fbpx

11 ನಿಮಿಷಗಳು ಮಾತ್ರ ಅತ್ಯಾಚಾರ ಮಾಡಿದನೆಂದು ಶಿಕ್ಷೆ ಕಡಿಮೆ ಮಾಡಿದ ಕೋಟ್೯!

ಬಾಸೆಲ್ (ಸ್ವಿಜರ್​ಲ್ಯಾಂಡ್​): ವ್ಯಕ್ತಿಯೊಬ್ಬ 11 ನಿಮಿಷ ಮಾತ್ರ ಅತ್ಯಾಚಾರ ನಡೆಸಿದ್ದ ಎನ್ನುವ ಕಾರಣಕ್ಕೆ ಇಲ್ಲಿಯ ಕೋರ್ಟ್​ ಆತನ ಶಿಕ್ಷೆಯನ್ನು ಕಡಿಮೆ ಮಾಡಿರುವ ಘಟನೆ ನಡೆದಿದ್ದು, ಇದೀಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಜೈಲು ಶಿಕ್ಷೆಯನ್ನು ಕಡಿಮೆ ಮಾಡಿರುವ ಸ್ವಿಸ್ ಮೇಲ್ಮನವಿ ನ್ಯಾಯಾಲಯದ ವಿರುದ್ಧ ಭಾರಿ ಪ್ರತಿಭಟನೆ ಶುರುವಾಗಿದ್ದು, ಅತ್ಯಾಚಾರಿಯ ಶಿಕ್ಷೆಯನ್ನು ಹೆಚ್ಚು ಮಾಡುವಂತೆ ಕೋರ್ಟ್​ ಅನ್ನು ಆಗ್ರಹಿಸಲಾಗುತ್ತಿದೆ. ಬಾಸೆಲ್ ಕೋರ್ಟ್​ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ನೆರೆದಿದ್ದು, ಅವರು ಅಪರಾಧಿಯ ಶಿಕ್ಷೆ ಹೆಚ್ಚಳಕ್ಕೆ ಆಗ್ರಹಿಸುತ್ತಿದ್ದಾರೆ.

ಬ್ಯಾನರ್ಗಳನ್ನು ಹಿಡಿದಿರುವ ಪ್ರತಿಭಟನಾಕಾರರು, ’11ನಿಮಿಷಗಳು ತುಂಬಾ ಹೆಚ್ಚು!’ ಎಂದು ಕೂಗುವ ಮೂಲಕ 33 ವರ್ಷದ ಅಪರಾಧಿಯ ಶಿಕ್ಷೆ ಹೆಚ್ಚಳಕ್ಕೆ ಆಗ್ರಹಿಸಿದ್ದಾರೆ.

ಕಳೆದ ವರ್ಷ ಈ ರೇಪ್​ ಇಲ್ಲಿಯ ನೈಟ್ ಕ್ಲಬ್ ಒಂದರಲ್ಲಿ ನಡೆದಿದೆ. 17 ರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ. ಕೆಳಹಂತದ ಕೋರ್ಟ್​ ಈ ಅತ್ಯಾಚಾರಿಗೆ 4 ವರ್ಷ ಮತ್ತು ಮೂರು ತಿಂಗಳಿನ ಶಿಕ್ಷೆ ನೀಡಿತ್ತು. ಇದನ್ನು ಆತ ಮೇಲ್ಮನವಿ ಮೂಲಕ ಪ್ರಶ್ನಿಸಿದ್ದ.

ಕೋರ್ಟ್​ ಈ ಶಿಕ್ಷೆಯನ್ನು ಮೂರು ವರ್ಷಗಳಿಗೆ ಇಳಿಸಿದೆ. ಇದಕ್ಕೆ ಅದು ನೀಡಿರುವ ಕಾರಣ ಆತ ಕೇವಲ 11 ನಿಮಿಷ ಮಾತ್ರ ರೇಪ್​ ಮಾಡಿದ್ದಾನೆ ಎಂದು. ಆದ್ದರಿಂದ ಪ್ರತಿಭಟನೆ ಶುರುವಾಗಿದೆ.

error: Content is protected !!