರತಿಭಟನೆ

ಕುಶಾಲನಗರ ನೂತನ ತಾಲ್ಲೂಕು ಅಧಿಕೃತವಾಗಿ ಘೋಷಣೆ ಸಮಾರಂ‌ಭದಲ್ಲಿ ನಗರದ ವಿವಿಧ ಸಂಘಟನೆಯ ಹಾಗು ಕಾಂಗ್ರೆಸ್ ಮುಖಂಡರನ್ನು ಕಡೆಗಣಿಸಲಾಗಿದೆ ಎಂದು ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು.

7.ಹುಲಿಗೆ ಎತ್ತು ಬಲಿ

ಸೋಮವಾರಪೇಟೆಯ ಗರ್ವಾಲೆ ಗ್ರಾಮದ ಕುಬಾರಗಡಿಯಲ್ಲಿ ಮೇಯಲಃ ಬಿಟ್ಟಿದ್ದ ಕೆ.ಎಸ್ ಕಾರ್ಯಪ್ಪ ಎಂಬುವವರಿಗೆ ಸೇರಿದ ಎತ್ತನ್ನು ಹುಲಿ ಬಲಿ ಪಡೆದುಕೊಂಡಿದೆ.ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

8.ವಿದ್ಯಾರ್ಥಿಗಳಿಗೆ ಬಸ್ ಸೇವೆ

ಕೊವಿಡ್ ಸಂದರ್ಭ ಸಾರಿಗೆ ಇಲಾಖೆ ಹಲವು ಸಂಕಷ್ಟದಲ್ಲಿದ್ದು ಗಡಿ ಜಿಲ್ಲೆ ಕೇರಳಕ್ಕೆ ಹಲವು ಮಾರ್ಗಸೂಚಿ ನೀಡಿರುವ ಬೆನ್ನಲ್ಲೇ ಎಸ್ಸೆಸ್ಸೆಲ್ಸಿ,ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಸೂಕ್ತ,ಬಸ್ ವ್ಯವಸ್ಥೆ ಮಾಡುವುದಾಗಿ ಸಾರಿಡೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

9.ನವೆಂಬರ್ ವರೆಗೂ ಉಚಿತ ಅಕ್ಕಿ

ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿಯಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ಪ್ರತೀ ಸದಸ್ಯರಿಗೆ ತಲಾ 5 ಕೆ.ಜಿ ಅಕ್ಕಿ ನವೆಂಬರ್ ವರೆಗೂ ಉಚಿತವಾಡಿ ನೀಡಲಾಗುವುದೆಂದು ಸಂಸದ ಪ್ರತಾಪ್ ಸಿಂ
ಹ ತಿಳಿಸಿದ್ದಾರೆ.

10.ಬಾರಿಕೆ ದಿನೇಶ್ ಕುಮಾರ್ ವರ್ಗ

ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಕಳೆದ ಎರಡು ವರ್ಷಗಳಿಂದ ಡಿವೈಎಸ್ಪಿಯಾಗಿ ಉತ್ತಮ ಹಾಗು ದಕ್ಷತೆಯಿಂದ ಕಾರ್ಯ ನಿರ್ವಹಿಸಿದ್ದ ಬಾರಿಕೆ ದಿನೇಶ್ ಕುಮಾರ್ ಮಂಗಳೂರು ಅಪರಾಧ ಮತ್ತು ಸಂಚಾರ ವಿಭಾಗಕ್ಕೆ ಉಪ ಪೋಲಿಸ್ ಆಯುಕ್ತರಾಗಿ ಬಡ್ತಿ ಹೊಂದಿ ವರ್ಗಾವಣೆಯಾಗಿದ್ದಾರೆ.

error: Content is protected !!