2 ವಾರ ಧರ್ಮಸ್ಥಳ ಸಂಘ ಸಾಲ ಪಾವತಿ ರಿಯಾಯಿತಿ

ಶ್ರೀ ಧರ್ಮಸ್ಥಳ ಸಂಘದ ಸದಸ್ಯರಿಗೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಈ ಕರೋನಾ ಸಂದರ್ಭದಲ್ಲಿ ಸಿಹಿ ಸುದ್ದಿ ನೀಡಿದ್ದಾರೆ.
ಸರ್ಕಾರ ಜನತಾ ಕರ್ಫ್ಯೂ ಹೇರಿರುವ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದೆ. ದುಡಿಯುವ ಕೈಗಳಿಗೆ ಕೆಲಸ ಇಲ್ಲದಾಗಿದೆ.
ಸಣ್ಣಪುಟ್ಟ ವ್ಯಾಪಾರಿಗಳಿಗೆ ವ್ಯಾಪಾರವಿಲ್ಲ,
ಬಡವರಿಗೆ ಕೆಲಸ ಕಾರ್ಯವಿಲ್ಲ. ಪ್ರತಿ ದಿನ ಬದುಕು ಮಾಡುವುದೇ ಕಷ್ಟವಾಗಿದೆ. ಈ ನಡುವೆ ಧರ್ಮಸ್ಥಳ ಸಂಘ ಸೇರಿದಂತೆ ಹಲವು ಸಾಲ ಮಾಡಿರುವವರು 2 ವಾರ ಸಾಲದ ಕಂತು ಕಟ್ಟಬೇಕಿಲ್ಲ ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯಸ್ಥರಾದ ವೀರೇಂದ್ರ ಹೆಗ್ಗಡೆ ಅವರು ಈ ರಿಯಾಯಿತಿ ಘೋಷಿಸಿದ್ದಾರೆ.
ಸ್ವಸಹಾಯ ಸಂಘದ ಸದಸ್ಯರು ಯಾವುದೇ ಚಟುವಟಿಕೆಗಳು,
ಮೀಟಿಂಗ್ ನಡೆಸುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ.

error: Content is protected !!