144 ಸೆಕ್ಷನ್: ಶನಿವಾರಸಂತೆ, ಕೂಡಿಗೆಯಲ್ಲಿ ಬಿಕೋ ಎನ್ನುತ್ತಿರುವ ವಾರದ ಸಂತೆ

ಕೊಡಗು ಜಿಲ್ಲೆಯಲ್ಲಿ ಇಂದು ನಾಲ್ಕನೆಯ ದಿನ 144 ಸೆಕ್ಷನ್ ಮುಂದುವರೆದಿದ್ದು, ಸೋಮವಾರಪೇಟೆ ತಾಲ್ಲೂಕಿನ ಮೆಣಸಿನ ಮಾರುಕಟ್ಟೆಗೆ ಹೆಸರುವಾಸಿಯಾಗಿರುವ ಶನಿವಾರಸಂತೆಯ ವಾರದ ಮಾರುಕಟ್ಟೆ ವ್ಯಾಪಾರ ವಹಿವಾಟುಗಳಿಲ್ಲದೇ ಬಿಕೋ ಎನ್ನುತ್ತಿದೆ.

ಇತ್ತ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾಮ ಪಂಚಾಯ್ತಿಯ ಕೂಡಿಗೆ ವಾರದ ಸಂತೆ ಸಹ ತರಕಾರಿ, ಹಣ್ಣು,ದಿನಸಿ ವ್ಯಾಪಾರಿಗಳು ಅಂಗಡಿ ತೆರೆಯದೆ ಖಾಲಿ ಹೊಡೆಯುತ್ತಿದೆ,ಅದಲ್ಲದೆ ಅಲ್ಲದೆ ಅಲ್ಲಿ ಟೊಮೇಟೊ, ಈರುಳ್ಳಿ ಮಾರಾಟ ಮಾಡುವವರು ಆಟೋಗಳಲ್ಲಿ ಬೀದಿಬೀದಿಗೆ ತೆರಳಿ ಮಾರಾಟ ಮಾಡುತ್ತಿದ್ದಾರೆ. ನಿಷೇಧಾಜ್ಞೆ ಮಾಂಸ ,ಮೀನು ಮಾರಾಟಕ್ಕೆ ಯಾವುದೇ ಹೊಡೆತ ಬಿದಿಲ್ಲ.

error: Content is protected !!