131ನೇ ಜಯಂತ್ಯುತ್ಸವ ಪ್ರಯುಕ್ತ ನಡೆದ ಕಾರ್ಯಕ್ರಮ

ಶನಿವಾರಸಂತೆಯ ಹಾರೆಹಸೂರಿನಲ್ಲಿ ಅರ್ಥಪೂರ್ಣವಾಗಿ ಡಾ.ಬಿ.ಆರ್ ಅಂಬೇಡ್ಕರ್ ರವರ 131ನೇ ಜಯಂತ್ಯುತ್ಸವ ನಡೆಯಿತು.
ಕಾರ್ಯಕ್ರಮವನ್ನು ಮನಹಳ್ಳಿ ಮಠದ ಶ್ರೀ ಮಹಂತ ಶಿವಲಿಂಗ ಸ್ವಾಮಿಗಳು ಹಾರೇಹೊಸೂರು ಸರ್ಕಾರಿ ಶಾಲೆಯ ಎಲ್ಲಾ ಮಕ್ಕಳಿಗೆ ಪೆನ್ನು, ಪೆನ್ಸಿಲ್ ನೀಡುವ ಮೂಲಕ ಉದ್ಗಾಟನೆ ಮಾಡಿದರು.
ಇದೇ ವೇಳೆ ಶನಿವಾರಸಂತೆಯ ಭಾರತಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಎಂ.ಎನ್ ಹರೀಶ್ ಅಂಬೇಡ್ಕರ್ ರವರ ವಿಚಾರ ಹಾಗು ಚಿಂತನೆ ಬಗ್ಗೆ ಮಾಹಿತಿ ನೀಡಿದರು. ದಿವಂಗತ ಪವರ್ ಸ್ಟಾರ್ ಸ್ಮರಣಾರ್ಥ ನೇತ್ರಧಾನದ ಅಭಿಯಾನ ಮತ್ತು ನೊಂದಣಿ, ಕೊವಿಡ್ ಸಂದರ್ಭ ಕಾರ್ಯ ನಿರ್ವಾಹಿಸಿರುವ ಆರೋಗ್ಯ ಇಲಾಖೆಯ ಸಿಬ್ಬಂಧಿಗಳು, ಆಶಾಕಾರ್ಯಕರ್ತರಿಗೆ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಮುಕ್ತ ಕಬಡ್ಡಿ ಪಂದ್ಯಾವಳಿ ನಡೆಯಿತು