15 ವರ್ಷ ಮೇಲ್ಪಟ್ಟ ವಾಹನಗಳು ಅತಿ ಹೆಚ್ಚಿರುವ ರಾಜ್ಯಗಳ ಪೈಕಿ ಕರ್ನಾಟಕಕ್ಕೆ ಅಗ್ರ ಸ್ಥಾನ…!

ಹೊಸದಿಲ್ಲಿ : ದೇಶದಲ್ಲಿ 15 ವರ್ಷಕ್ಕಿಂತ ಹಳೆಯದಾದ ನಾಲ್ಕು ಕೋಟಿಗಳಿಗಿಂತಲೂ ಅಧಿಕ ವಾಹನಗಳು ಬಳಕೆಯಲ್ಲಿದ್ದು, ಇವುಗಳ ಪೈಕಿ 70 ಲಕ್ಷಕ್ಕಿಂತಲೂ ಹೆಚ್ಚು ವಾಹನಗಳು ಕರ್ನಾಟಕದಲ್ಲಿವೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹಸುರು ಕರಕ್ಕೆ ಅರ್ಹವಾದ 15 ವರ್ಷ ಗಳಿಗಿಂತ ಹಳೆಯ ವಾಹನ ಗಳ ಅಂಕಿ  ಅಂಶ ವನ್ನು ಡಿಜಿಟಲ್‌ ಆಗಿಸಿದೆ. ಆದರೆ ಸದ್ಯ ಆಂಧ್ರ, ಮಧ್ಯಪ್ರದೇಶ, ತೆಲಂಗಾಣ ಮತ್ತು ಲಕ್ಷದ್ವೀಪಗಳ ಅಂಕಿಅಂಶ ಇದರಲ್ಲಿ ಸೇರಿಲ್ಲ. ಈ ಅಂಕಿಅಂಶಗಳ ಪ್ರಕಾರ ದೇಶಾದ್ಯಂತ ಇರುವ ಹಳೆಯ ವಾಹನಗಳ ಪೈಕಿ 2 ಕೋಟಿಗೂ ಅಧಿಕ ವಾಹನಗಳು 20 ವರ್ಷಗಳಿಗಿಂತ ಹಳೆಯವು.

ಹಳೆಯ ವಾಹನಗಳು ಹೆಚ್ಚಿರುವ ರಾಜ್ಯಗಳಲ್ಲಿ ಕರ್ನಾಟಕ ಮೊದಲ ಸ್ಥಾನ ದಲ್ಲಿದ್ದರೆ 56.54 ಲಕ್ಷ ವಾಹನಗಳಿರುವ ಉ. ಪ್ರದೇಶ ದ್ವಿತೀಯ, 49.93 ಲಕ್ಷ ಹಳೆಯ ವಾಹನಗಳಿರುವ ದಿಲ್ಲಿ ತೃತೀಯ ಸ್ಥಾನಗಳಲ್ಲಿವೆ. ಕೇರಳದಲ್ಲಿ 34.64 ಲಕ್ಷ ಇಂತಹ ಹಳೆಯ ವಾಹನಗಳಿವೆ.

error: Content is protected !!