fbpx

ಧೀರನಿಗೆ ಸಲಾಂ ಹೇಳೋಣ..

ಅನ್ವೇಶ್ ಕೇಕುಣ್ಣಾಯ,

ಇಂದು ಭಾರತದ ಭವ್ಯರತ್ನಗಳು ಸ್ವಾತಂತ್ರ್ಯಹೋರಾಟಗಾರರು ಲೋಕಮಾನ್ಯಬಾಲಗಂಗಾಧರತಿಲಕ ಜೀ ಹಾಗೂ ಚಂದ್ರಶೇಖರ ಆಜಾದ ಜೀ ಯವರ ಜನ್ಮದಿನ !
ಇವರಿಗೇ ನನ್ನ ಜನ್ಮದಿನ ಶುಭಾಶಯಗಳು ಹಾಗೂ ಕೋಟಿ ಕೋಟಿ ನಮನಗಳು !


ಚಂದ್ರಶೇಖರ್ ಆಜಾದ್ ಎಂದೊಡನೆ ನೆನಪಾಗೋದು ಒಬ್ಬ ಮನುಷ್ಯನಲ್ಲ, ಅಲ್ಲಿ ನೆನಪಾಗೋದು ಒಂದು ಸಿಟ್ಟಿಗೆದ್ದ ಹುಲಿ, ಅದು ಕೂಡ ದೇಶಭಕ್ತಿಯನ್ನು ಹೆಗಲ ಮೇಲೆ ಹೊತ್ತ ಹುಲಿ. ಇವರು 1907 ಮಾರ್ಚ್ 23 ರಂದು ಮಧ್ಯಪ್ರದೇಶದ ಝುಬುವಾ ಜೆಲ್ಲೆಯ ಭಾವ್ರಾ ಗ್ರಾಮದಲ್ಲಿ ಪಂಡಿತ ಸೀತಾರಾಮ್ ಮತ್ತು ಜಾಗ್ರಣೀ ದೇವಿ ಅವರ ಮಗನಾಗಿ ಜನಿಸಿದರು .

“ಮೇ ಆಜಾದ್ ಹೂಂ ! ಆಜಾದ್ ಹೀ ರಹೂಂಗ ! ದುಶ್ಮನೋಂಕಿ ಗೋಲಿಯೊಂಸೆ, ಮೈ ಸಾಮ್ ನಾ ಕರೂಂಗಾ, ಆಜಾದ್ ಹೀ ರಹಾಹೂಂ ! ಮೈ ಆಜಾದ್ ಹೀ ಮರೂಂಗ.” ಈ ಕೆಚ್ಚೆದೆಯ ಮಾತು ಮರೆತವನು ಭಾರತೀಯನೇ ಅಲ್ಲ.ಹೆಸರಿಗೆ ತಕ್ಕಂತೆ ಸಾಯುವವರೆಗೂ ಆಜಾದ್ ರಾಗಿಯೇ ಆಜಾದರ ಬಗ್ಗೆ ಎಷ್ಟು ಬರೆದರು ಸಾಕಾಗುವುದಿಲ್ಲ.

15ನೆಯ ವಯಸ್ಸಿನಲ್ಲಿಯೇ ಸೂರ್ಯ ಮುಳುಗದ ಬ್ರಿಟಿಷ್ ಸಾಮ್ರಾಜ್ಯದ ವಿರುದ್ದ ಸಿಡಿದೆದ್ದು, ದೇಶಭಕ್ತಿಯ ಹಿರಿಮೆಯನ್ನು ಎತ್ತಿ ಹಿಡಿದು “ಮೇ ಆಜಾದ್ ಹೂಂ ! ಆಜಾದ್ ಹೀ ರಹೂಂಗ ! ದುಶ್ಮನೋಂಕಿ ಗೋಲಿಯೊಂಸೆ, ಮೈ ಸಾಮ್ ನಾ ಕರೂಂಗಾ, ಆಜಾದ್ ಹೀ ರಹಾಹೂಂ ! ಮೈ ಆಜಾದ್ ಹೀ ಮರೂಂಗ.” ಎಂಬ ಕರೆ ನೀಡಿ ಚಂದ್ರಶೇಖರ್ ಸೀತಾರಾಮ್ ತಿವಾರಿ ಇತಿಹಾಸದ ಪುಟಗಳಲ್ಲಿ ಚಂದ್ರಶೇಖರ್ ಆಜಾದ್ ಎಂದೇ ಪ್ರಸಿದ್ಧನಾದ.

ಬ್ರಿಟಿಷರನ್ನು ಶಸ್ತ್ರಾಸ್ತ್ರಗಳ ಮೂಲಕವೇ ಎದುರಿಸಲು ಸಾಧ್ಯ ಎಂದು ನಂಬಿದ್ದ ಆಜಾದ್ , ಹಿಂದುಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸ್ಸೊಸಿಯೆಷನ್ (HSRA) ಎಂಬ ಸಂಘ ಆರಂಭಿಸಿದರಲ್ಲದೆ ,ಭಗತ್ ಸಿಂಗ್ , ಸುಖದೇವ್ ,ಬಟುಕೇಶ್ವರ ದತ್ತ ಮತ್ತು ರಾಜಗುರು ಅಂತಹ ಕ್ರಾಂತಿಕಾರಿ ದೇಶಪ್ರೇಮಿಗಳಿಗೆ ಮಾರ್ಗದರ್ಶಕರಾಗಿದ್ದರು .

ಹತ್ತಾರು ವರ್ಷಗಳ ಕಾಲ ಬ್ರಿಟಿಷರ ಕಣ್ಣುತಪ್ಪಿಸಿ ಸ್ವಾತಂತ್ರ್ಯ ಚಳುವಳಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಆ ಹುಲಿ, ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು. ಹೀಗಾಗಿ ಬ್ರಿಟಿಷರು ಆಜಾದ್ರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು.” ತಾನು ಯಾವತ್ತಿಗೂ ಬ್ರಿಟಿಷರ ಕೈಗೆ ಸಿಗೋದಿಲ್ಲ” ಅಂತ ಶಪಥವನ್ನು ಮಾಡಿದ್ದ ,ಹಾಗೆ ಅದರಂತೆ ನಡೆದಿದ್ದ ಆಜಾದ್ ಅವತ್ತು ಬ್ರಿಟಿಷರ ಬಲೆಗೆ ಸಿಕ್ಕಿಬೀಳೊಕೆ ಕಾರಣ ವೀರಭದ್ರ ತಿವಾರಿ ಎನ್ನುವ ದ್ರೋಹಿ.

1931ರ ಫೆಬ್ರವರಿ 27ರಂದು ಅಲಹಾಬಾದ್‌ನ ಆಲ್‌ಫ್ರೆಡ್ ಪಾರ್ಕ್‌ಗೆ ಆಜಾದ್ ಬರುವ ಸುಳಿವನ್ನು ಪಡೆದ ಬ್ರಿಟಿಷ್ ಪೊಲೀಸರು ಪಾರ್ಕ್ನ್ನು ಸುತ್ತುವರೆದು, ಅಜಾದ್‌ಗೆ ತಮ್ಮ ವಶವಾಗುವಂತೆ ಎಚ್ಚರಿಸಿದರು. ಆದರೆ, ಬ್ರಿಟಿಷರ ಎಚ್ಚರಿಕೆಗೆ ಮಣಿಯದ ಅಜಾದ್, ವೀರನಂತೆ ಹೋರಾಡಿ ಮೂವರು ಪೊಲೀಸರನ್ನು ಬಲಿ ತೆಗೆದುಕೊಂಡರು. ಮಾಹಿತಿದಾರನಿಂದ ಮೋಸಕ್ಕೊಳಗಾದ ಆಜಾದ್, 1931ರ ಫೆಬ್ರವರಿ 27ರಂದು ಅಲಹಾಬಾದ್ ನಗರದ ಅಲ್ ಫ್ರೆಡ್ ಪಾರ್ಕ್ ನಲ್ಲಿ ಬ್ರಿಟಿಷ್ ಸೈನ್ಯದಿಂದ ಸುತ್ತುವರಿಯಲ್ಪಟ್ಟರು.

ಏಕಾಂಗಿಯಾಗಿ ತಮ್ಮ ಬಂದೂಕಿನ ಕೊನೆಯ ಗುಂಡಿನವರೆಗೂ ಹೋರಾಡಿದರು. ವೀರಭದ್ರ ತಿವಾರಿ ಮಾಡಿದ ಮೋಸದಿಂದ ಅಜಾದ್ ಸಾವಿನ ಮನೆ ಬಳಿ ಬಂದು ನಿಲ್ಲುವಂತೆ ಹಾಗಾಯ್ತು, ಯಾವ ಪರಕೀಯ ಸೈನಿಕನಿಗೂ ಶರಣಾಗದೆ ತಮ್ಮ ತಲೆಗೆ ಗುಂಡು ಹೊಡೆದುಕೊಂಡು ಹುತಾತ್ಮರಾದರು

“ಯೋಧ ತನ್ನ ಕೈಯಲ್ಲಿನ ಆಯುಧವನ್ನು ಯಾವತ್ತೂ ಬಿಡೋದಿಲ್ಲ ” ಅಂತಿದ್ದ ಆಜಾದ್ ತಾನು ಸತ್ತಾಗ ಕೂಡ ಪಿಸ್ತೂಲನ್ನ ಕೈಯಲ್ಲಿ ಹಿಡಿದಿದ್ದ .ಮತ್ತೆ ಮತ್ತೆ ಅವನ ಶವಕ್ಕೆ ಗುಂಡು ಹರಿಸಿದ ಬ್ರಿಟಿಷರು ಅವನು ಸತ್ತ ಎಂದು ಖಚಿತವಾದ ಮೇಲೆ ಪೊಲೀಸರು ಅವನ ಶವದ ಬಳಿ ಹೋದರು. ಅಷ್ಟರ ಮಟ್ಟಿಗೆ ಆಜಾದ್ ಬ್ರಿಟಿಷರಲ್ಲಿ ಭಯವನ್ನ ಹುಟ್ಟಿಸಿದ್ದ ಆವತ್ತಿಗೆ ಆಜಾದ್ ನ ವಯಸ್ಸು 24ವರ್ಷ!. ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮತ್ತೊಂದು ಜೀವ ಇಹ ಲೋಕವನ್ನು ತ್ಯಜಿಸಿತ್ತು,ಈ ಸಂಘರ್ಷ ಈಡಿಯ ಭಾರತವನ್ನ ಸೂತಕದ ಛಾಯೆಯಲ್ಲಿ ಮುಳಿಗಿಸಿತ್ತು .

ಧೀರ ಮಣ್ಣಿನ ಮಗ ಚಂದ್ರಶೇಖರ ಆಜಾದನನ್ನು ಇಂದು ಕೂಡ ನಾವೆಲ್ಲ ನೆನೆಯುತ್ತೇವೆ. ಅವನ ದೇಹದಾಕಾರ , ಸಾಮರ್ಥ್ಯ, ಬುದ್ಧಿವಂತಿಕೆ, ತ್ಯಾಗ ಮನೋಭಾವನೆ, ಸಂಘಟನಾಶಕ್ತಿ, ರಾಷ್ಟ್ರದ ಎಲ್ಲ ಯುವಕರಲ್ಲೂ ಮೂಡಲಿ ಎಂದು ಬಯಸುತ್ತೇವೆ. ಅವನೇ ‘ಆದರ್ಶ ಭಾರತೀಯ ಕ್ರಾಂತಿಕಾರಿ’ ಎಂದು ಕೊಂಡಾಡುತ್ತೇವೆ. ತಮ್ಮ ಸುಖವನ್ನು ತಮ್ಮ ಸಂಸಾರದವರ ಉಳಿವನ್ನು ಬದಿಗೊತ್ತಿ ತಾಯ್ನಾಡಿಗೆ ತಮ್ಮ ಪ್ರಾಣವನ್ನೆ ಅರ್ಪಿಸಿದ ಆ ಧೀರರು ಎಂದೆಂದಿಗೂ ನಮ್ಮ ಸ್ಮರಣೆಯಲ್ಲಿ ಬೆಳಗಬೇಕಾದ ಹುತಾತ್ಮರು.

ಜೈ ಹಿಂದ್…
ವಂದೇ ಮಾತರಂ…
ಭಾರತ್ ಮಾತಾಕಿ ಜೈ…

ಅನ್ವೇಶ್ ಕೇಕುಣ್ಣಾಯ, ಹವ್ಯಾಸಿ ಬರಹಗಾರು
error: Content is protected !!