1.35 ಲಕ್ಷ ರೂ ಮೌಲ್ಯದ ಔಷಧಿ ಹಸ್ತಾಂತರ

ಕೊಡಗು: ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘ ವತಿಯಿಂದ ಕೋವಿಡ್ 19 ಹಿನ್ನೆಲೆ ಜಿಲ್ಲಾಡಳಿತಕ್ಕೆ 1.35 ಲಕ್ಷ ರೂ ಮೌಲ್ಯದ ಔಷಧಿಯನ್ನು ಇಂದು ಹಸ್ತಾಂತರಿಸಿದರು.
ಕೋವಿಡ್ 19 ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಅತ್ಯವಶ್ಯಕವಾಗಿ ಬೇಕಿರುವ ಮಾತ್ರೆಗಳನ್ನು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರಿಗೆ ನಗರದ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ಅಂಬೆಕಲ್ ಜೀವನ್ ಕುಶಾಲಪ್ಪ ಅವರು ಹಸ್ತಾಂತರಿಸಿದರು.