fbpx

ಇಂದಿನ ವರಮಹಾ ಲಕ್ಷ್ಮಿ ಹಬ್ಬದ ವಿಶೇಷ!

ಮಹಾಲಕ್ಷ್ಮಿಯು ಶುಭ ಸಂಪತ್ತು, ಸಮೃದ್ಧತೆಯನ್ನು ಬಾಳಲ್ಲಿ ಕರುಣಿಸುವ ದೈವ ಎಂದು ಅಸಂಖ್ಯಾತ ಹಿಂದೂಗಳು ನಂಬುತ್ತಾರೆ. ಮಹಾಲಕ್ಷ್ಮಿಯನ್ನು ಸುಮಂಗಲಿಯರು ತಮ್ಮ ಗಂಡಂದಿರಿಗೆ ಆಯುಷ್ಯ, ಐಶ್ವರ್ಯ ಹಾಗು ಒಳ್ಳೆಯ ಆರೋಗ್ಯ ನೀಡು ಎಂದು ಕೋರಿ ಈ ದಿನ ಭಕ್ತಿಯಿಂದ ಪ್ರಾರ್ಥಿಸುತ್ತಾರೆ. ಈ ದಿನ ಹೆಣ್ಣು ಮಕ್ಕಳು ಬೆಳಿಗ್ಗೆ ಬೇಗ ಎದ್ದು ಶುದ್ಧವಾಗಿ, ಮನೆಯ ಮುಂದೆ ರಂಗೋಲಿ ಬಿಡಿಸಿ ಕಳಶ ಇಟ್ಟು, ಹಾಗೆಯೇ ಎಂಟು ದಳವಿರುವ ಕಮಲದ ಹೂವನ್ನು ಬಿಡಿಸುತ್ತಾರೆ.

ಮಹಾ ಲಕ್ಷ್ಮಿಯು ವಿಷ್ಣುವಿನ ಮಡದಿಯಾಗಿದ್ದು, ಆದಿ, ಧನ, ಧಾನ್ಯ, ವಿಜಯ, ವಿದ್ಯೆ, ಸನಾತನ, ಧೈರ್ಯ, ಸೌಭಾಗ್ಯದ ಅವತಾರಗಳನ್ನು ಅವಳು ಹೊಂದಿರುವಳು. ಒಬ್ಬ ಆದರ್ಶ ಮಹಿಳೆಗೆ ಮೇಲಿನ ಎಲ್ಲವೂ ಇರುತ್ತದೆ ಎಂದು ಹೇಳಲಾಗುತ್ತದೆ.  ಹಬ್ಬವನ್ನು ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಉತ್ತರ ಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಅದ್ದೂರಿ ಹಾಗು ಅರ್ಥಪೂರ್ಣವಾಗಿ ಈ ದಿನ ಆಚರಿಸಲಾಗುತ್ತದೆ.

ಹಬ್ಬದ ಸಂಭ್ರಮಕ್ಕೆ ಮನೆಗಳಲ್ಲಿ ಜನ ಹೋಳಿಗೆ, ಕಜ್ಜಾಯ, ಪಂಚಾಮೃತ, ಪಂಚ ಕಜ್ಜಾಯ, ಗಸೆ ಗಸೆ ಪಾಯಸ, ಕೇಸರಿ ಬಾತ್ ಮುಂತಾದ ಇಂತಹ ಸಿಹಿ ತಿಂಡಿಗಳನ್ನು ಮಾಡುತ್ತಾರೆ.

error: Content is protected !!