fbpx

ಕರೋನಾಗೆ ಕ್ಯಾರೆ ಎನ್ನದೆ ಚೀನಿಯರ ಮಜಾ!?

ಮಾರಕ ರೋಗ ಕೊರೊನಾ ಶುರುವಾಗಿದ್ದೆ ಚೀನಾದಿಂದ. ಆದ್ರೆ ಈ ದೇಶದ ಜನರಿಗೆ ಕೊರೊನಾ ಬಗ್ಗೆ ಭಯವಿಲ್ಲ. ಹೆಚ್ಚು ಜನಸಂಖ್ಯೆಯಿರುವ ಈ ದೇಶದ ಕೆಲ ಫೋಟೋಗಳು ಅಲ್ಲಿನ ಜನರಿಗೆ ಕೊರೊನಾ ಬಗ್ಗೆ ಭಯವಿಲ್ಲವೆಂಬುದನ್ನು ಸ್ಪಷ್ಟಪಡಿಸುತ್ತದೆ.

ಚೀನಾ ರಾಷ್ಟ್ರೀಯ ದಿನದ ಹಿನ್ನಲೆಯಲ್ಲಿ ಅಕ್ಟೋಬರ್ 1 ರಿಂದ 8 ರ ವರೆಗೆ ರಜೆಯಿದೆ. ಈ ಸಂದರ್ಭದಲ್ಲಿ ಚೀನಿ ಪ್ರವಾಸಿಗರು ಕೊರೊನಾ ಮರೆತು ಮಜ ಮಾಡ್ತಿದ್ದಾರೆ. ಈ ವೇಳೆ ಕೊರೊನಾ ನಿಯಂತ್ರಣ ಮಾರ್ಗಸೂಚಿಗಳನ್ನು ಇವರು ಉಲ್ಲಂಘಿಸುತ್ತಿದ್ದಾರೆ.

ಕೊರೊನಾ ವೈರಸ್ ನಂತ್ರ ಇದೇ ಮೊದಲ ಬಾರಿ ಸಾರ್ವಜನಿಕ ರಜೆ ನೀಡಲಾಗಿದೆ. ಈ ಸಂದರ್ಭದಲ್ಲಿ ಜನರು ಎಲ್ಲವನ್ನೂ ಮರೆತಿದ್ದಾರೆ. ಚೀನಾದ ಪ್ರಸಿದ್ಧ ಪ್ರವಾಸಿತಾಣ ಹಾಂಗ್‌ಶಾನ್ ಪರ್ವತಕ್ಕೆ ಜನರ ದಂಡೆ ಹರಿದು ಬಂದಿದೆ. ಮಾಸ್ಕ್, ಸಾಮಾಜಿಕ ಅಂತರ ಮರೆತು ಜನರು ಎಂಜಾಯ್ ಮಾಡಿದ್ದಾರೆ.

error: Content is protected !!