15 ದಿನದಲ್ಲಿ ಸಿಲಿಂಡರ್ ಬೆಲೆ 100 ಏರಿಕೆ

ನವದೆಹಲಿ: ಗೃಹಬಳಕೆ ಎಲ್ಪಿಜಿ ಸಿಲಿಂಡರ್ ದರ ಮತ್ತೆ ಏರಿಕೆಯಾಗಿದೆ. ಕಳೆದ 15 ದಿನದಲ್ಲಿ 100 ರೂ. ಹೆಚ್ಚಳವಾಗಿದೆ.

ದಿಢೀರ್ 50 ಏರಿಕೆಯಾಗಿದ್ದ ದರ ಬುಧವಾರ ಮತ್ತೆ ಹೆಚ್ಚಳವಾಗಿದೆ. ತೈಲ ಕಂಪನಿಗಳಿಂದ ಗ್ರಾಹಕರಿಗೆ ಶಾಕ್ ಮತ್ತೊಂದು ನೀಡಲಾಗಿದ್ದು, ಸಿಲಿಂಡರ್ ದರವನ್ನು ಮತ್ತೆ 50 ರೂಪಾಯಿ ಹೆಚ್ಚಳ ಮಾಡಲಾಗಿದೆ. ಡಿಸೆಂಬರ್ 2 ರಿಂದ ಸಾರ್ವಜನಿಕ ಸ್ಥಳ ಕಂಪನಿಗಳು ಎಲ್ಪಿಜಿ ದರ ಹೆಚ್ಚಳ ಮಾಡಿದ್ದವು. ಜುಲೈನಲ್ಲಿ ಕೊನೆಯ ಬಾರಿಗೆ ದರ ಪರಿಷ್ಕರಣೆ ಯಾಗಿತ್ತು. ಈ ಡಿಸೆಂಬರ್ ನಲ್ಲಿ ಎರಡು ಸಲ ದರ ಪರಿಷ್ಕರಣೆ ಮಾಡಿದ್ದು, ಪ್ರತಿ ಸಿಲಿಂಡರ್ ಗೆ 100 ರೂಪಾಯಿ ಹೆಚ್ಚಳ ಮಾಡಲಾಗಿದೆ.

5 ಕೆಜಿ ಸಿಲಿಂಡರ್ ದರ 18 ರೂ., 19 ಕೆಜಿ ಸಿಲಿಂಡರ್ ದರ 36 ರೂ. ಜಾಸ್ತಿ ಆಗಿದೆ. ಪ್ರತಿ ಕುಟುಂಬಕ್ಕೆ ವರ್ಷಕ್ಕೆ 12 ಗೃಹಬಳಕೆಯ ಸಿಲಿಂಡರ್ ಗೆ ಸರ್ಕಾರ ನೀಡುತ್ತಿದ್ದ ಸಬ್ಸಿಡಿಯನ್ನು ಕಳೆದ ಆರು ತಿಂಗಳಿನಿಂದ ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗಿದೆ.

error: Content is protected !!