ಪರಂ ಗರಂ!

ಬೆಂಗಳೂರು: ಉಪಚುನಾವಣೆ ಸೋಲಿನ ಬಳಿಕ ಇಂದು ಕಾಂಗ್ರೆಸ್ ಪಕ್ಷ ದೇವನಹಳ್ಳಿಯ ಸಾದಹಳ್ಳಿ ಗೇಟ್ನಲ್ಲಿರುವ ಕ್ಲಾರ್ಕ್ಸ್ ಎಕ್ಸೋಟಿಕಾ ರೆಸಾರ್ಟ್ನಲ್ಲಿ ಆತ್ಮಾವಲೋಕನ ಸಭೆ ನಡೆಸಿದೆ. ಕಾಂಗ್ರೆಸ್ ಹಲವು ಹಿರಿಯ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದು, ಮಾಜಿ ಡಿಸಿಎಂ ಜಿ. ಪರಮೇಶ್ವರ್ ತಮ್ಮ ಪಕ್ಷದ ನಾಯಕರ ವಿರುದ್ಧ ಗರಂ ಆಗಿದ್ದಾರೆ ಎನ್ನಲಾಗಿದೆ.
ಕೆಪಿಸಿಸಿ ಹಿರಿಯ ಮುಖಂಡರು ಸಭೆಯಲ್ಲಿ ಅನೇಕ ನಾಯಕರು ಪಕ್ಷದ ಬಗ್ಗೆ ಸಲಹೆ ನೀಡಿದ್ದು, ಜಿ.ಪರಮೇಶ್ವರ್ಗೆ ಕೆಲ ನಾಯಕರು ಜಿಲ್ಲೆಯಲ್ಲಿ ವರ್ಚಸ್ಸು ಬೆಳೆಸಿಕೊಳ್ಳಿ. ಕೊರಟಗೆರೆ ಮಾತ್ರ ಸಿಮೀತ ಆಗಬೇಡಿ ಅಂತ ಹೇಳಿದ್ದಾರೆ. ಈ ಮಾತಿಗೆ ಪರಮೇಶ್ವರ್ ಅಸಮಧಾನಗೊಂಡಿದ್ದಾರೆ ಎನ್ನಲಾಗಿದೆ.
ಅಲ್ಲದೇ ಎಸ್ಸಿ ಮತ್ತು ಎಸ್ಟಿ ಸಮುದಾಯವನ್ನು ಕಾಂಗ್ರೆಸ್ ಕೈಬಿಟ್ಟಿದೆ ಎನ್ನುತ್ತಿದ್ದಂತೆ ಕೋಪಗೊಂಡ ಅವರು ನಾವು ಅಧಿಕಾರದಲ್ಲಿದ್ದಾಗ ಆ ಸಮುದಾಯಕ್ಕೆ ಕೆಲಸ ಮಾಡಿದ್ದೇವೆ, ಸಿದ್ದರಾಮಯ್ಯ ಅದು ಕೊಟ್ರು, ಇದು ಕೊಟ್ರು ಅಂತ ಹೇಳ್ತಾರೆ.
ನಮ್ಮ ಪಕ್ಷದವರು ಚುನಾವಣಾ ಸಮಯದಲ್ಲಿ ದೊಡ್ಡ ಮಟ್ಟದ ಸಭೆ ಮಾಡ್ತೀವಿ. ಆದ್ರೆ ಮೈಕ್ರೋ ಮೇನೆಜ್ಮೆಂಟ್ ಮಾಡ್ತೀವಾ? ಬಿಜೆಪಿ ಅವರು ಏನು ಮಾಡಲ್ಲ, ಆದರೆ ಜಾಹೀರಾತು ಮತ್ತು ಮೈಕ್ರೋ ಮ್ಯಾನೇಜ್ಮೆಂಟ್ ಮಾಡೋದ್ರಲ್ಲಿ ಸಕ್ಸಸ್ ಆಗ್ತಾರೆ. ಶಿರಾ ಮತ್ತು ಆರ್ ಆರ್ ನಗರದಲ್ಲಿ ಆಗಿದ್ದು ಈ ವೈಫಲ್ಯ ಅಂತ ಏರುಧ್ವನಿಯಲ್ಲಿ ಮಾತನಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
.