fbpx

ಹಾರಂಗಿ ನಿರ್ವಹಣೆ ವಿಚಾರ: ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್

ಕೊಡಗು:ಜಿಲ್ಲೆಯ ಪ್ರಮುಖ ಜಲಾಶಯಗಳಲ್ಲಿ ಒಂದಾದ ಹಾರಂಗಿ ಜಲಾಶಯದಿಂದ ಮಳೆಗಾಲದಲ್ಲಿ ಹೊರಬಿಡಲಾಗುವ ನೀರು ಮತ್ತು ಸಂಗ್ರಹ ಅವೈಜ್ಞನಿಕವಾಗಿ ನಡೆಯುತ್ತಿದೆ ಎನ್ನುವ ಕಾರಣಕ್ಕೆ ಹಾರಂಗಿ ಜಲಾನಯನ ಪ್ರದೇಶದ ರೈತರು ಮತ್ತು ಸಾರ್ವಜನಿಕರು ಸಲ್ಲಿಸಲಾದ ರಿಟ್ ಅರ್ಜಿ ಹಿನ್ನಲೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ಅವರ ನೇತೃತ್ವದ ವಿಭಾಗೀಯ ಪೀಠ ಕೇಂದ್ರ ಜಲಾಶಕ್ತಿ ಸಚಿವಾಲಯ,ರಾಜ್ಯ ಜಲಸಂಪನ್ಮೂಲ ಇಲಾಖೆ,ಬೃಹತ್ ಮತ್ತು ಸಣ್ಣ ನೀರಾವರಿ ಇಲಾಖೆ,ಕಾವೇರಿ ನೀರಾವರಿ ನಿಗಮ,ಕೊಡಗು ಜಿಲ್ಲಾಧಿಕಾರಿ ಸೇರಿದಂತೆ ಒಟ್ಟು 13 ಇಲಾಖೆಗಳಿಗೆ ನೋಟಿಸ್ ನೀಡಿದೆ.
ಜೂನ್,ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಹೊರಬಿಡಲಾಗುವ ನೀರಿನ ಪರಿಣಾಮ ತಗ್ಗು ಪ್ರದೇಶದ ಜನವಸತಿ ಪ್ರದೇಶಗಳು ಮತ್ತು ರೈತರ ಜಮೀನುಗಳು ಮುಳುಗಡೆಯಾಗುತ್ತಿದ್ದು ಸಾಕಷ್ಟು ಅನಾಹುತ ಮಾಡುತ್ತಿದೆ ಇದನ್ನು ತಪ್ಪಿಸಲು ಕ್ರಮಕೈಗೊಳ್ಳುವ ಅಭಿಪ್ರಾಯವನ್ನು ಆಗಸ್ಟ್ 10ರಂದು ತಿಳಿಸುವಂತೆ ನೋಟಿಸ್ ನಲ್ಲಿ ತಿಳಿಸಲಾಗಿದೆ.

error: Content is protected !!