ಸಂಗೀತ ನಿರ್ದೇಶಕ ರಾಜನ್ ನಿಧನ

ಬೆಂಗಳೂರು, ಅಕ್ಟೋಬರ್. 12 : ಕನ್ನಡ ಹಾಗೂ ತೆಲುಗು ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ರಾಜನ್ (85) ವಿಧಿವಶರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಾಜನ್ ಅವರು ಹೃದಯಾಘಾತದಿಂದ ತಮ್ಮ ಸ್ವ ಗೃಹದಲ್ಲೇ ನಿಧನರಾಗಿದ್ದಾರೆ.
ಸುಮಾರು 400ಕ್ಕೂ ಹೆಚ್ಚು ಸಿನಿಮಾಗಳಿಗೆ ಅವರು ಸಂಗೀತ ನಿರ್ದೇಶನ ಮಾಡಿದ್ದು, ಕನ್ನಡದ ಸುಮಾರು 300, ತೆಲುಗಿನ 100 ಹಾಗೂ ತಮಿಳಿನಲ್ಲೂ ಹಲವು ಚಿತ್ರಗಳಿಗೆ ಅವರು ಸಂಗೀತ ನಿರ್ದೇಶನ ಮಾಡಿದ್ದರು. ರಾಜನ್-ನಾಗೇಂದ್ರ ಎಂದೇ ಖ್ಯಾತವಾಗಿದ್ದ ಸಹೋದರರು, ನಾಗೇಂದ್ರ ಸಂಗೀತ ನಿರ್ದೇಶಕ ರಾಜನ್ ಅವರ ಸಹೋದರರಾಗಿದ್ದಾರೆ.
ಪುತ್ರ-ಪುತ್ರಿಯನ್ನು ಅಗಲಿರುವ ರಾಜನ್ ಅವರ ಅಂತ್ಯಕ್ರಿಯೆ ಇಂದು ಬೆಂಗಳೂರಿನ ಹೆಬ್ಬಾಳದಲ್ಲಿರುವ ಸ್ಮಶಾನದಲ್ಲಿ ನೆರವೇರಲಿದೆ.