fbpx

ಲಾಕ್ಡೌನ್ ಸಂದರ್ಭ ಮದುವೆಗೆ ಬಂದು ವ್ಯಕ್ತಿ ಲಾಡ್ಜಿನಲ್ಲಿ ಸಾವು

ಮದುವೆಗೆಂದು ಜಿಲ್ಲೆಗೆ ಆಗಮಿಸಿ ಲಾಡ್ಜ್ ವೊಂದರಲ್ಲಿ ತಂಗಿದ್ದ ತಂಡದಲ್ಲಿದ್ದ ವ್ಯಕ್ತಿ ಮೃತಪಟ್ಟ ಘಟನೆ ವಿರಾಜಪೇಟೆಯಲ್ಲಿ ನಡೆದಿದೆ.ಚೆಂಬೆಬೆಳ್ಳೂರಿನಲ್ಲಿ ನಡೆದ ಮದುವೆ ಸಮಾರಂಭಕ್ಕೆಂದು ಬೆಂಗಳೂರಿನಿಂದ ಆಗಮಿಸಿದ್ದ ಸ್ನೇಹಿತರ ತಂಡ ಇಲ್ಲಿನ ಜೈನರ ಬೀದಿಯಲ್ಲಿರುವ ಲಾಡ್ಜ್ ನಲ್ಲಿ ತಂಗಿದ್ದು,ಈ ತಂಡದಲ್ಲಿದ್ದ ಮಧು ಎಂಬಾತ ಮಲಗಿದ್ದವನು ಏಳದೆ ಇರುವುದರಿಂದ ಪಕ್ಕದ ಕ್ಲಿನಿಕ್ ಕರೆದುಕೊಂಡು ಹೋದ ಸಂದರ್ಭ ಮೃತಪಟ್ಟಿರುವುದ ಖಚಿತಪಟ್ಟಿದೆ.ವಿರಾಜಪೇಟೆ ಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಮೃತದೇಹವನ್ನು ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ.

error: Content is protected !!