ಆದಿವಾಸಿ ಮಕ್ಕಳಿಗೆ ಆಲೈನ್ ಶಿಕ್ಷಣಕ್ಕೆ ವ್ಯವಸ್ಥೆಯ ಚಿಂತನೆ.

ಆನ್ಲೈನ್ ಶಿಕ್ಷಣ ವಂಚಿತ 10ನೇ ತರಗತಿಯ ಹಾಡಿಗಳಲ್ಲಿ ವಾಸಿಸುತ್ತಿರುವ ಆದಿವಾಸಿ ಮಕ್ಕಳಿಗೆ ಸರ್ಕಾರಿ ಪ್ರಾಯೋಜಿತ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಶೈಕ್ಷಣಿಕ ಕಾರ್ಯಕ್ರಮ ವೀಕ್ಷಿಸಲು ವ್ಯವಸ್ಥೆ ಮಾಡುವ ಬಗ್ಗೆ ವಿರಾಜಪೇಟೆ ತಾಲ್ಲೂಕು ಸ್ವಯಂ ಸೇವಕ ಶಿಕ್ಷಕರೊಂದಿಗೆ ಪೂರ್ವಬಾವಿ ಸಭೆಯನ್ನು ಏರ್ಪಡಿಸಲಾಗಿತ್ತು.
ಮೊದಲ ಕಾರ್ಯಕ್ರಮವನ್ನು 29-07-2020 ರಂದು ಬಾಳೆಲೆ ಪ್ರೌಢಶಾಲೆಯ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದೆ.
ಈ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ರಾಬಿನ್ ದೇವಯ್ಯ, ವೈದ್ಯಕೀಯ ಪ್ರಕೋಷ್ಠ ಸಂಚಾಲಕರಾದ ಡಾ.ನವೀನ್ ಕುಮಾರ್, ವಿರಾಜಪೇಟೆ ಮಂಡಲ ಬಿಜೆಪಿ ಅಧ್ಯಕ್ಷರಾದ ನೆಲ್ಲೀರ ಚಲನ್, ಜಿಲ್ಲಾ ಬಿಜೆಪಿ ಖಜಾಂಜಿ ಮಾಚಯ್ಯ ಉಪಸ್ಥಿತರಿದ್ದರು.