ಸೂಕ್ತ ದರ ಕೊಟ್ಟು ರೈತರ ಬೆಳೆ ಕೊಳ್ಳುವೆ: ನಟ ಉಪೇಂದ್ರ ಭರವಸೆ!

ಬೆಂಗಳೂರು: ಕರೊನಾ ಲಾಕ್ಡೌನ್ ಕೃಷಿಕರಿಗೆ ಭಾರಿ ಹೊಡೆತ ಕೊಟ್ಟಿದೆ, ಲಕ್ಷಾಂತರ ಮಂದಿ ಕಷ್ಟಪಟ್ಟು ಬೆಳೆದ ಫಸಲು ಜಮೀನಿನಲ್ಲೇ ಕೊಳೆಯುತ್ತಿದೆ. ತರಕಾರಿ, ಹೂವು, ಹಣ್ಣು, ಧಾನ್ಯ ಬೆಳದು ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಸೂಕ್ತ ಮಾರುಕಟ್ಟೆ ಸಿಗದೆ, ಅತ್ತ ವ್ಯಾಪಾರವೂ ಆಗದೆ ಕಂಗಾಲಾಗಿದ್ದಾರೆ. ಈಗಾಗಲೇ ನೂರಾರು ಮಂದಿ ಫಸಲನ್ನ ರಸ್ತೆ ಸುರಿದು ಆಕ್ರೋಶ ಹೊರಹಾಕಿದ್ದಾರೆ. ಇಂತಹ ಸಂಕಷ್ಟ ಕಾಲದಲ್ಲಿ ರೈತರ ನೆರವಿಗೆ ಬಂದಿದ್ದಾರೆ ಸ್ಯಾಂಡಲ್ವುಡ್ನ ಸೂಪರ್ ಸ್ಟಾರ್ ಉಪೇಂದ್ರ. ಬೆಳೆ ಬೆಳೆದ ರೈತರು ಕೆಳಗೆ ಕೊಟ್ಟಿರುವ ಮೊಬೈಲ್ ನಂಬರ್ಗೆ ಕರೆ ಮಾಡಿದ್ರೆ ಉಪ್ಪಿ ತಂಡ ಸೂಕ್ತ ಬೆಲೆ ಕೊಟ್ಟು ಖರೀದಿಸುತ್ತೆ.

ಸಾಮಾಜಿಕ ಕೆಲಸದಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಕರೊನಾ ಸಂಕಷ್ಟ ಕಾಲದಲ್ಲೂ ಹಲವರಿಗೆ ನೆರವಿನ ಹಸ್ತಚಾಚಿದ್ದಾರೆ.

ಬಡ ಜನರಿಗೆ ಆಹಾರ ಕಿಟ್​ಗಳನ್ನು ವಿತರಿಸುತ್ತಿದ್ದಾರೆ. ಉಪ್ಪಿ ಅವರ ಕಾರ್ಯಕ್ಕೆ ಸಾಥ್​ ನೀಡಲು ದಾನಿಗಳು ಹಣ ಸಹಾಯ ಮಾಡುತ್ತಿದ್ದಾರೆ.

‘ಕರೊನಾ ಲಾಕ್ಡೌನ್ ಪರಿಣಾಮ ರೈತರು ಬೆಳೆದ ಬೆಳೆ ಮಾರಾಟ ಆಗದೆ ಸಂಕಷ್ಟದಲ್ಲಿದ್ದಾರೆ. ನಮಗೆ ದಾನಿಗಳಿಂದ ಬಂದ ಹಣದಲ್ಲಿ ರೈತರ ಬಳಿ ನೇರವಾಗಿ ತರಕಾರಿಗಳನ್ನು ಖರೀದಿಸಿ ದಿನಸಿ ಕಿಟ್ ಜತೆಯಲ್ಲಿ ನೀಡುತ್ತೇವೆ’ ಎಂದು ನಟ ಉಪೇಂದ್ರ ಇತ್ತೀಚಿಗೆ ಟ್ವೀಟ್ ಮೂಲಕ ತಿಳಿಸಿದ್ದರು.

ಇದೀಗ ಮತ್ತೊಮ್ಮೆ ಟ್ವೀಟ್​ ಮಾಡಿರುವ ಉಪೇಂದ್ರ, ‘ಬೆಳೆದ ಬೆಳೆ ವ್ಯಾಪಾರವಾಗದೆ ಸಂಕಷ್ಟದಲ್ಲಿರುವ ರೈತರ ಗಮನಕ್ಕೆ. ನಮಗೆ ಅವಶ್ಯಕತೆ ಇರುವ ಬೆಳೆಯನ್ನು ನಿಮ್ಮ ಬಳಿ ಸೂಕ್ತ ಬೆಲೆಗೆ ಖರೀದಿಸಿ ಬೇಕಿರುವವರಿಗೆ ಹಂಚುತ್ತೇವೆ. ಈ ನಂಬರ್​ಗೆ 98457 63396 ಕರೆ ಮಾಡಿ (24ರ ಮೇ 2021ರ ಒಳಗೆ).

error: Content is protected !!