ಸಿಡಿಲು ಬಡಿದು ಓರ್ವನ ಸಾವು!

ಗುರುಗ್ರಾಮ: ಗುರುಗ್ರಾಮದಲ್ಲಿ ಮಳೆಯಿಂದ ತಪ್ಪಿಸಿಕೊಳ್ಳಲು ಮರದಡಿ ನಿಂತಿದ್ದವರ ಮೇಲೆ ಸಿಡಿಲು ಬಡಿದ ಪರಿಣಾಮ ಓರ್ವ ಮೃತಪಟ್ಟಿದ್ದರೆ, ಇತರ ಮೂವರಿಗೆ ಗಾಯವಾಗಿದೆ.

ಈ ಭೀಕರ ಘಟನೆಯು ಭದ್ರತಾ ಕ್ಯಾಮರಾದಲ್ಲಿ ಸೆರೆಯಾಗಿದೆ.

ಗುರುಗ್ರಾಮದ ಸೆಕ್ಟರ್ 82ರ ಸಿಗ್ನೇಚರ್ ವಿಲ್ಲಾಸ್ ಅಪಾರ್ಟ್ ಮೆಂಟ್ ಸಂಕೀರ್ಣದಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿದೆ.ಈ ನಾಲ್ವರು ಸ್ಥಾನೀಯ ಸೊಸೈಟಿಯ ತೋಟಗಾರಿಕೆ ಸಿಬ್ಬಂದಿಯಾಗಿದ್ದರು.

ಮಳೆ ಯಿಂದ ತಪ್ಪಿಸಿಕೊಳ್ಳಲು ಮರದ ಕೆಳಗೆ ನಾಲ್ವರು ಪುರುಷರ ನಿಂತಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ಕಂಡುಬಂದಿದೆ. ಇದಕ್ಕಿದ್ದಂತೆ ಸಿಡಿಲು ಮರಕ್ಕೆ ಅಪ್ಪಳಿಸುತ್ತದೆ. ಕೆಲವೇ ಸೆಕೆಂಡ್ ನಲ್ಲಿ ಮೂವರು ಕುಸಿದುಬೀಳುತ್ತಾರೆ. ಮರಕ್ಕೆ ಒರಗಿದ್ದ ನಾಲ್ಕನೇ ವ್ಯಕ್ತಿ ಒಂದು ಸೆಕೆಂಡ್ ನಂತರ ಕೆಳಗೆ ಬೀಳುತ್ತಿರುವ ದೃಶ್ಯ ಕಂಡುಬಂದಿದೆ.

ಓರ್ವ ವ್ಯಕ್ತಿ ಸ್ಥಳೀಯ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಇನ್ನೊಬ್ಬ ತೀವ್ರ ಸುಟ್ಟಗಾಯದಿಂದಾಗಿ ತೀವ್ರ ನಿಗಾ ಘಟಕದಲ್ಲಿದ್ದಾರೆ. ಇನ್ನಿಬ್ಬರು ಅಪಾಯದಿಂದ ಪಾರಾಗಿದ್ದಾರೆ.

ಬೆಳಗ್ಗೆಯಿಂದ ಮನೇಸರ್ ಬಳಿಯ ಹೊಸ ಗುರುಗ್ರಾಮದಲ್ಲಿ ಮಳೆಯಾಗುತ್ತಿದೆ. ಮಳೆಯು ಗಾಳಿ ಹಾಗೂ ಮಿಂಚು-ಸಿಡಿಲಿನಿಂದ ಕೂಡಿತ್ತು ಎಂದು ಗುರುಗ್ರಾಮ ಸೆಕ್ಟರ್ ನಿವಾಸಿಯೊಬ್ಬರು ತಿಳಿಸಿದ್ದಾರೆ.

error: Content is protected !!