fbpx

4ನೇ ಕ್ಲಾಸ್ ತನಕ ಓದದಿದ್ದರೂ ಹದಿಮೂರು ಬಜೆಟ್ ಮಂಡಿಸಿದ್ದೇನೆ: ಸಿದ್ಧರಾಮಯ್ಯ

ಬೆಂಗಳೂರು (ಅ.12): ಮಕ್ಕಳಿಗೆ ವಿದ್ಯೆಯನ್ನು ಯಾವಾಗ ಬೇಕಾದರೂ ಕಲಿಸಬಹುದು. ವಿದ್ಯೆಗಿಂತಲೂ ಜೀವ ಮುಖ್ಯ.

ಹೀಗಾಗಿ ಸದ್ಯಕ್ಕೆ ಶಾಲೆಗಳನ್ನು ತೆರೆಯುವುದು ಬೇಡ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮತ್ತೊಮ್ಮೆ ಹೇಳಿದ್ದಾರೆ.

ಒಂದು ವರ್ಷ ತರಗತಿ ನಡೆದಿಲ್ಲ ಎಂದರೆ ಏನೂ ಆಗುವುದಿಲ್ಲ. ನಾನು 4ನೇ ತರಗತಿವರೆಗೆ ಓದಲೇ ಇಲ್ಲ. ಹದಿಮೂರು ಬಜೆಟ್‌ಗಳನ್ನು ಮಂಡಿಸಿದ್ದೇನೆ. ನಾನೇನು ದಡ್ಡನಾ? ತರಗತಿಗಳಿಗೆ ಹಾಜರಾಗುವುದಕ್ಕಿಂತ ಜೀವ ಉಳಿಸುವುದು ಮುಖ್ಯ.

ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ: ಹಿಗ್ಗಾಮುಗ್ಗಾ ವಾಗ್ದಾಳಿ..!

ಪುಟ್ಟಮಕ್ಕಳನ್ನು ಕೊರೋನಾ ಸೋಂಕು ಭಾರೀ ಏರಿಕೆಯಾಗಿರುವ ಸಮಯದಲ್ಲಿ ಶಾಲೆಗಳಿಗೆ ಕಳುಹಿಸುವುದು ಬೇಡ. ಈ ಬಗ್ಗೆ ಸರ್ಕಾರಕ್ಕೂ ಪತ್ರ ಬರೆದಿದ್ದೇನೆ ಎಂದಿದ್ದಾರೆ.

error: Content is protected !!