fbpx

ಪಿ.ಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ಸೌಲಭ್ಯ

ನವದೆಹಲಿ: ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 94 ಸಾವಿರ ಕೋಟಿ ರೂಪಾಯಿಯನ್ನು ರೈತರಿಗೆ ನೀಡಲಾಗಿದೆ. ದೇಶದ 11 ಕೋಟಿಗೂ ಹೆಚ್ಚು ರೈತರು ಇದ್ರ ಲಾಭ ಪಡೆದಿದ್ದಾರೆ. ನಿಮ್ಮ ಖಾತೆ ಆಧಾರ್‌ಗೆ ಲಿಂಕ್ ಆದ್ರೆ ಮಾತ್ರ ಈ ಯೋಜನೆ ಲಾಭ ಸಿಗಲಿದೆ.

ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ ಮತ್ತು ಮೇಘಾಲಯದ ರೈತರ ಖಾತೆಗೆ ಹಣ ವರ್ಗಾವಣೆಯಾಗಬೇಕೆಂದ್ರೆ 2021, ಮಾರ್ಚ್ 31ರೊಳಗೆ ಆಧಾರ್ ಲಿಂಕ್ ಮಾಡಬೇಕು. ಉಳಿದ ರಾಜ್ಯಗಳಲ್ಲಿ ಡಿಸೆಂಬರ್ 1, 2019 ರಿಂದಲೇ ಆಧಾರ್ ಲಿಂಕ್ ಕಡ್ಡಾಯಗೊಳಿಸಲಾಗಿದೆ. ಹಾಗಾಗಿ ಆಧಾರ್ ಲಿಂಕ್ ಆದ ರೈತರಿಗೆ ಮಾತ್ರ ಇದ್ರ ಲಾಭ ಸಿಗ್ತಿದೆ.

ಆಧಾರ್ ಲಿಂಕ್ ಮಾಡಬೇಕೆಂದ್ರೆ ನೀವು ಬ್ಯಾಂಕ್ ಶಾಖೆಗೆ ಹೋಗಬೇಕು. ಆಧಾರ್ ಕಾರ್ಡ್‌ನ ಫೋಟೋ ನಕಲನ್ನು ತೆಗೆದುಕೊಂಡು ಹೋಗಬೇಕು. ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಬ್ಯಾಂಕ್ ಉದ್ಯೋಗಿಗಳನ್ನು ಹೇಳಬೇಕು.

ಆಧಾರ್ ಕಾರ್ಡ್‌ನ ಫೋಟೋ ಪ್ರತಿ ಕೆಳಗಿನ ಸ್ಥಳದಲ್ಲಿ ಸಹಿ ಮಾಡಬೇಕು.

ಲಿಂಕ್ ಮಾಡುವಾಗ, 12 ಅಂಕಿಯ ಆಧಾರ್ ಸಂಖ್ಯೆಯನ್ನು ಎಚ್ಚರಿಕೆಯಿಂದ ಟೈಪ್ ಮಾಡಿ ಮತ್ತು ಅದನ್ನು ಸಲ್ಲಿಸಿ. ನಿಮ್ಮ ಆಧಾರ್, ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆದಾಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಸಂದೇಶ ಬರುತ್ತದೆ. ಇದಕ್ಕಾಗಿ ನೀವು ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಹೊಂದಿರಬೇಕು.

ಯಾವುದೇ ಸಮಸ್ಯೆಯಿದ್ದರೂ ಸಹಾಯ ವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಕಿಸಾನ್ ಸಮ್ಮಾನ್ ಸಹಾಯವಾಣಿ ಸಂಖ್ಯೆ 011-24300606, ಪಿಎಂ ಕಿಸಾನ್ ಟೋಲ್ ಉಚಿತ ಸಂಖ್ಯೆ: 18001155266, ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ: 155261, ಪಿಎಂ ಕಿಸಾನ್ ಲ್ಯಾಂಡ್‌ಲೈನ್ ಸಂಖ್ಯೆಗಳು: 011-23381092, 23382401, ಪಿಎಂ ಕಿಸಾನ್ ಮತ್ತೊಂದು ಸಹಾಯವಾಣಿ : 0120-6025109,ಇಮೇಲ್ : [email protected] .

error: Content is protected !!