10 ಲಕ್ಷ ರೂ‌. ಮೌಲ್ಯದ ಮಾದಕ ವಸ್ತು ಹಶೀಶ್ ಆಯಿಲ್ ವಶ : ಮೂವರು ಆರೋಪಿಗಳ ಬಂಧನ

ಸಾಂದರ್ಭಿಕ ಚಿತ್ರ

ಬಂಧಿತರಿಂದ 1.116 ಗ್ರಾಂ ಹಶೀಶ್ ಆಯಿಲ್ ವಶ. 10 ಲಕ್ಷ ರೂ ಮೌಲ್ಯದ ಹಶೀಶ್ ಆಯಿಲ್ ವಶ ಪಡಿಸಿಕೊಳ್ಳಲಾಗಿದೆ. ಭಾಗಮಂಡಲ ಠಾಣಾ ಪೊಲೀಸರಿಂದ ಕಾರ್ಯಾಚರಣೆ ನಡೆಯಿತು.

ಭಾಗಮಂಡಲ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಕಾರಿನ ತಪಾಸಣೆ ನಡೆಸಿದ ವೇಳೆಯಲ್ಲಿ ವಿವಿಧ ನಂಬರ್ ಪ್ಲೇಟ್‌ಗಳು ಪತ್ತೆಯಾಗಿದೆ. ಕಾರಿನ ಡಿಕ್ಕಿಯಲ್ಲಿ ಪ್ಲಾಸ್ಟಿಕ್ ಬಾಟಲಿಯಲ್ಲಿ ಹಶೀಶ್ ಆಯಿಲ್ ಪತ್ತೆಯಾಗಿದೆ.

ಬಂಧಿತ ಆರೋಪಿಗಳು ಕೇರಳ ಮೂಲದ ಅಹ್ಮದ್ ಕಬೀರ್ (37), ಅಬ್ದುಲ್ ಖಾದರ್ (27), ಮಹಮ್ಮದ್ ಮುಜಾಬಿಲ್ (22) ಎಂದು ತಿಳಿದು ಬಂದಿದೆ.

ಆಂಧ್ರಪ್ರದೇಶದ ಗುಂಟೂರಿನಿಂದ ಮಾದಕ ದ್ರವ್ಯ ತಂದಿರುವುದಾಗಿ ಹೇಳಿಕೆ ನೀಡಿರುವ ಆರೋಪಿಗಳು ಮಾಲು ಸಮೇತ ಪೊಲೀಸರ ವಶದಲ್ಲಿ ಇದ್ದಾರೆ.

ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ಎ ಅಯ್ಯಪ್ಪ ಮಾಹಿತಿ ನೀಡಿ, ಆರೋಪಿ ಅಹ್ಮದ್ ಕಬೀರ್ ವಾಹನ ಕಳ್ಳತನ, ರಾಬರಿ, ಹನಿಟ್ರ್ಯಾಪ್ ನಲ್ಲಿ ಸಕ್ರಿಯವಾಗಿದ್ದ ಎಂದರು.

error: Content is protected !!