fbpx

ರೈತರ ಖಾತೆಗೆ ಹಣ ಹಾಗು ಸಾಲ ಸೌಲಭ್ಯ

ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಆರಂಭಗೊಂಡು 22 ತಿಂಗಳು ಕಳೆದಿದೆ. ಪ್ರತಿ ವರ್ಷ ರೈತರಿಗೆ 6 ಸಾವಿರ ರೂಪಾಯಿ ನೆರವು ನೀಡುವ ಈ ಯೋಜನೆ ಇದಾಗಿದ್ದು, ಯೋಜನೆಯಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ.

ಕಿಸಾನ್ ಸಮ್ಮಾನ್ ನಿಧಿಯಲ್ಲಿ ಖಾತೆ ಹೊಂದಿದ್ದರೂ,, ಇದುವರೆಗೂ ಹಣ ವರ್ಗಾವಣೆಯಾಗಿಲ್ಲದಿದ್ದರೆ, ಅದರ ಮಾಹಿತಿ ತಿಳಿದುಕೊಳ್ಳುವುದು ಈಗ ಸುಲಭವಾಗಿದೆ. ಪಿಎಂ ಕಿಸಾನ್ ಕ್ರೆಡಿಟ್ ಪೋರ್ಟಲ್ ಗೆ ಹೋಗಿ ಅಲ್ಲಿ ಆಧಾರ್, ಮೊಬೈಲ್, ಬ್ಯಾಂಕ್ ಖಾತೆ ನಂಬರ್ ನೊಂದಾಯಿಸಿ ಮಾಹಿತಿ ಪಡೆಯಬಹುದು.

ಈ ಯೋಜನೆಗೆ ಹೆಸರು ನೋಂದಾಯಿಸಲು ರೈತರು ಅಧಿಕಾರಿಗಳ ಬಳಿ ಹೋಗಬೇಕಾಗಿಲ್ಲ. ಕಿಸಾನ್ ಪೋರ್ಟಲ್ ಗೆ ಹೋಗಿ ಹೆಸರು ನೊಂದಾಯಿಸಬಹುದು. ಎಲ್ಲ ರೈತರಿಗೂ ಯೋಜನೆ ಲಾಭ ಸಿಗಲಿ ಎನ್ನುವ ಕಾರಣಕ್ಕೆ ಪೋರ್ಟಲ್ ನಲ್ಲಿಯೇ ಹೆಸರು ನೋಂದಾಯಿಸಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ.

ಅಲ್ಲದೆ, ದಾಖಲೆಗಳ ಪರಿಶೀಲನೆಗೂ ಕಡಿಮೆ ಸಮಯ ಹಿಡಿಯಲಿದೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಿಂದ ಲಾಭ ಪಡೆಯುತ್ತಿರುವ ಎಲ್ಲಾ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲು ಮೋದಿ ಸರ್ಕಾರ ನಿರ್ಧರಿಸಿದೆ. ಅಂದರೆ, ಪಿಎಂ-ಕಿಸಾನ್ ಯೋಜನೆ ಕೆಸಿಸಿಗೆ ಸಂಬಂಧ ಹೊಂದಿದೆ. ಇದರೊಂದಿಗೆ 3 ಲಕ್ಷ ರೂಪಾಯಿವರೆಗಿನ ಸಾಲಗಳು ಶೇಕಡಾ 4ರ ದರದಲ್ಲಿ ಲಭ್ಯವಾಗಲಿವೆ.

error: Content is protected !!