21 ಹಾಸಿಗೆಯ ಐ.ಸಿ.ಯು ಹಾಗು 5 ಹಾಸಿಗೆಯ ಡಯಾಲಿಸಿಸ್ ಕೇಂದ್ರ ಶೀಘ್ರದಲ್ಲೇ ಆರಂಭ

ಸೋಮವಾರಪೇಟೆ ಏ.3 : ತಾಲ್ಲೂಕು ಕೇಂದ್ರ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ 21 ಹಾಸಿಗೆಯ ಐ.ಸಿ.ಯು ಹಾಗೂ 5 ಹಾಸಿಗೆಯ ಡಯಾಲಿಸಿಸ್ ಕೇಂದ್ರ ಸಿದ್ಧವಾಗುತ್ತಿದ್ದು ಸದ್ಯದಲ್ಲೇ ಕಾರ್ಯಾರಂಭವಾಗಲಿದೆ ಎಂದು ಶಾಸಕ ಎಂ.ಪಿ. ಅಪಚ್ಚು ರಂಜನ್ ತಿಳಿದರು.
131ಲಕ್ಷ ರೂ ವೆಚ್ಚದಲ್ಲಿ ನಡೆಯುತ್ತಿರುವ ಯೋಜನೆಯನ್ನು ಪರಿಶೀಲಿಸಿದ ಶಾಸಕರು ಮಾಧ್ಯಮದೊಂದಿಗೆ ಮಾತನಾಡಿದರು. ಕೋವಿಡ್ ನಂತರ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಆಸ್ಪತ್ರೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ ಆ ಹಿನ್ನಲೆಯಲ್ಲಿ ಈ ಆಸ್ಪತ್ರೆಯಲ್ಲಿ 21 ಹಾಸಿಗೆಯ ಐ.ಸಿ.ಯು ಸಿದ್ಧಗೊಳ್ಳುತ್ತಿದ್ದು ಇಂಕ್ಯೂಬೆಟರ್ ಸಹಿತ ಎಲ್ಲಾ ಚಿಕಿತ್ಸೆ ಲಭ್ಯವಾಗಲಿದೆ.

ಈ ಹಿಂದೆ ಇದ್ದ 3 ಹಾಸಿಗೆ ಇದ್ದ ಡಯಾಲಿಸಿಸ್ ಚಿಕಿತ್ಸೆಯನ್ನು 5 ಹಾಸಿಗೆಗೆ ಹೆಚ್ಚಿಸಲಾಗುತ್ತಿದೆ ಎಂದ ಅವರು ಈ ಎಲ್ಲಾ ಚಿಕಿತ್ಸೆಗಳಿಗೂ ತಜ್ಞ ಸಿಬ್ಬಂದಿಗಳನ್ನು ನೇಮಿಸಲಾಗಿದೆ ಎಂದರು.
ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸತೀಶ್ ಮಾತನಾಡಿ ನಿರ್ಮಾಣವಾಗುತ್ತಿರುವುದರಿಂದಾಗಿ ತುರ್ತು ಹಾಗೂ ಗಂಭೀರ ಕಾಯಿಲೆ ಗಳಿಗೂ ಇಲ್ಲಿ ಚಿಕಿತ್ಸೆ ನೀಡಬಹುದೆಂದರು. ಮೇಲ್ಬಾಗದಲ್ಲಿದ್ದ ಪುರುಷರ ವಾರ್ಡನ್ನು ಸ್ಥಳಾಂತರಿಸಿ ಐ.ಸಿ.ಯು ಸಿದ್ಧಗೊಳಿಸಲಾಗುತ್ತಿದೆ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಅಳವಡಿಸಲಾಗುತ್ತಿದೆ ಎಂದರು. ಒಂಬತ್ತು ಮಂದಿಗೆ ಡಯಾಲಿಸಿಸ್ ಈ ಹಿಂದೆ 3 ಬೆಡ್ ಗಳಲ್ಲಿ ಎರಡು ಹಂತದಲ್ಲಿ ಮಾಡಲಾಗುತ್ತಿತ್ತು ಪ್ರಸ್ತುತ ಐದು ಬೇಡಡ್ಗಳಲ್ಲಿ ಇಪ್ಪತೈದು ಮಂದಿದೆ ಡಯಾಲಿಸಿಸ್ ಮಾಡಲಾಗುತ್ತಿದ್ದು ಎಲ್ಲಾ ರೋಗಿಗಳಿಗೂ ಚಿಕಿತ್ಸೆ ದೊರಕುತಿದೆ ಎಂದು ಮಾಹಿತಿ ನೀಡಿದರು.